ಕರ್ನಾಟಕ ಕೇಂದ್ರೀಯ ವಿವಿಯಿಂದ ಕೌಶಲ್ಯಾಭಿವೃದ್ಧಿ ಕುರಿತು ಹೊಸ ಕೋರ್ಸಗಳ ಆರಂಭ

0
787

ಕಲಬುರಗಿ.ಮಾ.09: ಆಳಂದ ತಾಲ್ಲೂಕಿನ ಕಡಗಂಚಿ ಬಳಿ ಇರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಪ್ರಸ್ತುತ ಸಾಲಿನಿಂದ ಕೌಶಲ್ಯಾಭಿವೃದ್ಧಿ ಕುರಿತು ಎರಡು ಹೊಸ ಕೋರ್ಸ್ಗಳನ್ನು ಪ್ರಾರಂಭಿಸಲಾಗಿದೆ ಎಂದು ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ್ ಅವರು ಹೇಳಿದರು.
ಬುಧವಾರ ನಗರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ಕೌಶಲ ವಿಕಾಸ್ ಯೋಜನೆಯಡಿ ಡಿಜಿಟಲ್ ಐಟಿ ಹೆಲ್ಪ್ ಡೆಸ್ಕ್ ಅಸಿಸ್ಟೆಂಟ್ ಹಾಗೂ ಹೆರಿಟೇಜ್ ಟೂರ್ (ಪ್ರವಾಸಿ) ಗೈಡ್ ಎಂಬ ಎರಡು ಹೊಸ ಕೋರ್ಸ್ಗಳನ್ನು ಪ್ರಾರಂಭಿಸಲಾಗಿದೆ ಎಂದರು.
ಎರಡೂ ಹೊಸ ಕೋರ್ಸಗಳಿಗೆ ಹತ್ತನೇ ಮತ್ತು ಪಿಯುಸಿ ದ್ವಿತೀಯ ವರ್ಷದ ಅರ್ಹ ವಿದ್ಯಾರ್ಥಿಗಳು ಅರ್ಹರಾಗಿದ್ದಾರೆ. ಡಿಜಿಟಲ್ ಐಟಿ ಹೆಲ್ಪ್ ಡೆಸ್ಕ್ ಅಸಿಸ್ಟೆಂಟ್ ಕೋರ್ಸ್ಗೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಹಾಗೂ ಹೆರಿಟೇಜ್ ಟೂರ್ ಗೈಡ್ ಕೋರ್ಸ್ಗೆ ಹತ್ತನೇ ತರಗತಿಯಲ್ಲಿ ಉತ್ತೀರ್ಣರಾಗಿದ್ದವರು ಅರ್ಹರು. ಹೀಗಾಗಿ ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅವರು ಹೇಳಿದರು.
ಕೋರ್ಸಗಳ ನಿರ್ವಹಣೆಗೆ ಪರಿಣಿತ ಸಮಿತಿಯನ್ನು ರಚಿಸಲಾಗಿದೆ. ನುರಿತರಿಂದ ಉಪನ್ಯಾಸ ಕೊಡಲಾಗುವುದು. ತರಬೇತಿಗೆ ತಕ್ಕಂತೆ ವಿಶ್ವವಿದ್ಯಾಲಯದಲ್ಲಿ ಪ್ರಯೋಗಾಲಯಗಳು ಇವೆ. ಕೋರ್ಸ್ ಮುಗಿದ ನಂತರ ಪ್ರಮಾಣಪತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಕೊಡಿಸುವಂತಹ ಭರವಸೆಯನ್ನು ಕೋರ್ಸಗಳು ಹೊಂದಿವೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕುಲಸಚಿವ ಬಸವರಾಜ್ ಡೊಣ್ಣೂರ್, ಸಾರ್ವಜನಿಕ ಸಂಪರ್ಕ ಅಧಿಕಾರಿ ದೀಪ್ತಿ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here