ರಾಜ್ಯದ ಎಲ್ಲ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನಾಗಿ ನೇಮಿಸಿ ಮುಖ್ಯಮಂತ್ರಿ ಆದೇಶ

0
782
MRN Leadership Team - Nirani Groups

ಬೆಂಗಳೂರು, ಜ. 24: ರಾಜ್ಯದ ಎಲ್ಲ ಜಿಲ್ಲೆಗಳಿಗೆ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರು ಹಾಗೂ ಕೋವಿಡ್ ಉಸ್ತುವಾರಿ ಸಚಿವರನ್ನಾಗಿ 28 ಸಚಿವರನ್ನು ನೇಮಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಸೂಚನೆ ಹೊರಡಿಸಿದ್ದಾರೆ.
ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಮುರುಗೇಶ ರುದ್ರಪ್ಪ ನಿರಾಣಿ ಅವರನ್ನು ನೇಮಕ ಮಾಡಲಾಗಿದೆ. ಈ ಹಿಂದೆ ಅವರು ಕೇವಲ ಕೋವಿಡ್ ಮತ್ತು ಧ್ವಜಾರೋಹಣ ಮಾಡುವ ಉಸ್ತುವಾರಿ ಮಾತ್ರ ನೀಡಲಾಗಿತ್ತು ಈಗ ಪೂರ್ಣ ಪ್ರಮಾಣದಲ್ಲಿ ಕಲಬುರಗಿ ಜಿಲ್ಲೆಗೆ ಉಸ್ತುವರನ್ನಾಗಿ ನೇಮಕ ಮಾಡಿ, ಮುಖ್ಯಮಂತ್ರಿಗಳು ಆದೇಶ ಜಾರಿ ಮಾಡಿದ್ದಾರೆ.
ಮುಖ್ಯಮಂತ್ರಿ ಹಾಗೂ ಸಚಿವರುಗಳಿಗೆ ಈ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಈ ಕೆಳಕಂಡAತೆ ಅವರುಗಳ ಹೆಸರಿನ ಮುಂದೆ ಸೂಚಿಸಿರುವ ಜಿಲ್ಲೆಗಳಿಗೆ ಕೋವಿಡ್ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಉಸ್ತುವಾರಿ ಸಚಿವರನ್ನಾಗಿ ನೇಮಿಸಿ ಆದೇಶಿಸಿದೆ.
ಬಸವರಾಜ್ ಬೊಮ್ಮಾಯಿ ಬೆಂಗಳೂರು ನಗರ
ಗೋವಿಂದ ಎಂ.ಕಾರಜೋಳ ಬೆಳಗಾವಿ
ಕೆ.ಎಸ್. ಈಶ್ವರಪ್ಪ ಚಿಕ್ಕಮಗಳೂರು
ಬಿ. ಶ್ರೀರಾಮುಲು ಬಳ್ಳಾರಿ
ವಿ. ಸೋಮಣ್ಣ ಚಾಮರಾಜನಗರ
ಉಮೇಶ ಕತ್ತಿ ವಿಜಯಪುರ
ಎಸ್. ಅಂಗಾರ ಉಡಪಿ
ಅರಗ ಜ್ಞಾನೇಂದ್ರ ತುಮಕೂರು
ಡಾ. ಸಿ.ಎನ್. ಅಶ್ವತ್ಥನಾರಾಯಣ ರಾಮನಗರ
ಸಿ.ಸಿ. ಪಾಟೀಲ್ ಬಾಗಲಕೋಟೆ
ಆನಂದ್ ಸಿಂಗ್ ಕೊಪ್ಪಳ
ಕೋಟಾ ಶ್ರೀನಿವಾಸಪೂಜಾರಿ ಉತ್ತರ ಕನ್ನಡ
ಪ್ರಭು ಚವ್ಹಾಣ ಯಾದಗಿರಿ
ಮುರುಗೇಶ ರುದ್ರಪ್ಪ ನಿರಾಣಿ ಕಲಬುರಗಿ
ಅರಬೈಲ್ ಶಿವರಾಮ್ ಹೆಬ್ಬಾರ್ ಹಾವೇರಿ
ಎಸ್. ಟಿ. ಸೋಮಶೇಖರ ಮೈಸೂರು
ಬಿ.ಸಿ. ಪಾಟೀಲ್ ಚಿತ್ರದುರ್ಗಮತ್ತು ಗದಗ
ಬಿ. ಎ. ಬಸವರಾಜ್ ದಾವಣಗೆರೆ
ಡಾ. ಕೆ. ಸುಧಾಕರ್ ಬೆಂಗಳೂರು ಗ್ರಾಮಾಂತರ
ಕೆ. ಗೋಪಾಲಯ್ಯ ಹಾಸನ ಮತ್ತು ಮಂಡ್ಯ
ಜೊಲ್ಲೆ ಶಶಿಕಲಾ ಅಣ್ಣಾಸಾಹೇಬ್ ವಿಜಯನಗರ
ಎಸ್. ನಾಗರಾಜು (ಎಂಟಿಬಿ) ಚಿಕ್ಕಬಳ್ಳಾಪುರ
ಕೆ. ಸಿ. ನಾರಾಯಣಗೌಡ ಶಿವಮೊಗ್ಗ
ಬಿ. ಸಿ. ನಾಗೇಶ ಕೊಡಗು
ವಿ. ಸುನೀಲ್ ಕುಮಾರ ದಕ್ಷಿಣ ಕನ್ನಡ
ಆಚಾರ ಹಾಲಪ್ಪ ಬಸಪ್ಪ ಧಾರವಾಡ
ಶಂಕರ ಬಿ. ಪಾಟೀಲ್ ರಾಯಚೂರು ಮತ್ತು ಬೀದರ
ಮುನಿರತ್ನ ಕೋಲಾರ

LEAVE A REPLY

Please enter your comment!
Please enter your name here