ರೈಲು ಹಳಿ ಮೇಲೆ ಶವ ಪ್ರಕರಣ ಬೇಧಿಸಿದ ರೇಲ್ವೆ ಪೋಲಿಸರು ಐದು ಜನ ಆರೋಪಿಗಳ ಬಂಧನ

0
2853

ಕಲಬುರಗಿ, ಫೆ. 01: ಕಳೆದ ಒಂದು ವಾರದ ಹಿಂದೆ ಸಾವಳಗಿ ರೈಲು ನಿಲ್ದಾಣದ ಹಳಿ ಮೇಲೆ ಕೊಲೆ ಮಾಡಿ ಶವವನ್ನು ಹಳಿ ಮೇಲೆ ಹಾಕಿದ ಪ್ರಕರಣವನ್ನು ರೇಲ್ವೆ ಪೋಲಿಸರು ಬೇಧಿಸಿ, ಕೊಲೆ ಮಾಡಿದ್ದಾರೆಂದು ಹೇಳಲಾದ ಐವರು ಆರೋಪಿಯನ್ನು ಬಂಧಿಸಿದ್ದಾರೆ.
ಕೊಲೆಯಾದ ಶಿವಕುಮಾರ ತಂದೆ ಕಲ್ಯಾಣಿ ಆಳಂದಕರ ಎಂಬ 28 ವರ್ಷ ವಯಸ್ಸಿನ ಯುಕನನ್ನು ಕೊಲೆ ಮಾಡಲು ಕಳೆದ ಮೂರು ವರ್ಷಗಳಿಂದ ಹೊಂಚು ಹಾಕಿ, ಕೊನೆಗೆ ಕೊಲೆ ಮಾಡಿದ ಆರೋಪಿಯಾದ ಕಮಲಾಪೂರ ತಾಲೂಕಿನ ಶ್ರೀಚಂದ ಗ್ರಾಮದ ಮಹಾಂತೇಶ ತಂದೆ ಆಳಂದಕರ್ (21) ಎಂಬವನ್ನು ತನ್ನ ಸೋದರ ಮಾವನಾದ ಶರಣಸಿರಸಗಿ ಗ್ರಾಂದ ಬಸವರಾಜ ತಂದೆ ಧೂಳಪ್ಪ ಸಲಗಾರ (24) ಮತ್ತು ಇನ್ನಿಬ್ದರ ಸಹಾಯದಿಂದ ಕೊಲೆ ಮಾಡಿ ಶವವನ್ನು ಬಬಲಾದ ಮತ್ತು ಸಾವಳಗಿ ನಡುವಿನ ರೈಲು ಹಳಿ ಮೇಲೆ ತಂದು ಹಾಕಿ ತಪ್ಪಿಸಿಕೊಂಡಿದ್ದರು.
ಶ್ರೀಚAದ ಗ್ರಾಮದ ಶಿವಕುಮಾರ ತಂದೆ ಕಲ್ಯಾಣಿ (28) ವರ್ಷದ ಯುವಕ ತನ್ನ ತಾಯಿಯೊಂದಿಗೆ ಅನೈತಿಕ ಸಂಬAಧ ಇಟ್ಟುಕೊಂಡ ಬಗ್ಗೆ ತಿಳಿದು ಅಸಮಾಧಾನಪಟ್ಟು ಕೊನೆಗೆ ಶಿವಕುಮಾರನನ್ನು ಮೂರು ಜನರ ಸಹಾಯದಿಂದ ಕುತ್ತಿಗೆಗೆ ಹರಿತವಾದ ಆಯುಧದಿಂದ ಚುಚ್ಚಿ ನಂತರ ಶವವನ್ನು ಸಾಕ್ಷಿ ನಾಶಪಡಿಸುವ ಉದ್ದೇಶದಿಂದ ರೈಲು ಹಳಿಯ ಮೇಲೆ ಇಟ್ಟು ಪರಾರಿಯಾಗಿದ್ದರೆಂದು ಪೋಲಿಸರ ತನಿಖೆಯಿಂದ ತಿಳಿದುಬಂದಿದೆ.
ಆರೋಪಿಗಳಾಧ ಶ್ರೀಚಂದ ಗ್ರಾಮದ ಮಹಾಂತೇಶ ತಂದೆ ಸಾಯಬಣ್ಣ (21) ಶರಣಸಿರಸಗಿಯ ಬಸವರಾಜ ತಂದೆ ಧೂಳಪ್ಪ ಸಲಗಾರ (24). ಫಕಿರಪ್ಪ ತಂದೆ ಮಲ್ಲಿಕಾರ್ಜುನ ಸಲಗಾರ (25). ಸಿದ್ಧಾರೂಢ ತಂದೆ ಮಲ್ಲಿಕಾರ್ಜುನ ಕೋರಬಾರ (26) ಮತ್ತು ಅಶೋಕ ತಂದೆ ಕಲ್ಯಾಣಿ ಜಮಾದಾರ (26) ಗಳನ್ನು ಬಂಧಿಸಲಾಗಿದೆ.
ಈ ಮೇಲ್ಕಂಡ ಆರೋಪಿಗಳನ್ನು ವಾಡಿ ರೈಲ್ವೆ ವೃತ್ತದ ಸಿಪಿಐ ರಮೇಶ ಕಾಂಬಳೆ ಅವರ ನೇತೃತ್ವದಲ್ಲಿ ವಾಡಿ ರೇಲ್ವೆ ಪಿಎಸ್‌ಐ ವೀರಭದ್ರ ಹಾಗೂ ಠಾಣೆಯ ಸಿಬ್ಬಂದಿಗಳಾದ ಬಸವರಾಜ ಭಾವಿಕಟ್ಟಿ, ರವಿಕುಮಾರ, ಅನೀಲ, ಸಾಗರ, ಗೌಡಪ್ಪಗೌಡ, ರಾಕೇಶ, ಕಲ್ಯಾಣಿ, ಬಸವರಾಜ, ಶಿವಕುಮಾರ, ಭಾವಾಸಾಬ, ಮಹ್ಮದ ರಫೀಕ, ಅಯೂಬಖಾನ, ಅಮರ, ಬಾಲು, ಪರಶುರಾಮ ರೆಡ್ಡಿ ಮತ್ತು ಮಹಿಳಾ ಪಿಸಿಗಳಾದ ಮಮತಾ ಅವರ ವಿಶೇಷ ತಂಡ ಇಂದು ಮಂಗಳವಾರ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಈ ಬಗ್ಗೆ ವಾಡಿ ರೇಲ್ವೆ ಪೋಲಿಸ ಠಾಣೆಯಲ್ಲಿ ಕಲಂ 302. 201 ಐಪಿಸಿ ಅಡಿಯಲ್ಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ರೇಲ್ವೆ ಪೋಲಿಸ್ ಅಧಿಕ್ಷಕರಾದ ಶ್ರೀಮತಿ ಸಿರಿಗೌರಿ, ರೇಲ್ವೆ ಪೋಲಿಸ ಉಪಾಧಿಕ್ಷರ ಮಾರ್ಗದರ್ಶನದಲ್ಲಿ ಈ ಘಟನೆಯನ್ನು ಬೇಧಿಸಿ, ಆರೋಪಿಗಳನ್ನು ಬಂಧಿಸಲಾಗಿದೆ.

LEAVE A REPLY

Please enter your comment!
Please enter your name here