ಅಶೋಕ ಗೆಹ್ಲೋಟ್‌ಗೆ ಕೊರೊನಾ ಸೋಂಕು

0
653

ಜೈಪುರ: ಜನೆವರಿ 06:ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ಕೋವಿಡ್ ಸೋಂಕು ಕಂಡು ಬಂದಿದ್ದು, ಈ ವಿಚಾರವನ್ನು ಖುದ್ದಾಗಿ ಅವರು ಟ್ವೀಟ್ ಮೂಲಕ ಬಹಿರಂಗಪಡಿಸಿದ್ದಾರೆ.
ಕೋರೋನಾ ದೃಢಪಟ್ಟಿರುವ ಬಗ್ಗೆ ಟ್ವೀಟ್ ಮಾಡಿರುವ ಗೆಹ್ಲೋಟ್, ನಾನು ಈ ಸಂಜೆ ಕೊರೋನಾ ಪರೀಕ್ಷೆಗೆ ಒಳಗಾದೆ. ನನಗೆ ಕೋವಿಡ್ ಕಾಣಿಸಿಕೊಂಡಿದೆ. ಆದರೆ ಸೌಮ್ಯ ಲಕ್ಷಣಗಳಿವೆ ಎಂದು ಹೇಳಿದ್ದಾರೆ.
ಇಂದು ನನ್ನೊಂದಿಗೆ ಸಂಪರ್ಕಕ್ಕೆ ಬಂದವರೆಲ್ಲ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಮತ್ತು ಐಸೋಲೇಟ್ ಆಗಿ ಎಂದು ಸಿಎಂ ಮನವಿ ಮಾಡಿದ್ದಾರೆ.
ಬುಧವಾರ ರಾಜಸ್ಥಾನದ ಮುಖ್ಯಮಂತ್ರಿ ಟ್ವೀಟ್ ಮಾಡಿ, ಕೊರೋನಾದ ಒಮ್ಮೆಕ್ರಾನ್ ರೂಪಾಂತರವು ಅಪಾಯಕಾರಿ ಅಲ್ಲ ಎಂದು ಸಾರ್ವಜನಿಕರು ಊಹಿಸಿದ್ದಾರೆ, ಅದಕ್ಕಾಗಿಯೇ ಜನರು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಆದರೆ ಕೋವಿಡ್ ರೀತಿಯಲ್ಲಿ ಒಮ್ಮೆಕ್ರಾನ್ ಕೂಡ ಉಲ್ಬಣಗೊಳ್ಳಬಹುದು ಎಂದು ತಜ್ಞರು ಹೇಳಿದ್ದಾರೆ ಎಂದಿದ್ದರು.

LEAVE A REPLY

Please enter your comment!
Please enter your name here