ಗುತ್ತಿಗೇದಾರರ ಕುರಿತ ಕಾರಜೋಳ ಆರೋಪಕ್ಕೆ ತಿರುಗೇಟು

0
589

ಬೆಂಗಳೂರು: ಜನೆವರಿ 06:ಕರ್ನಾಟಕ ಸ್ಟೇಟ್ ಕಂಟ್ರಾಕ್ಟರ್ಸ್ ಅಸೋಸಿಯೇಷನ್ ಕುರಿತು ನೀಡಿದ್ದ ಜಲ. ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾಡಿದ ಆರೋಪಕ್ಕೆ ಸಂಘದ ಪದಾಧಿಕಾರಿಗಳು ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಇತ್ತೀಚೆಗೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಶೇ.40 ರಷ್ಟು ಹಣವನ್ನು ಕಮೀಷನ್ ರೂಪದಲ್ಲಿ ನೀಡಬೇಕಾಗಿದೆ. ಎಂಬ ಕರ್ನಾಟಕ ಸ್ಟೇಟ್ ಕಂಟ್ರಾಕ್ಟರ್ಸ್ ಅಸೋಸಿಯೇಷನ್ (ಕೆಎಸ್‌ಸಿಎ) ಆರೋಪ ಕುರಿತು ಪ್ರತಿಕ್ರಿಯಿಸುತ್ತಾ ಈ ಹಿಂದೆಯೂ ಕಮೀಷನ್ ದಂಧೆ ಇತ್ತು ಎಂದು ಹೇಳಲಿ ಎಂದು ಸವಾಲು ಹಾಕಿದ್ದಾರೆ.
ಹೌದು! ಈ ಹಿಂದೆಯೂ ಕಮೀಷನ್ ದಂಧೆ ಇತ್ತು. ಈ ಹಿಂದಿನ ಸರಕಾರ ಮತ್ತು ಅದರ ಹಿಂದಿನ ಸರಕಾರದಲ್ಲಿಯೂ ಇತ್ತು.
ಒಟ್ಟಾರೆ ಹಲವು ದಶಕಗಳಿಂದ ಎಲ್ಲಾ ಸರಕಾರಗಳಲ್ಲಿಯೂ ಭ್ರಷ್ಟಾಚಾರವಿತ್ತು ಎಂದು ಘಂಟಾಘೋಷವಾಗಿ ಹೇಳುತ್ತಿದ್ದೇವೆ. ಆದರೆ ಇಂತಹ ಸರಕಾರದಲ್ಲಿ ಭ್ರಷ್ಟಾಚಾರವನ್ನು ಕೊನೆಗಾಣಿಸಲು ಪ್ರಯತ್ನ ನಡೆದಿತ್ತು, ಇಂತಹ ಸಚಿವರು ಸರ್ವ ಪ್ರಯತ್ನ ನಡೆಸಿದ್ದರು.
ಎಂದು ಹೇಳುವ ಅವಕಾಶ ನಮಗೆ ಒದಗಿ ಬಂದಿಲ್ಲ. ಇದೀಗ ಇಂತಹ ಸುವರ್ಣಾವಕಾಶವನ್ನು ಬಳಸಿಕೊಳ್ಳುವ ಅವಕಾಶ ಸಚಿವರು ಮತ್ತು ಅವರ ಸರಕಾರಕ್ಕೆ ಒದಗಿ ಬಂದಿದೆ. ನಿಶ್ಚಿತವಾಗಿ ಈ ಅವಕಾಶವನ್ನು ಬಳಸಿಕೊಂಡು ಈ ಕಾರಣಕ್ಕಾಗಿ ಸಚಿವರನ್ನು ಅಭಿನಂದಿಸುವ ಅವಕಾಶವನ್ನು ನಮಗೆ ಕಲ್ಪಿಸಿಕೊಡುತ್ತಾರೆ ಎಂಬ ವಿಶ್ವಾಸ ನಮಗಿದೆ.
