ಸಂಸದ ಉಮೇಶ್ ಜಾಧವ್ ಅವರಿಗೆ ಮಾತಿನಲ್ಲೇ ತಿವಿದ ಶಾಸಕರಾದ ಪ್ರಿಯಾಂಕ್ ಖರ್ಗೆ

0
664

ಕಲಬುರಗಿ, ಜ. 11: ವಿನಯ ಬಲ್ಲವರು ನಯವಂತರು ಆಗಿರುತ್ತಾರೆ ವಿನಃ ನಯವಂಚಕರಾಗಿರುವುದಿಲ್ಲ. ಹೇಳಿದ್ದನ್ನೇ ಹೇಳೋದು ಬಿಟ್ಟು, ಈಗಲಾದ್ರೂ ಕೆಲಸ ಶುರು ಮಾಡ್ತೀರಿ ಎಂದು ಭಾವಿಸುತ್ತೇನೆ ಎಂದು ಜಾಧವ್ ಅವರ ಟ್ವಿಟ್ ಗೆ ಮರುಟ್ವಿಟ್ ಮಾಡುವ ಮೂಲಕ ಉತ್ತರಿಸಿ ತಮ್ಮದೇ ದಾಟಿಯಲ್ಲಿ ಕಾಂಗ್ರೆಸ್ ವಕ್ತಾರ ಹಾಗೂ ಶಾಸಕರಾದ ಪ್ರಿಯಾಂಕ್ ಖರ್ಗೆ ಕುಟುಕಿದ್ದಾರೆ.

ಅಹಂಕಾರ ಮೈ ತುಂಬಿದ್ದರೆ ಏನಾಗುತ್ತದೆ ಎನ್ನುವುದಕ್ಕೆ ಎರಡುವರೆ ವರ್ಷದ ಹಿಂದೆ ಜಿಲ್ಲೆಯ ಜನತಾ ನ್ಯಾಯಾಲಯದಲ್ಲಿ ತೀರ್ಪು ಆಗಿದೆ. ಅಹಂಕಾರ ಆಪತ್ತು ತರುತ್ತದೆ ವಿನಯ ಸಂಪತ್ತು ತರುತ್ತದೆ ಎಂದು ನಾನು ಓದಿದ್ದೆ ಹಾಗೆಯೇ ನನ್ನ ಜೀವನದಲ್ಲಿ ಯಾವಾಗಲು ವಿನಯದಿಂದಲೇ ಜೀವಿಸುತ್ತಿದ್ದೇವೆ ಎಂದು ಜಾಧವ ಟ್ವಿಟ್ ಮಾಡಿ ಸನ್ನತಿ ಅಭಿವೃದ್ದಿ ವಿಚಾರದಲ್ಲಿ ಪ್ರಿಯಾಂಕ್ ಖರ್ಗೆ ಅವರನ್ನು ಕೆಣಕಿದ್ದರು.
ಇದಕ್ಕೆ ತಮ್ಮದೇ ಧಾಟಿಯಲ್ಲಿ ಟ್ವಿಟ್ ಮೂಲಕ ಉತ್ತರಿಸಿರುವ ಪ್ರಿಯಾಂಕ್ ಖರ್ಗೆ, ” ಜನರು ಕೆಲಸ ಮಾಡಲು ತೀರ್ಪು ನೀಡಿ 2.5 ವರ್ಷ ಆಗಿದೆ. ಆದ್ರೆ ಗೆಲ್ಲಿಸಿದ ಜಿಲ್ಲೆಗೆ ಈವರೆಗೆ ಅನುದಾನ ಕಟ್, ಯೋಜನೆಗಳು ಕಟ್, ಸಚಿವ ಸ್ಥಾನ ಕಟ್… ವಿನಯ ಬಲ್ಲವರು ನಯವಂತರು ಆಗಿರುತ್ತಾರೆ ವಿನಃ ನಯವಂಚಕರಾಗುವುದಿಲ್ಲ. ಹೇಳಿದ್ದನ್ನೇ ಹೇಳೋದು ಬಿಟ್ಟು ಈಗಲಾದ್ರೂ ಕೆಲಸ ಶುರು ಮಾಡ್ತೀರಿ ಎಂದು ಭಾವಿಸುತ್ತೇನೆ ” ಎಂದು ಮಾರುತ್ತರ ಕೊಟ್ಟಿದ್ದಾರೆ.
ಏನಿದ್ದರೂ ಕೆಲವು ದಿನಗಳಿಂದ ಪ್ರಿಯಾಂಕ್ ಖರ್ಗೆ ಮತ್ತು ಸಂಸದ ಡಾ. ಉಮೇಶ ಜಾಧವ ಅವರ ನಡುವೆ ಮಾತಿನ ಕೋಲ್ಡ್ ವಾರ್ ನಡೆಯುತ್ತಿದೆ.

LEAVE A REPLY

Please enter your comment!
Please enter your name here