ಪತ್ರಕರ್ತರ ಸಂಘದ ಚುನಾವಣೆ ದೇಶಮುಖ ಪೆನಾಲ್‌ನ ಪ್ರಣಾಳಿಕೆ ಬಿಡುಗಡೆ

0
1242

ಕಲಬುರಗಿ ಫೆ. 22:ಕಳೆದ 36 ವರುಷಗಳಿಂದ ಪತ್ರಿಕೋದ್ಯಮ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಅನುಭವದ ಆಧಾರ ಮೇಲೆ ಹಾಗೂ ಈ ಬಾರಿಯ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನದ ಸ್ಪರ್ಧೆ ಬಯಸದೆ ಬಂದ ಭಾಗ್ಯವಾಗಿದೆ. ಅನಿವಾರ್ಯವಾಗಿ ಈ ಸಾಲಿನ ಚುನಾವಣೆಯಲ್ಲಿ ಸ್ಪರ್ಧಿಸಬೇಕಾಯಿತು ಎಂದು ಕೆಯುಡ್ಲೂö್ಯಜಿ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಮನೀಷ ಪತ್ರಿಕೆಯ ಸಂಪಾದಕ, ಹಾಗೂ ಮಾಜಿ ಖಜಾಂಚಿಗಳಾದ ರಾಜು ದೇಶಮುಖ ಅವರು ತಿಳಿಸಿದ್ದಾರೆ. ಅಲ್ಲದೇ ಅವರು ಚುನಾವಣೆಯಲ್ಲಿ ತಮ್ಮ ಸ್ಪರ್ಧೆಗಾಗಿ ಕೆಲವು ಕೆಳಕಂಡ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
ನಮ್ಮ ಚುನಾವಣಾ ಪ್ರಣಾಳಿಕೆಗಳು