ಎರಡನೆಯದಾಗಿ ಈ ಸಂಘದ ಸದಸ್ಯರ ಸಂಖ್ಯೆ ಕೇವಲ 800 ಎಂದು ಹೇಳಿದ್ದಾರೆ. ಕೆಎಸ್‌ಸಿಎಗೆ ಸುಮಾರು 1 ಲಕ್ಷ ಗುತ್ತಿಗೆದಾರರು. ಸದಸ್ಯರಾಗಿದ್ದಾರೆ. ಎಂಬ ಸಂಗತಿಯನ್ನು ಜಲಸಂನ್ಮೂಲ ಸಚಿವರ ಗಮನಕ್ಕೆ ತರಲು ಬಯಸುತ್ತೇವೆ. ಕೆಎಸ್‌ಸಿಎಗೆ ಸುಮಾರು ಏಳು. ದಶಕಗಳ ಸುದೀರ್ಥ ಇತಿಹಾಸವಿದೆ. ಹಿರಿಯ ಸ್ವಾತಂತ್ರ‍್ಯ ಹೋರಾಟಗಾರರಾದ ಅರಕಲಗೂಡು ವೆಂಕಟರಾಮಯ್ಯ ಅವರು ಈ ಸಂಘದ ಸಂಸ್ಥಾಪಕರು. ಗುತ್ತಿಗೆದಾರರು ಮತ್ತು ಕಾರ್ಮಿಕರ ಹಿತ ಕಾಪಾಡಲು 1948ರಲ್ಲಿ ಈ ಸಂಘಕ್ಕೆ ಅಡಿಪಾಯ ಹಾಕಿದ್ದಾರೆ. ಅಂದಿನಿAದ ಇಂದಿನವರೆಗೂ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಸಂಘ ನಡೆಯುತ್ತಾ ಬಂದಿದೆ.
ಅಂದಿನಿAದ ಈ ರಾಜ್ಯದಲ್ಲಿ ನಿರ್ಮಾಣವಾಗಿರುವ ಮೂಲಭೂತ ಸೌಕರ್ಯಗಳನ್ನು ನಿರ್ಮಾಣ ಮಾಡಿರುವ ಎಲ್ಲಾ ಗುತ್ತಿಗೆದಾರರು. ಈ ಸಂಘದ ಸದಸ್ಯರು ಎಂದು ಹೇಳಲು ಹೆಮ್ಮೆ ಪಡುತ್ತೇವೆ. . ಕೆ.ವಿ.ಪುಟ್ಟರಂಗಯ್ಯ, ಕೆ.ವಿ.ಕಾಮತ್, ಕೆ.ಎಂ.ಜೋಷಿ, ಎಚ್.ವಿಶ್ವನಾಥ್, ಸಿ.ವಿ.ಎಲ್. ಶಾಸ್ತ್ರಿ ಮೊದಲಾದ ಗಣ್ಯರು ಸಂಘವನ್ನು ಮುನ್ನಡೆಸಿದ್ದಾರೆ. ಇದುವರೆಗೂ ಒಂದೂ ತಪ್ಪು ಚುಕ್ಕೆ ಇಲ್ಲದೆ ಸಂಘವು ಕರ್ತವ್ಯ ನಿರ್ವಹಿಸುತ್ತಾ ಬಂದಿದೆ ಎಂದು ಹೇಳಲು ಹೆಮ್ಮೆಯಾಗುತ್ತದೆ.
