ಶೀಘ್ರವೇ ಕಲಬುರಿಯಲ್ಲಿ ಮಾಹಿತಿ ಆಯೋಗ ಕಚೇರಿ ಸ್ಥಾಪನೆಗೆ ಖರ್ಗೆ ಆಗ್ರಹ

0
765

ಕಲಬುರಗಿ., ಮಾ. 07: ಕಲಬುರಗಿ ನಗರಕ್ಕೆ ಮಂಜೂರಾಗಿರುವ ಕರ್ನಾಟಕ ಮಾಹಿತಿ ಆಯೋಗದ ಪೀಠವನ್ನು ಸ್ಥಾಪಿಸುವಂತೆ ಶಾಸಕÀ ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.

ಈ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಪ್ರಿಯಾಂಕ್ ಖರ್ಗೆ ಅವರು, ಕಲಬುರಗಿಯಲ್ಲಿ ಮಾಹಿತಿ ಆಯೋಗದ ಪೀಠ ಕಚೇರಿ ಸ್ಥಾಪನೆ ಕುರಿತಂತೆ ದಿನಾಂಕ 10.01.2019 ರಂದು ಆದೇಶಿಸಲಾಗಿದೆ. ಅದರಂತೆ ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನೀಯರ್, ಸಂಪರ್ಕ ಮತ್ತು ಕಟ್ಟಡಗಳು (ಈಶಾನ್ಯ) ಕಚೇರಿಯಲ್ಲಿನ ಖಾಲಿ ಕಟ್ಟಡದಲ್ಲಿ ಬಾಡಿಗೆ ಆಧಾರದ ಮೇಲೆ ಸದರಿ ಪೀಠ ಕಚೇರಿ ತೆರೆಯುವಂತೆ ದಿನಾಂಕ: 29-09-2021 ರಲ್ಲಿ ಅನುಮೋದನೆ ನೀಡಲಾಗಿರುತ್ತದೆ. ಆದರೆ ಇನ್ನೂ ಕೂಡಾ ಸದರಿ ಪೀಠ ಕಚೇರಿ ಪ್ರಾರಂಭಿಸಿಲ್ಲ.
ಮಾಹಿತಿ ಆಯೋಗದ ಪೀಠ ಕಚೇರಿ ಸ್ಥಾಪನೆಯಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾರ್ವಜನಿಕರಿಗೆ ರಾಜ್ಯದ ಆಡಳಿತ ಹತ್ತಿರವಾಗುವ ಮೂಲಕ ಸರ್ಕಾರಿ ಕೆಲಸ ಕಾರ್ಯಗಳನ್ನು ಕೂಡಲೇ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಆದರೆ, ಮಂಜೂರಾಗಿರುವ ಕಚೇರಿಯನ್ನು ಇನ್ನೂ ಪ್ರಾರಂಭಿಸದೇ ಇರುವುದು ಈ ಭಾಗಕ್ಕೆ ಅನ್ಯಾಯ ಮಾಡಿದಂತಾಗುತ್ತದೆ. ಆದ್ದರಿಂದ ಈ ಕೂಡಲೇ ಮಾಹಿತಿ ಆಯೋಗದ ಪೀಠ ಕಚೇರಿಯನ್ನು ಸ್ಥಾಪಿಸಬೇಕು ಎಂದು ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here