ಜಿಲ್ಲಾ ಪತ್ರಕರ್ತರ ಸಂಘಕ್ಕೆ ಚುನಾವಣೆ ಅಧ್ಯಕ್ಷ ಸ್ಥಾನಕ್ಕೆ ದೇಶಮುಖ ಸ್ಪರ್ಧೆ

0
1650

(ವರದಿ : ಸುರೇಶ ಬಿಜನಳ್ಳಿ, ಸೇಡಂ)
ಕಲಬುರಗಿ, ಫೆ. 14: ತೀವ್ರ ಕುತೂಹಲ ಕೆರಳಿಸಿರುವ ಈ ಬಾರಿಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸ್ಥಾನ ಸ್ಥಾನಕ್ಕೆ ಮನೀಷ ಪತ್ರಿಕೆಯ ಸಂಪಾದಕ, ಮನೀಷ ವೆಬ್‌ಸೈಟ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಮಾಜಿ ಪತ್ರಕರ್ತರ ಸಂಘದ ಖಜಾಂಚಿ ರಾಜು ದೇಶಮುಖ ಅವರು ಸ್ಪರ್ಧಿಸಿದ್ದಾರೆ.
ಕಳೆದ ಮೂರು ವರ್ಷಗಳ ಅವಧಿಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಗದ ಖಜಾಂಚಿಯಾಗಿ ಉತ್ತಮ ಸೇವೆ ಸಲ್ಲಿಸಿ, ಈ ಬಾರಿ ಸಂಘವನ್ನು ಇನ್ನಷ್ಟು ಮುನ್ನಡೆಸುವ ಸದುದ್ದೇಶದಿಂದ ಮತದಾರ ಪತ್ರಕರ್ತ ಪ್ರಭುಗಳ ಅಶೀರ್ವಾದದೊಂದಿಗೆ ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದಾರೆ.
ಈಗಾಗಲೇ ನಾಮಪತ್ರ ಸಲ್ಲಿಸಿದ್ದಕ್ಕಾಗಿ ಹಲವೆಡೆಗಳಿಂದ ಶುಭಾಷಯಗಳ ಸುರಮಳೆ ಬಂದಿದ್ದು, ಕಣದಲ್ಲಿ ಹಿಂದೆಸರಿಯುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದ್ದಾರೆ.
ಈ ಬಾರಿ ನಡೆಯುವ ಚುನಾವಣೆಯಲ್ಲಿ ಜಾತಿ, ಮತ, ಪಂಥಗಳ ಲೆಕ್ಕಚಾರವಿಲ್ಲದೇ ನಾವೆಲ್ಲರು ಪತ್ರಕರ್ತರ ಜಾತಿ ಎಂಬ ಅರ್ಥದೊಂದಿಗೆ ಚುನಾವಣೆಯಲ್ಲಿ ಮತದಾನ ಮಾಡುವಂತೆ ಅವರು ಮಾನ್ಯ ಪತ್ರಕರ್ತ ಮತಬಾಂದವರಲ್ಲಿ ವಿನಂತಿಸಿದ್ದಾರೆ.
ಕಳೆದ ತಿಂಗಳು ನಡೆದ ರಾಜ್ಯ ಮಟ್ಟ ಪತ್ರಕರ್ತರ ಸಮ್ಮೇಳನದ ಯಶಸ್ವಿ ಈ ಚುನಾವಣೆಯಲ್ಲಿ ನಮಗೆ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದರು.

LEAVE A REPLY

Please enter your comment!
Please enter your name here