ಮೂರನೆಯದಾಗಿ ಶೇ.40 ಕಮೀಷನ್ ಕೊಟ್ಟು ಶೇ.20 ರಷ್ಟು ತೆರಿಗೆ ಕಟ್ಟಿ ಶೇ.40ರಲ್ಲಿ ಕೆಲಸ ಮಾಡಿದ ಗುತ್ತಿಗೆದಾರರು ಯಾರು: ಎಂದು ಪ್ರಶ್ನಿಸಿದ್ದಾರೆ. ಶೇ.40ರಷ್ಟು ಕಮೀಷನ್ ಪಡೆದು ಉಳಿದ ಮೊತ್ತದಲ್ಲಿ ಕೆಲಸ ಮಾಡಿಸಿಕೊಳ್ಳುತ್ತಿದ್ದವರು ಯಾರು ಎಂದು ಪ್ರಶ್ನಿಸಿದ್ದರೆ ಲೋಕಕ್ಕೆ ಉಪಯೋಗವಾಗುತ್ತಿತ್ತು. ವ್ಯವಸ್ಥೆ ಭ್ರಷ್ಟವಾಗಲು ಪ್ರಸ್ತುತ ಸರಕಾರ ಮಾತ್ರ ಕಾರಣ ಎಂದು ಎಲ್ಲಿಯೂ ಆರೋಪ ಮಾಡಿಲ್ಲ. ಎಲ್ಲ ಪಕ್ಷಗಳ ಅವಧಿಯಲ್ಲಿಯೂ ಭ್ರಷ್ಟಾಚಾರ ಹೆಚ್ಚುತ್ತಲೇ ಬಂದಿದೆ ಎಂದು ಪ್ರತಿಪಾದಿಸುತ್ತಾ ಬಂದಿದ್ದೇವೆ.
ಸಚಿವರು ತಮ್ಮ ಇಲಾಖೆಯ ಜವಾಬ್ದಾರಿ ಹೊತ್ತ ನಂತರ ಭ್ರಷ್ಟಾಚಾರವನ್ನು ಕೊನೆಗಾಣಿಸಲು ಹಾಕಿಕೊಂಡಿರುವ ಕಾರ್ಯ
ಯೋಜನೆಗಳು, ತಮಿಳುನಾಡು ಮಾದರಿಯಲ್ಲಿ ಪ್ಯಾಕೇಜ್ ಪದ್ದತಿಗೆ ಅಂತ್ಯ ಹಾಡಿ ಸ್ಥಳಿಯ ಮತ್ತು ರಾಜ್ಯದ ಗುತ್ತಿಗೆದಾರರಿಗೆ ಮಾತ್ರ. ಕಾಮಗಾರಿಗಳು ಲಭ್ಯವಾಗುವಂತೆ. ರೂಪಿಸಿರುವ. ನಿಯಮಾವಳಿಗಳನ್ನು. ರಾಜ್ಯದ ಜನತೆಯ ಮುಂದಿಟ್ಟರೆ ಒಳಿತಾಗುತ್ತದೆ. ಒಂದು ವೇಳೆ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದರೆ ಅವರಿಗೆ ಸಹಕಾರ ನೀಡಲು ಸಂಘವು. ಸದಾ ಸಿದ್ಧವಾಗಿರುತ್ತದೆ.
ಹಲವು ದಶಕಗಳಿಂದ ವ್ಯವಸ್ಥೆ ಹೇಗೆ ಹದಗೆಡುತ್ತಾ ಬಂದಿದೆ ಎನ್ನುವುದನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಘನತೆವೆತ್ತ ರಾಜ್ಯಪಾಲರ ಗಮನಕ್ಕೂ ತಂದಿದ್ದೇವೆ. ಶೀಘ್ರದಲ್ಲೇ ಪ್ರಧಾನಿಗಳನ್ನು ಮುಖತಃ ಭೇಟಿ ಮಾಡಿ ಮತ್ತಷ್ಟು ವಿವರಗಳನ್ನು ನೀಡಲಿದ್ದೇವೆ. ಆಡಳಿತಾರೂಢ ಬಿಜೆಪಿ ಪಕ್ಷದ ಪರಿಷ್ಠರನ್ನೂ ಭೇಟಿ ಮಾಡಿ ಭ್ರಷ್ಟಾಚಾರವನ್ನು ಕೊನೆಗಾಣಿಸಲು ಸರಕಾರಕ್ಕೆ ನಿರ್ದೆಶನ ನೀಡಬೇಕು ಎಂದು ಮನವಿ ಮಾಡಿಕೊಳ್ಳಲಿದ್ದೇವೆ ಎಂದು ಸಂಘದ ಅಧ್ಯಕ್ಷ ಕೆಂಪಣ್ಣ ಹೇಳಿದ್ದಾರೆ.

LEAVE A REPLY

Please enter your comment!
Please enter your name here