ಮಂಗಳವಾರ ಜಿಲ್ಲೆಯಲ್ಲಿ 109 ಹೊಸ ಕೊರೊನಾ ಪ್ರಕರಣಗಳ ಪತ್ತೆ

0
1150

ಕಲಬುರಗಿ, ಜ. 11: ಕಳೆದ ಹತ್ತು ದಿನಗಳಿಂದ ನಿರಂತರವಾಗಿ ದಿನನಿತ್ಯ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿದ್ದು, ಇಂದು ಮಂಗಳವಾರ ಹೊಸದಾಗಿ ಜಿಲ್ಲೆಯಲ್ಲಿ 109 ಕೊರೊನಾ ಪ್ರಕರಣಗಳ ದಾಖಲಾಗಿವೆ.
ಇದರಿಂದಾಗಿ ಜಿಲ್ಲೆಯಲ್ಲಿ 468 ಸಕ್ರೀಯ ಪ್ರಕರಣಗಳಿದ್ದು, ಇಂದು ಆಸ್ಪತ್ರೆಯಿಂದ ಗುಣಮುಖರಾಗಿ 16 ಜನರು ಬಿಡುಗಡೆಗೊಂಡಿದ್ದಾರೆ.
ಇAದು ಜಿಲ್ಲೆಯಲ್ಲಿ ಯಾವುದೇ ಸಾವು ಪ್ರಕರಣ ಸಂಭವಿಸಿಲ್ಲ, ಈವರೆಗೆ 824 ಜನರು ಕೋವಿಡ್‌ಗೆ ಬಲಿಯಾಗಿದ್ದಾರೆ.
ದಿನನಿತ್ಯ ಹೊಸ ಕೊರೊನಾ ಪ್ರಕರಣಗಳು ವರದಿಯಾಗುತ್ತಿದ್ದರೂ ಕೂಡ ಸಾರ್ವಜನಿಕರು ಇದಕ್ಕೆ ಕ್ಯಾರೇ ಅನ್ನದೇ ಮಾರುಕಟ್ಟೆಗಳಲ್ಲಿ ಕೋವಿಡ್ ನಿಯಮ ಉಲ್ಲಂಘಿಸುತ್ತಿರುವ ದೃಶ್ಯಗಳು ಎಲ್ಲಡೆ ಸಾಮಾನ್ಯವಾಗಿವೆ.
ಸರಕಾರವೊಂದೆ ಕೋವಿಡ್ ನಿಯಂತ್ರಿಣಸಲು ಸಾಧ್ಯವಿಲ್ಲ, ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕರು ಕೋವಿಡ್ ನಿಯಮ ಪಾಲಿಸುವುದರೊಂದಿಗೆ ಸಮಾಜದಲ್ಲಿ ಉತ್ತಮ ಆರೋಗ್ಯ ಹೊಂದಲು ಪ್ರಯತ್ನಿಸುವುದು ಇಂದಿನ ಅಗತ್ಯವಾಗಿದೆ.

LEAVE A REPLY

Please enter your comment!
Please enter your name here