  1. ಪತ್ರಕರ್ತರ ಶ್ರೆಯೋಭಿವೃದ್ಧಿಗಾಗಿ ಒಂದು ಸಹಕಾರ ಸಂಘ ಸ್ಥಾಪನೆ.
  2. ಗ್ರಾಮೀಣ ಪತ್ರಕರ್ತರಿಗಾಗಿ ಬಸ್ ಪಾಸ್‌ಗೆ ಶಕ್ತಿ ಮೀರಿ ಶ್ರಮಿಸಿ, ಕೊಡಿಸುವುದು.
  3. ನಿವೇಶನವಿಲ್ಲದ ಪತ್ರಕರ್ತರಿಗೆ ಕಡ್ಡಾಯವಾಗಿ ಸಂಘದ ಸದಸ್ಯತ್ವ ಹೊಂದಿದವರಿಗೆ ನಿವೇಶನ ದೊರಕಿಸುವುದು.
  4. ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಕರ್ತರಿಗಾಗಿ ಮನೋರಂಜನೆಗಾಗಿ ಒಂದು ಕ್ಲಬ್ ಸ್ಥಾಪನೆ. (ಮದ್ಯ, ಊಟ ಹೊರತುಪಡಿಸಿ)
  5. ಪತ್ರಿಕಾ ಭವನದಲ್ಲಿ ನಿರಂತರವಾಗಿ ಪತ್ರಕರ್ತರಿಗಾಗಿ ವೈಫೈ ವ್ಯವಸ್ಥೆ.
  6. ಪತ್ರಿಕಾ ಭವನದಲ್ಲಿ ದಿನ ನಿತ್ಯ ಪತ್ರಿಕಾಗೋಷ್ಟಿಯಲ್ಲಿ ಆಯೋಜಕರು ಉಪಹಾರ ವ್ಯವಸ್ತೆ ಮಾಡಲಿ, ಬೀಡಲಿ, ನಿರಂತರ ಸಂಘದಿAದ ದಿನನಿತ್ಯ ಉಪಾಹರ ವ್ಯವಸ್ಥೆ.
  7. ಪತ್ರಕರ್ತರ ಶ್ರೆಯೋಭಿವೃದ್ಧಿಗಾಗಿ ಸರಕಾರದಿಂದ ಹೊಸ ಯೋಜನೆಗಳಿಗಾಗಿ ಪ್ರಯತ್ನಿಸುವುದು.
    ಇದಲ್ಲದೆ ಇದು ಒಂದು ಬಾರಿ ಮಾತ್ರ ಕಲಬುರಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ ಅಂತಿಮ, ಬರುವ ಮಂದಿನ ಮೂರು ವರ್ಷಗಳ ಅವಧಿ ಮುಗಿದ ನಂತರ ಹೊಸ ಅಭ್ಯರ್ಥಿಗಳ ಆಯ್ಕೆ ನನ್ನ ಧ್ಯೇಯ.
    ನನ್ನ ಅನುಭವ ಪ್ರಕಾರ ಇದೇನು ಲಾಭದಾಯಕ ಹುದ್ದೆಯಲ್ಲ, ಆದರೂ ನಾನು ಚುನಾವಣಾ ಕಣದದಿಂದ ನಿವೃತ್ತಿಯಾಗಲು ಒಂದರಿAದ ಎರಡು ಲಕ್ಷ ರೂ. ಗಳ ಹಣದ ಆಮೀಷದ ಜೊತೆಗೆ ಒಂದು ಹುದ್ದೇಯ ಆಷೆ ಹುಟ್ಟಿಸಿದ್ದು, ಇದು ಅವರು ಎಲ್ಲಿಂದ ತರುವದು ಇದು ತಿಳಿಯದ ವಿಷಯವಾದರೂ ಪ್ರಭುದ್ಧ ಮತದಾರರಿಗೆ ಅರ್ಥವಾಗದೇ ಇರಲಾರದು.
    ನಾನು ಬಯಸುವುದು ಎಷ್ಟೆ, ನ್ಯಾಯಯುತವಾಗಿ ಚುನಾವಣೆ ಎದುರಿಸಿ, ಪತ್ರಿಕೋದ್ಯಮದ ಮಾನ ಕಾಪಾಡಿ, ಇದೇನು ಸಾರ್ವಜನಿಕರ ಚುನಾವಣೆಯಲ್ಲ. ಎಲ್ಲರೂ ನಾವೇ, ಇದು ನಮ್ಮದು, ಅಧಿಕಾರ ಆಶೆ ಇರುವರು ಸಹಜ. ಆದರೆ ಈ ಮೊದಲು ಎರಡೆರಡು ಬಾರಿ ಅಧಿಕಾರ ನಡೆಸಿದವರು ಮತ್ತೆ ಅಧಿಕಾರದ ಆಸೆ ತೋರುವುವುದು ಏನು ಸಂದೇಶ ಸಾರುವುದು ಅರ್ಥಮಾಡಿಕೊಳ್ಳಿ.
    ಹಣ, ಹೆಂಡ ನಮ್ಮಲ್ಲಿ ಅಪ್ರಸ್ತುತ, ನಾನು ಯಾರ ವಿರುದ್ಧವೂ ಆರೋಪ ಮಾಡುತ್ತಿಲ್ಲ, ಇದು ಸಾರ್ವಜನಿಕವಾಗಿ ಆಡಿಕೊಳ್ಳುವಂತೆ ಆಗಿದೆ. ಉದಾಹರಣೆಗೆ ಸರ್ ನೀವು ಚುನಾವಣೆಗೆ ನಿಂತಿದ್ದಾರೆ ಎಷ್ಟು ದುಡ್ಡು ಖರ್ಚು ಮಾಡುತ್ತೀರಾ ಎಂಬ ಪ್ರಶ್ನೆಗೆ ನನ್ನ ಬಳಿ ಉತ್ತರವಿಲ್ಲದೇ ನೋಡೋಣ…. ಮತದಾರರು ಪ್ರಭುದ್ಧರಾಗಿದ್ದಾರೆ…. ಅವರ ತೀರ್ಪು ಅಂತಿಮವಾಗಿದೆ.

LEAVE A REPLY

Please enter your comment!
Please enter your name here