ಕೊರೊನಾ: ಜನರ ಪ್ರಾಣದ ಜೊತೆ ಚೆಲ್ಲಾಟ ನಾಚಿಗೇಡು ಸಂಗತಿ : ಸಚಿವ ಬಿ.ಸಿ. ಪಾಟೀಲ್

0
668

ಕಲಬುರಗಿ, ಜ. 12: ಮೇಕೆದಾಟು ಯೋಜನೆಯನ್ನು ಮುಂದಿಟ್ಟುಕೊAಡು ಜನರ ಪ್ರಾಣದ ಚೆಲ್ಲಾಟವಾಡುತ್ತಿರುವ ಕಾಂಗ್ರೆಸ್ ಪಕ್ಷ, ಕೋವಿಡ ಸಂದರ್ಭದಲ್ಲಿ ಇಂತಹ ಹೋರಾಟ ಬೇಡ ಅಂತ ಹೇಳಿದರೂ ಕೂಡ ಕೇಳದೆ ಒಂದು ಜವಾಬ್ದಾರಿಯುತ ಸ್ಥಾನದಲ್ಲಿರುವರು ಬೇಜವಾಬ್ದಾರಿಯಾಗಿ ವರ್ತಿಸುತ್ತಿರುವುದು ಒಂದು ನಾಚಿಗೇಡು ಸಂಗತಿಯಾಗಿದೆ ಎಂದು ಕೃಷಿ ಸಚಿವ ಬಿ. ಸಿ. ಪಾಟೀಲ್ ಹೇಳಿದ್ದಾರೆ.
ಅವರು ಬುಧುವಾರ ಕಲಬುರಗಿಯಲ್ಲಿ ರೈತ ತರಬೇತಿ ಕೇಂದ್ರ ಕಟ್ಟಡ ನಿಮಾರ್ಣದ ಶಂಕು ಸ್ಥಾಪನೆ ನೆರವೇರಿಸಲು ಆಗಮಿಸಿದ ಸಂದರ್ಭದಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತ, ಮೇಕೆದಾಟು ಯೋಜನೆ ಜಾರಿಗಾಗಿ ಕಾಂಗ್ರೆಸ್ ಪಕ್ಷದ ಮುಖಂಡರು ಕೈಗೊಂಡಿರುವ ಪಾಯಾತ್ರೆ ಬಗ್ಗೆ ಪ್ರತಿಕ್ರಿಯಿಸಿದ ಕೃಷಿ ಸಚಿವ ಬಿ. ಸಿ. ಪಾಟೀಲ್ ಅವರು ಈಗಾಗಲೇ ಬಹಳಷ್ಟು ಬಾರಿ ಅವರುಗಳಿಗೆ ಸೂಚನೆ ನೀಡಲಾಗಿದೆ, ಸರಕಾರಕ್ಕಾಗಲಿ, ಕಾನೂನಿಗಾಗಲಿ ಅವರು ಪ್ರಶ್ನೆ ಮಾಡುವಂತಿಲ್ಲ, ಅದು ಮಾನವ ಸಂಸ್ಕೃತಿಯೂ ಅಲ್ಲ, ಅದೊಂದು ಗುಂಡಾಗಿರಿ ಸಂಸ್ಕೃತಿಯಾಗಿದೆ ಎಂದರು.
ತಾಕದಿದ್ದರೆ ನಮ್ಮ ಪಾದಯಾತ್ರೆ ತಡೆಯಲಿ ಎಂದು ಡಿ.ಕೆ. ಶಿವಕುಮಾರ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ತಾಕತ್ ಪ್ರಶ್ನೆ ಮೂಡುವುದು ಯಾರಿಗೆ ಗೊತ್ತಾ ಅದರು ಎದುರಾಳಿಗಳಿಗೆ, ಬಿಜೆಪಿ ಸರಕಾರ ಮೇಕೆದಾಟು ಯೋಜನೆ ಪಾದಯಾತ್ರೆ ಮಾಡುವುದಕ್ಕೆ ಬದ್ಧವಾಗಿದೆ ಆದರೆ ಅದು ಈಗ ಸೂಕ್ತ ಸಮಯವಲ್ಲ, ತಮಿಳುನಾಡು ಸರಕಾರದ ವಿರುದ್ಧ ಪ್ರತಿಭಟನೆ ಮಾಡಲಿ ಅದನ್ನು ಬಿಟ್ಟು, ಕರ್ನಾಟಕ ಸರಕಾರದ ವಿರುದ್ಧ ಮಾಡುತ್ತಿದ್ದಾರೆ, ಇಷ್ಟು ದಿವಸ ಇವರ ಹೋರಾಟ ಎಲ್ಲಿ ಹೋಗಿತ್ತು ಎಂದು ಪಾಟೀಲ್ ಪ್ರಶ್ನಿಸಿದರು.
