ಕಲಬುರಗಿ,ಜ.24: ಸರಕಾರ ಬಡತನ ರೇಖೆಗಿಂತ ಕೆಳಗಿರುವ ಕಡುಬಡವರಿಗಾಗಿ ಯೋಚಿಸಿ, ಯೋಜಿಸಲಾದ ಪಡಿತರ ಅಕ್ಕಿಯನ್ನು ಬಡವರ ಬಾಯಿಂದ ಕಸಿದು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಬಹಳಷ್ಟು ಪ್ರಕರಣಗಳು ವರದಿಯಾಗುತ್ತಿದ್ದು, ಇಂತಹದೇ ಮತ್ತೊಂದು ಪ್ರಕರಣದ ಇಂದು ಕಲಬುರಗಿ ಜಿಲ್ಲೆಯಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಕಲಬುರಗಿ ಜಿಲ್ಲೆಯಲ್ಲಿ ಎಗ್ಗಿಲ್ಲದೆ ನಡೆದಿದಿದೆ ಎನ್ನಲಾದ ಪಡಿತರ ಅಕ್ಕಿ ಮಾರಾಟ ದಂಧೆಗೆ ಪೋಲಿಸರು ಕಡಿವಾಣ ಹಾಕುವ ನಿಟ್ಟಿನಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿಯೊಂದನ್ನು ಪೋಲಿಸರು ವಶಕ್ಕೆ ಪಡೆದ್ದಾರೆ.
ಜಿಲ್ಲೆಯ ಅಫಜಲಪೂರ ಪಟ್ಟಣದಲ್ಲಿ ಚೌಕ್ ಬಜಾರ್‌ನಲ್ಲಿ ಪೋಲಿಸರು 850 ಕ್ವಿಂಟಾಲ್ ಅಕ್ಕಿಯನ್ನು ಜಪ್ತಿಮಾಡಿ, ಅಕ್ಕಿ ಸಾಗಿಸುತ್ತಿದ್ದ ಲಾರಿ ಚಾಲಕ ನವಾಜ್ ಅಲಿಯನ್ನು ಬಂಧಿಸಿದ್ದಾರೆ.
ಕೆಎ 32, ಸಿ 7104 ನಂಬರಿನ ಲಾರಿಯನ್ನು ಸಹ ವಶಕ್ಕೆ ಪಡೆಯಲಾಗಿದೆ.
ಈ ಕುರಿತು ಅಫಜಲಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.