ಕಲಬುರಗಿ, ಮಾ. 11: ಕಲ್ಯಾಣ ಕರ್ನಾಟಕ ಪ್ರದೇಶದ ಜನರ ಮೀಸಲಾತಿಯನ್ನ ಅರ್ಹ ಅಭ್ಯರ್ಥಿ ಸಿಗದಿದ್ದರೆ ಬೇರೆಯವರಿಗೆ ನೀಡುವ ಸಂಪುಟ ಉಪಸಮಿತಿಯ ನಿರ್ಣಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಿಂಪಡೆದದ್ದು ಸ್ವಾಗತಾರ್ಹವಾಗಿದೆ ಎಂದು ಮಾಜಿ ಸಚಿವರಾದ, ಶಾಸಕರಾದ ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಹೇಳಿದ್ದಾರೆ.
ಸಾರಿಗೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಚಿವರಾದ ಹಾಗೂ ಸಚಿವ ಸಂಪುಟದ ಉಪಸಮಿತಿ ( 371 ಎ ) ಅಧ್ಯಕ್ಷರಾದ ಬಿ. ಶ್ರೀರಾಮುಲು ಅವರ ಅಧ್ಯಕ್ಷತೆಯಲ್ಲಿ ದಿನಾಂಕ 03.03.2022 ರಂದು ನಡೆದ ಸಭೆಯಲ್ಲಿ ಅರ್ಹ ಅಭ್ಯರ್ಥಿ ಸಿಗದಿದ್ದರೆ ಬೇರೆಯವರಿಗೆ ನೀಡುವ ನಿರ್ಣಯ ಕೈಗೊಳ್ಳಲಾಗಿತ್ತು.
ಈ ಕುರಿತು ಅವರು ಸಂಪುರ್ಣ ಉಪಸಮಿತಿಯ ನಿರ್ಣಯವನ್ನು ತಾವು ಖಂಡಿಸಿ ಸಿಎಂ ಅವರಿಗೆ ಮನವಿ ಸಲ್ಲಿಸಿ ಹೈ ಕ ಭಾಗದ ಅಭ್ಯರ್ಥಿ ಗಳಿಗೆ / ನೌಕರರಿಗೆ ಆಗುವ ಅನ್ಯಾಯದ ಬಗ್ಗೆ ಮನವರಿಕೆ ಮಾಡಿಕೊಟ್ಟ ನಂತರ ಸಿಎಂ ಸದರಿ ನಿರ್ಣಯವನ್ನು ಹಿಂಪಡೆದಿದ್ದಾರೆ ಎಂದು ಪ್ರಿಯಾಂಕ್ ಹೇಳಿದರು.
ಕಲ್ಯಾಣ ಕರ್ನಾಟಕ ವಿರೋಧಿ ನೀತಿಯನ್ನ ನನ್ನ ಮನವಿಗೆ ಸ್ಪಂದಿಸಿ ಮುಖ್ಯಮಂತ್ರಿಗಳು ಹಿಂಪಡೆದಿರುವುದು ಸ್ವಾಗತಾರ್ಹ. ನಮ್ಮ ಭಾಗದ ಯುವಕರ ಭವಿಷ್ಯದ ಕುರಿತು ಕಾಂಗ್ರೆಸ್ ಈ ಬಿಜೆಪಿ ಸರ್ಕಾರಕ್ಕೆ ಕಿವಿ ಹಿಂಡದಿದ್ದರೆ ಅಭಿವೃದ್ಧಿಪೂರಕ ನಿರ್ಣಯಗಳು ಹೊರಬರುವುದೇ ಇಲ್ಲ ಎಂದು ಹೇಳಿದ್ದಾರೆ
ನಮ್ಮ ಭಾಗದ ಅಭಿವೃದ್ಧಿಗಾಗಿ ಸಕಲ ಶಕ್ತಿಯನ್ನ ವಿನಿಯೋಗಿಸಲು ಕಾಂಗ್ರೆಸ್ ಪಕ್ಷ ಹಾಗೂ ನಾವು ಸದಾ ಸಿದ್ದರಿದ್ದು, ಇಂತಹ ಅಚಾತುರ್ಯಗಳನ್ನ ಪುನರಾವರ್ತನೆಯಾಗದಂತೆ ತಡೆಯಲು, ನಮ್ಮ ಪ್ರದೇಶದ ವಿಚಾರಗಳಲ್ಲಿ ನಮ್ಮ ಮಾತನ್ನು ಕೇಳುವ ಔದಾರ್ಯತೆಯನ್ನ ಇನ್ನು ಮುಂದಾದರೂ ಈ ಬಿಜೆಪಿ ಸರ್ಕಾರ ತೋರಲಿ” ಎಂದು ಅವರು ಹೇಳಿದ್ದಾರೆ
ನಮ್ಮ ಯುವಕರನ್ನ ನಶೆ, ಗಾಂಜಾ ಹಾಗೂ ಮಟ್ಕಾ ಕಡೆ ಕರೆದೊಯ್ಯಲು ಬಿಜೆಪಿ ನಾಯಕರು ಉತ್ಸುಕರಾಗಿದ್ದಾರೆಯೇ ಹೊರತು ಉದ್ಯೋಗ ಒದಗಿಸುವತ್ತ ಹಾಗೂ ಸ್ವಾವಲಂಬಿಗಳಾಗಿಸುವ ಕಡೆ ಇವರ ಗಮನ ಚೂರೂ ಇಲ್ಲದಾಗಿದೆ. ಈಗಾಗಲೇ PSI ಹಾಗೂ ಈಆಅ ನೇಮಕಾತಿಯಲ್ಲಿ ಆಗಿರುವ ಅಕ್ರಮದಿಂದಾಗಿ ನಮ್ಮ ಭಾಗದ ಯುವಕರು ಕಂಗೆಟ್ಟು ಹೋಗಿದ್ದಾರೆ. ಇದೇ ರೀತಿ ಮಲತಾಯಿ ಧೋರಣೆ ಮುಂದುವರೆಯುತ್ತಲೇ ಇದ್ದರೆ ಜನ ರೊಚ್ಚಿಗೇಳುವ ದಿನಗಳು ದೂರವಿಲ್ಲ ಎಂದು ಪ್ರಿಯಾಂಕ್ ಖರ್ಗೆ ಸರ್ಕಾರವನ್ನು ಎಚ್ಚರಿಸಿದ್ದಾರೆ.
Home Featured Kalaburagi ಬಿಜೆಪಿ ಸರಕಾರಕ್ಕೆ ಕಿವಿ ಹಿಂಡದಿದ್ದರೆ ಅಭಿವೃದ್ಧಿ ಪೂರ್ವಕ ನಿಣರ್ಯಗಳು ಹೊರಬರುವುದೇ ಇಲ್ಲ:ಪ್ರಿಯಾಂಕ್ ಖರ್ಗೆ