ಆತ್ಮೀಯ ಗೌರವಾನ್ವಿತ ಮತದಾರರಲ್ಲಿ ಕಳಕಳಿಯ ಮನವಿ

0
1078

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ ಕಲಬುರಗಿಗೆ ಭಾನುವಾರ ಫೆಬ್ರವರಿ 27, 2022 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ನಡೆಯುವ ಚುನಾವಣೆಯಲ್ಲಿ ನಮ್ಮ ಪೆನಾಲ್‌ನಿಂದ ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ತಮ್ಮ ಅಮೂಲ್ಯವಾದ ಮತ ನೀಡಿ ಬೆಂಬಲಿಸಬೇಕಾಗಿ ವಿನಂತಿ.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ನಾನು ಆಯ್ಕೆಯಾದರೂ ಕೂಡ ಮುಂದಿನ ಬಾರಿ ಮತ್ತೇ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಶಪಥ ಮಾಡುತ್ತೇನೆ. ಸಂಘ ಎಂದ ಮೇಲೆ ಎಲ್ಲರಿಗೂ ಅವಕಾಶ ಕೊಡಬೇಕು, ಹೊಸ ನೀರು ಬಂದಾಗ ಹಳೆ ನೀರು ತಾನೆ ಮುಂದೆ ಹರಿದು ಹೋಗುವಂತೆ ಹೊಸಬರಿಗೆ ಅವಕಾಶ ಮಾಡಿಕೊಟ್ಟು ಸಂಘಜೀವಿ ಆಗಬೇಕೆಂಬುದು ನನ್ನ ಆಶಯ.

ಈ ಹಿಂದೆ ಎರಡೆರಡು ಸಲ ನಮ್ಮ ಈ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಅಧ್ಯಕ್ಷರಾಗಿ ಆರು ವರ್ಷಗಳ ಅಧಿಕಾರ ನಡೆಸಿದವರು, ಮತ್ತೇ ಸ್ಪರ್ಧಿಸಿದರೆ ಬೇರೆಯವರು ಏನು ಮಾಡಬೇಕು? ಎಲ್ಲರಿಗೂ ಅವಕಾಶ ಬೇಕು, ಇದಾಗದಿದ್ದರೆ ರಾಜಕಾರಣಿಗಳಿಗೂ ನಮಗೂ ಏನು ವ್ಯತ್ತಾಸನೇ ಇರುವುದಿಲ್ಲ. ಆನೆ ನಡೆದಿದ್ದೆ ತನ್ನ ದಾರಿ ಎಂಬುವoತಾಗಿದೆ ನಮ್ಮ ಪರಿಸ್ಥಿತಿ.
ಜಾರಿ, ಮತ, ಬೇಧ, ಸಣ್ಣ, ದೊಡ್ಡ, ಭಾಷಾವಾರು ತಾರತಮ್ಯ ವೆಸಗದೆ ಎಲ್ಲರೂ ನಮ್ಮವರು, ನಾವು ಎಲ್ಲರಿಗಾಗಿ, ಎನ್ನುವ ನಿಟ್ಟಿನಲ್ಲಿ ಚುನಾವಣೆ ಸೌಹಾರ್ದಯುತವಾಗಿ, ನ್ಯಾಯಸಮ್ಮತವಾಗಿ, ಹಣದ ಸದ್ದು, ಹೆಂಡದ ವಾಸನೆ ಇಲ್ಲಿ ಬರಬಾರದು ಎನ್ನವದು ನನ್ನ ಧೋರಣೆಯಾಗಿದೆ.
ನಮ್ಮ ಪೆನಾಲ್‌ನಿಂದ ಸ್ಪರ್ಧಿಸಿದ ಒಂದಿಬ್ದರು ಬಿಟ್ಟರೆ ಎಲ್ಲವು ಹೊಸ ಮುಖಗಳೇ, ಅಲ್ಲದೇ ನಾನು ಕೂಡ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು ಇದೆ ಮೊದಲು ಬಾರಿಯಾಗಿದೆ. ಒಟ್ಟಿನಲ್ಲಿ ಒಂದೇ ಶಬ್ದದಲ್ಲಿ ಹೇಳಬೇಕಾದರೆ ಹೊಸಬರಿಗೆ ಅವಕಾಶ ಕೊಡಿ, ನಾನೇನು ಹೆಚ್ಚಿನದು ಹೇಳಲು ಹೋಗುವುದಿಲ್ಲ, ನಿಮ್ಮ ವಿಚಾರಧಾರೆಗೆ ಈ ನನ್ನ ಮನವಿ ಮನಮುಟ್ಟಿ ಸ್ಪಂದಿಸಿದರೆ ಸಾಕು ಅದು ಸಾರ್ಥಕವಾಗುತ್ತದೆ.
ಈಗಾಗಲೇ ಜಿಲ್ಲಾ ಘಟಕಕ್ಕೆ ಕೋಶಾಧ್ಯಕ್ಷನಾಗಿ ಮೂರು ವರ್ಷಗಳ ಸೇವೆ ಸಲ್ಲಿಸಲು ತಾವು ನನನ್ನು ಅವಿರೋಧವಾಗಿ ಆಯ್ಕೆಮಾಡುವ ಮೂಲಕ ತಾವು ನೀಡಿದ ಸಹಕಾರಕ್ಕೆ ಅಭಿವಂದನೆಗಳು.
2022-25ನೆ ಸಾಲಿಗಾಗಿ ನಡೆಯುವ ಚುನಾವಣೆಯಲ್ಲಿ ನನಗೆ ಹಾಗು ನನ್ನ ಪೆನಾಲ್‌ನ ಪ್ರತಿಯೊಬ್ಬರಿಗೂ ಈ ಹಿಂದೆ ನೀಡಿದ ಸಹಕಾರ, ಪ್ರೀತಿ, ವಿಶ್ವಾಸ ಹೀಗೆ ಮುಂದುವರೆದು ಆಶೀರ್ವದಿಸಿ, ಆಯ್ಕೆ ಮಾಡಲು ತಮ್ಮಲ್ಲಿ ಮತ್ತೋಮ್ಮೆ ಕಳಕಳಿಯಿಂದ ಮನವಿ ಮಾಡಿಕೊಳ್ಳುತ್ತಿದ್ದೇನೆ.

ನಿಮ್ಮ ವಿಶ್ವಾಸಿ…
ರಾಜು ದೇಶಮುಖ
ಸಂಪಾದಕ, ಮನೀಷ ಪತ್ರಿಕೆ,
ಹಾಗೂ
ಅಧ್ಯಕ್ಷ ಸ್ಥಾನದ ಅಭ್ಯರ್ಥಿ, ಕೆಯುಡ್ಲೂö್ಯಜೆ
ಕಲಬುರಗಿ
ಕ್ರ.ಸಂ. 02

LEAVE A REPLY

Please enter your comment!
Please enter your name here