ಪಂಚ್ ರಾಜ್ಯಗಳ ಚುನಾವಣೆ 4 ರಾಜ್ಯಗಳಲ್ಲಿ ಬಿಜೆಪಿ ಮುನ್ನಡೆ

0
643

ನವದೆಹಲಿ, ಮಾ. 09: ಇತ್ತಿಚೆಗೆ ಜರುಗಿದ 5 ರಾಜ್ಯಗಳ ವಿಧಾನಸಭೆ ಚುನಾವಣೆಯ ಮತ ಏಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಉತ್ತರ ಪ್ರದೇಶ ಸೇರಿದಂತೆ 4 ರಾಜ್ಯಗಳಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬರುವ ಸ್ಪಷ್ಟ ಲಕ್ಷಣಗಳು ಈವರೆಗಿನ ಮುನ್ನಡೆಯಿಂದ ತಿಳಿದುಬಂದಿದೆ.
ಗೋವಾದಲ್ಲಿ ಆಡಳಿತದಲ್ಲಿರುವ ಬಿಜೆಪಿ ತನ್ನ ಅಸ್ವಿತ್ವವನ್ನು ಉಳಿಸಿಕೊಳ್ಳುವಲ್ಲಿ ಬಹುತೇಕ ಯಶಸ್ವಿಯಾಗಿದ್ದು, ಇಲ್ಲಿ 40 ವಿಧಾನಸಭಾ ಕ್ಷೇಗಳ ಪೈಕಿ ಮ್ಯಾಜಿಕ್ ನಂ. 21ಕ್ಕೆ ಬಿಜೆಪಿ ತಲುಪಿದ್ದು, ಒಂದು ಹಂತದಲ್ಲಿ ಮ್ಯಾಜಿಕ್ ಸಂಖ್ಯಗೆ ಬಂದಿದ್ದ ಕಾಂಗ್ರೆಸ್ ಇಲ್ಲಿ ಕೇವಲ 11 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಇಲ್ಲಿ ಆಪ್ ಖಾತೆ ತೆಗೆಯಲಿದ್ದು, ಇತರರು 6 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಉತ್ತರಾಖಂಡದಲ್ಲಿ ಬಿಜೆಪಿ – ಕಾಂಗ್ರೆಸ್ ಮಧ್ಯೆ ನೇರ ಹಣಾಹಣಿ ಆರಂಭದಲ್ಲಿ ಕಂಡುಬAದರೂ ಸಧ್ಯದ 70 ವಿಧಾನಸಭಾ ಬಲ ಹೊಂದಿರುವ ಈ ರಾಜ್ಯದಲ್ಲಿ ಬಿಜೆಪಿ 43 ಸ್ಥಾನಗಳಲ್ಲಿ ಮತ್ತು ಕಾಂಗ್ರೆಸ್ 23 ಇತರರು ಎರಡು ಕ್ಷೇತ್ರಗಳಲ್ಲಿ ಮುನ್ನಡೆಯಲಿದ್ದಾರೆ. ಆದರೂ ಬಹುತೇಕವಾಗಿ ಇಲ್ಲಿಯೂ ಕೂಡ ಬಿಜೆಪಿ ಆಡಳಿತ ಮತ್ತೆ ತನ್ನ ತೆಕ್ಕೆಗೆ ಪಡೆಯುವ ಲಕ್ಷಗಳು ಕಂಡುಬರುತ್ತಿವೆ.
ಇನ್ನು ದೇಶದಲ್ಲಿಯೆ ಮಹತ್ವ ಪಡೆದುಕೊಂಡಿದ್ದಲ್ಲದೇ ರಾಜಕೀಯ ದೃವೀಕರಣಕ್ಕೆ ದಿಕ್ಸೂಚಿಯಂತಿರುವ ಉತ್ತರ ಪ್ರದೇಶದಲ್ಲಿ ಮತ್ತೇ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತೇ ಎರಡನೇ ಬಾರಿಗೆ ಸಿಎಂ ಆಗಲಿರುವ ಬಗ್ಗೆ ಈ ವರೆಗೆ ಬಂದಿರುವ ಮತ ಏಣಿಕೆಯಲ್ಲಿನ ಮುನ್ನಡೆಗಳು ಸಾರಿವೆ.
ಪಂಜಾಬ್‌ನಲ್ಲಿ ತಮ್ಮ ಸ್ವಯಂಕೃತ ತಪ್ಪುಗಳಿಂದ ಕಾಂಗ್ರೆಸ್ ಇಲ್ಲಿ ಮನ್ನುಮುಕ್ಕಿದ್ದು, ನೆರೆಯ ದೆಹಲಿಯ ಆಪ್ ಸರಕಾರ ಇಲ್ಲಿ ತನ್ನ ಸಾಮ್ರಾಜ್ಯವನ್ನು ಇಲ್ಲಿಯೂ ವಿಸ್ತರಿಸಿದೆ.
ಪಂಚಾಬ್‌ನಲ್ಲಿ ಸಿಎಂ ಚರಣಜೀತ್‌ಸಿಂಗ್ ಚನ್ನ ಮತ್ತು ಕಾಂಗ್ರೆಸ್ ಪಂಜಾಬ್ ಅಧ್ಯಕ್ಷ ನವಜೋತಸಿಂಗ್ ಸಿದ್ದು ಬಹುತೇಕ ಸೋಲಿನ ಅಂಚಿನಲ್ಲಿದ್ದು, ಇಲ್ಲಿ ಕಾಂಗ್ರೆಸ್ ಹೀನಾಯ ಸ್ಥಿತಿಯಲ್ಲಿದ್ದು, ಕೇವಲ 18 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆಯಿದೆ.
ಶಿರೋಮಣಿ ಅಕಾಲಿದಲ ಮತ್ತು ಬಿಜೆಪಿ ಇಲ್ಲಿ ಗಣನೀಯ ಸಾಧನೆ ಮಾಡದೇ ಕ್ರಮವಾಗಿ 8 ಮತ್ತು 4 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ.
ಉತ್ತರ ಪ್ರದೇಶದಲ್ಲಿ ಅಖೀಲೇಶ ಯಾದವ ಮ್ಯಾಜಿಕ ಮಾಡಬಹುದೇನೋ ಎಂಬ ಲೆಕ್ಕಾಚಾರ ಮತ್ತೆ ತಲೆ ಕೆಳಗಾಗಿದ್ದು, ಇಲ್ಲಿ ಕಾಂಗ್ರೆಸ್ ಒಂದAಕ್ಕಿಯಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ.
ಇನ್ನು ಮಣಿಪುರದಲ್ಲಿಯೂ ಬಹುತೇಕ ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆಯಿದೆ. ಇಲ್ಲಿ ಯಾವ ಪಕ್ಷಕ್ಕೂ ಬಹುಮತ ದೊರೆಯದಿದ್ದರೂ ಇತರ 23 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಬಿಜೆಪಿ ಕೂಡ ಅಷ್ಟೇ ಸಂಖ್ಯೆಯಲ್ಲಿ ಮುನ್ನಡೆಯಲಿದ್ದು, ಕಾಂಗ್ರೆಸ್ 15 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಮಾರ್ಚ್ 8ರಂದು ಈ ಐದು ರಾಜ್ಯಗಳ ಮತದಾನೋತ್ತರ ಸಮೀಕ್ಷೆಗಳ ಬಹುತೇಕವಾಗಿ ನಿಜವಾಗಲಿವೆ.

LEAVE A REPLY

Please enter your comment!
Please enter your name here