ಗುರುವಾರ ರಾಜ್ಯದಲ್ಲಿ 5 ಸಾವಿರ ಹೊಸ ಕೊರೊನಾ ಪ್ರಕರಣಗಳು ದಾಖಲು : ಓರ್ವ ವ್ಯಕ್ತಿ ಸಾವು

0
766

ಬೆಂಗಳೂರು, ಜ. 06: ಹೊಸ ವರ್ಷದ ಮೊದಲ ದಿನದಿಂದ ಕೊರೊನಾ ಸೋಂಕಿನ ಸಂಖ್ಯೆಯಲ್ಲಿ ಗಣಣಿಯವಾಗಿ ಏರಿಕೆ ಕಂಡು ಬಂದಿದ್ದು, ಇಂದು ಗುರುವಾರ ರಾಜ್ಯದಲ್ಲಿ ಕೊರೊನಾ 5000ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ.
ರಾಜಧಾನಿ ಬೆಂಗಳೂರು ನಗರ ಒಂದರಲ್ಲೇ ಸುಮಾರು 4324 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಉಳಿದಂತೆ ಉಳಿದ ಎಲ್ಲ ಜಿಲ್ಲೆಗಳಲ್ಲಿ 706 ಪ್ರಕರಣಗಳಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರಂಕಿ ದಾಟಿದ ಕರೊನಾ ಉಳಿದ ಜಿಲ್ಲೆಗಳಲ್ಲಿ ಎರಡಂಕಿಗಳಲ್ಲಿ ದಾಖಲಾದರೆ, ಇನ್ನು ನಾಲ್ಕು ಜಿಲ್ಲೆಗಳಲ್ಲಿ ಯಾವುದೆ ಹೊಸ ಪ್ರಕರಣಗಳು ದಾಖಲಾಗಿಲ್ಲ.
ಕಳೆದ ಎರಡು ಅಲೆಗಳಲ್ಲಿ ಕೊರೊನಾಗೆ ಸಾವಿಗೀಡಾದವರ ಸಂಖ್ಯೆ ವಿರಳವಾಗಿತ್ತು, ಈ ಮೂರನೇ ಅಲೇ ಎಂದ ಹೇಳಲಾಗಿರುವ ರೂಪಾಂತರಿ ಓಮಿಕ್ರಾನ್ ಕೊರೊನಾ ಅಷ್ಟೇನು ಬಲಿಷ್ಟವಾಗಿಲ್ಲ ಎಂದು ಐಸಿಎಂಆರ್ ಹೇಳಿದ್ದು, ರಾಜ್ಯದಲ್ಲಿ 5 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಿದ್ದು, ಸಾವಿನ ಪ್ರಮಾಣದಲ್ಲಿ ಗಣನೀಯವಾಗಿ ಇಳಿಕೆ ಕೊಂಡಿದ್ದು, ಇಂದು ಕೇವಲ ಓರ್ವ ವ್ಯಕ್ತಿ ಕೊರೊನಾದಿಂದ ಮೃತಪಟ್ಟಿದ್ದಾನೆ.
ಸರಕಾರ ಈಗಾಗಲೇ ಎಚ್ಚೇತ್ತು, ವೇಗವಾಗಿ ಹರಡುತ್ತಿರುವ ಕೊರೊನಾಗೆ ಬ್ರೇಕ್ ಹಾಕಲು ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಜೊತೆಗೆ ರಾತ್ರಿ ಕರ್ಫ್ಯೂ ಜಾರಿ ಮಾಡಿದ್ದು ಮುಂದಾಲೋಚನೆ ಕ್ರಮವಾಗಿದೆ.
ಕಳೆದ ಎರಡನೇ ಅಲೆಯಿಂದ ಪಾಠ ಕಲಿತ ಸರಕಾರ ಈ ಬಾರಿ ಸರಿಯಾದ ಕ್ರಮ ಕೈಗೊಂಡಿದೆ ಎಂದು ಸಾರ್ವಜನಿಕರು ಸರಕಾರದ ಕ್ರಮವನ್ನು ಬೆಂಬಲಿಸುವ ಮೂಲಕ ಕೊರೊನಾ ಮಾರ್ಗಸೂಚಿಗಳನ್ನು ತಪ್ಪದೇ ಅನುಸರಿಸಿ, ಕೊರೊನಾದಿಂದ ಮುಕ್ತರಾಗಲು ಸನ್ನದ್ಧರಾಗಿದ್ದಾರೆ.

LEAVE A REPLY

Please enter your comment!
Please enter your name here