ಮಹಾದಾಯಿ ಯೋಜನೆಯಲ್ಲಿ ಸೋನಿಯಾಗಾಂಧಿ ಅವರು ಕರ್ನಾಟಕಕ್ಕೆ ಹನಿ ನೀರು ಕೊಡುವುದಿಲ್ಲ ಎಂದು ಹೇಳಿದ್ದರು, ಆದರೆ ಇವರುಗಳು ಮಹಾದಾಯಿ, ಗಂಡೋರಿ ಬಗ್ಗೆ ಮಾತನಾಡುತ್ತಿಲ್ಲ, 2013ರಿಂದ 2018ರವರೆಗೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವೇ ಇತ್ತು, 2018 ಮತ್ತು 2019ರಲ್ಲಿ ಡಿ.ಕೆ. ಶಿವಕುಮಾರ ಅವರು ನೀರಾವರಿ ಮಂತ್ರಿಯಾಗಿದ್ದರು. ಸುಮ್ಮನೆ ರಾಜಕೀಯವಾಗಿ ಸಿದ್ಧರಾಮಯ್ಯನವರ ಮೇಲಿನ ಸೇಡು ಮತ್ತು ಸಿದ್ಧರಾಮನವರ ಮುಂದೆ ತಮ್ಮ ಕ್ಷೇತ್ರದಲ್ಲಿನ ಪ್ರಭಾವದ ಬಗ್ಗೆ ತೋರಿಸಲು ಡಿಕೆಶಿ ಆಡುತ್ತಿರುವ ನಾಟಕವೆಂದು ನೇರವಾಗಿ ಬಿ.ಸಿ. ಪಾಟೀಲ್ ಹೇಳಿದ್ದಾರೆ.
ಇದು ರಾಜಕೀಯ ದುರುದ್ದೇಶ, ಈಡೀ ಜಗತ್ತಿಗೆ ಕೊರೊನಾ ಬಂದು ಜನ ಸಾಯುತ್ತಿದ್ದಾರೆ, ಕೊರೊನಾ ವ್ಯಾಪಕವಾಗಿ ಹಬ್ಬುತ್ತಿರುವ ಇಂತಹ ಸಂದರ್ಭದಲ್ಲಿ ಕಾನೂನು ಉಲ್ಲಂಘನೆ ಮಾಡಿರುವುದು ಮುರ್ಖತನದ ಪರಮಾವಧಿಯಾಗಿದೆ ಎಂದರು.
ತಮಗೆ ಸರಕಾರ ಹೇದರುತ್ತಿದೆ ಎಂದು ಕಾಂಗೈ ನಾಯಕರು ನೀಡಿದ ಹೇಳಿಕೆಗೆ ಪ್ರತ್ಯುತ್ತರ ನೀಡಿದ ಪಾಟೀಲ್, ಸರಕಾರ ಹೇದರೋದಿಲ್ಲ, ಸರಕಾರ ಕಟ್ಟಿಯಾಗಿಯೇ ಇದೆ, ಹೆದರುವ ಪ್ರಶ್ನೆಯೇ ಇಲ್ಲ ಎಂದರು.
ಡಿಕೆಶಿ ಅವರಿಗೆ ಕಾಂಗ್ರೆಸ್ ಪಕ್ಷದವರಿಗೆ ಜವಾಬ್ದಾರಿಯಿದ್ದರೆ ಕೊರೊನಾದಿಂದ ಜನರು ಸಾಯುತ್ತಿರುವ ಇಂತಹ ಸಂದರ್ಭದಲ್ಲಿ ಜನರನ್ನು ಲೆಕ್ಕಿಸದೇ ತಮ್ಮ ರಾಜಕೀಯ ಬೆಳೆ ಬೆಯಿಸುವುದಕ್ಕಾಗಿ ಇಂತಹ ನಾಟಕ ಮಾಡುತ್ತಿದ್ದಾರೆ ಎಂದು ನುಡಿದರು.
ತೊಗರಿ ಖರೀದಿ ಕೇಂದ್ರಗಳನ್ನು ಸರಕಾರ ಈಗಾಗಲೇ ಸ್ಥಾಪಿಸಿದ್ದು, ಆದರೆ ರೈರ‍್ಯಾರು ಈ ಕೇಂದ್ರಗಳಿಗೆ ತಮ್ಮ ತೊಗರಿಯನ್ನು ಹಾಕುತ್ತಿಲ್ಲ, ಇದಕ್ಕೆ ಕಾರಣ ಸರಕಾರ ಕ್ವಿಂಟಾಲ್‌ಗೆ 6300 ರೂ. ನಿಗದಿ ಮಾಡಿದೆ, ಆದರೆ ಮಾರುಕಟ್ಟೆಗಳಲ್ಲಿ ಒಂದು ಕ್ವಿಂಟಾಲ್‌ಗೆ 6500 ರೂ. ಖರೀದಿಸುತ್ತಿದ್ದಾರೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ತೊಗರಿಗೆ ಬೆಂಬಲ ಬೆಲೆ ನೀಡುವ ಬಗ್ಗೆ ಚಿಂತನೆ ಮಾಡುತ್ತೇವೆ ಎಂದರು.

LEAVE A REPLY

Please enter your comment!
Please enter your name here