ಆಳಂದ ಪ್ರಕರಣ:ಸಾಮಾಜಿಕ ಜಾಲತಾಣಗಳ ಮೇಲೆ ಕಠಿಣ ಕ್ರಮ -ಯಶವಂತ ವಿ. ಗುರುಕರ್

0
1116

ಕಲಬುರಗಿ,ಮಾ.4: ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದರ‍್ಗಾದಲ್ಲಿನ ರಾಘವ ಚೈತನ್ಯ ಲಿಂಗ ಪೂಜೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಿ ಸಮಾಜದ ಶಾಂತಿ ಕದಡುವ ಸಾಮಾಜಿಕ ಜಾಲತಾಣಗಳ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ಈ ಕುರಿತಂತೆ ತಮ್ಮ ಕಚೇರಿಯಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. 1 ರಂದು ನಡೆದ ಪ್ರಕರಣದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ, ಮೃತರ ಅಂತ್ಯ ಸಂಸ್ಕಾರಕ್ಕೆ ಅವಕಾಶ ನೀಡುತ್ತಿಲ್ಲ ಹಾಗೂ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ನರ‍್ಲಕ್ಷ್ಯ ವಹಿಸಿದೆ ಎಂಬ ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿರುವುದನ್ನು ಗಮನಿಸಲಾಗಿದೆ. ಇದೆಲ್ಲವು ಸತ್ಯಕ್ಕೆ ದೂರವಾಗಿದೆ ಎಂದು ಸ್ಪಷ್ಟಪಡಿಸಿದ ಅವರು ಸುಳ್ಳು ಸುದ್ದಿ ಹರಡುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರಕರಣ ಕುರಿತಂತೆ ಮರ‍್ಚ್ 1 ರಂದು ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಆಳಂದ ಚಲೋ ಕರೆ ನೀಡಿದ ಕಾರಣ ಶಾಂತಿ ಸುವ್ಯಸ್ಥೆಗೆ ಧಕ್ಕೆಯಾಗುವ ಸಾಧ್ಯತೆ ಕಾರಣ ಶಾಂತಿ ಮತ್ತು ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ಎರಡು ಕೋಮಿನವರ 4-5 ಗುಂಪಿನೊಂದಿಗೆ ಪ್ರತ್ಯೇಕ ಶಾಂತಿ ಸಭೆ ಕರೆದು ಶಾಂತಿ ಕಾಪಾಡುವಂತೆ ಮತ್ತು ಜಿಲ್ಲಾಡಳಿತ ತೆಗೆದುಕೊಳ್ಳುವ ನರ‍್ಧಾರಕ್ಕೆ ತಾವು ಬದ್ಧರಾಗಬೇಕೆಂದು ತಿಳಿಸಿದಾಗ ಅದಕ್ಕೆ ಅವರು ಒಪ್ಪಿದರು. ಇದಲ್ಲದೆ ಮುಂಜಾಗ್ರತವಾಗಿ ತಾಲೂಕಿನಾದ್ಯಂತ 144 ನಿಷೇಧಾಜ್ಞೆ ಜಾರಿ ಮಾಡಿ ಪ್ರಚೋದನಕಾರಿ ಭಾಷಣ ಮಾಡುವ ಪ್ರಮೋದ ಮುತಾಲಿಕ ಮತ್ತು ಕು.ಚೈತ್ರಾ ಅವರನ್ನು ಜಿಲ್ಲೆಗೆ ಮತ್ತು ಶ್ರೀ ಸಿದ್ಧಲಿಂಗ ಸ್ವಾಮೀಜಿಗಳನ್ನು ಆಳಂದ ತಾಲೂಕು ಪ್ರವೇಶಕ್ಕೆ ನರ‍್ಬಂಧ ವಿಧಿಸಲಾಗಿತ್ತು ಎಂದರು.
ಇಷ್ಟಾಗಿಯೂ ಮರ‍್ಚ್ 1 ರಂದು ರ‍್ಗಾದಲ್ಲಿ ಎರಡು ಕೋಮಿನವರ ಒಪ್ಪಿಗೆಯಂತೆ ರ‍್ವ ರ‍್ಮ ಮತ್ತು ರ‍್ವ ಪಕ್ಷದವರು ಸೇರಿ 22 ಜನರಿಗೆ ಲಿಂಗ ಪೂಜೆ ಸಂರ‍್ಭದಲ್ಲಿ ರ‍್ಗಾ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು. ಪೂಜೆ ಮುಗಿಸಿ ಹೊರಬಂದ ಸಂರ‍್ಭದಲ್ಲಿ ಕೆಲ ಕಿಡಿಗೇಡಿಗಳು ರ‍್ಕಾರಿ ವಾಹನಗಳ ಮೇಲೆ ಕಲ್ಲೂ ತೂರಾಟ ಮಾಡಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಜಿಲ್ಲಾ ಪೊಲೀಸ್ ಅಧೀಕ್ಷಕಿ ಇಶಾ ಪಂತ್ ಮಾತನಾಡಿ 144 ನಿಷೇಧಾಜ್ಞೆ ಉಲ್ಲಂಘನೆ ಮತ್ತು ಕಲ್ಲು ತೂರಾಟ ಪ್ರಕರಣದಲ್ಲಿ ಇದೂವರೆಗೆ 6 ಎಫ್.ಐ.ಆರ್. ದಾಖಲಿಸಿ 9 ಜನ ಮಹಿಳೆಯರು ಸೇರಿದಂತೆ 165 ಜನರನ್ನು ಬಂಧಿಸಲಾಗಿದ್ದು, ಕಲ್ಲು ತೂರಾಟದ ಹಿಂದಿನ ಮಾಸ್ಟರ್ ಮೈಂಡ್ ಪತ್ತೆಗೆ ಜಾಲ ಬೀಸಿದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಕರಣದ ಹಿಂದಿನ ದಿನ (ಫೆ.28 ರಂದು) ಪ್ಯಾಟ್ರೋಲಿಂಗ್ ಸಮಯದಲ್ಲಿ ರ‍್ಗಾ ಆವರಣದಲ್ಲಿ ಅಪಾರ ಪ್ರಮಾಣದಲ್ಲಿ ಸಣ್ಣ ಕಲ್ಲುಗಳು, ಲಾಠಿ ಪತ್ತೆಯಾಗಿದ್ದವು. ಇವುಗಳನ್ನು ಅಂದೇ ಜಪ್ತಿ ಮಾಡಿ ಪ್ರಕರಣ ದಾಖಲಿಸಲಾಗಿತ್ತು. ಆಳಂದ ಸೂಕ್ಷ್ಮ ಪ್ರದೇಶವಾಗಿದ್ದರಿಂದ ನೆರೆಯ ಯಾದಗಿರಿ, ಬೀದರ ಸೇರಿದಂತೆ ಒಟ್ಟಾರೆ 900 ಪೊಲೀಸ್ ಸಿಬ್ಬಂದಿಗಳನ್ನು ಭದ್ರತೆಗೆ ನಿಯೋಜಿಸಲಾಗಿತ್ತು ಎಂದರು.

LEAVE A REPLY

Please enter your comment!
Please enter your name here