ಕೆಪಿಎಸ್‌ಸಿ ಪ್ರಥಮ ಪರೀಕ್ಷೆಗೆ ಹಾಜರಾಗದ ಅಭ್ಯರ್ಥಿಗಳಿಗೆ ಅವಕಾಶ ನೀಡಿದ ಕೆಪಿಎಸ್‌ಸಿ

0
681
KPSC exam: 13,000 candidates appear, 5,000 absent - Star of Mysore

ಕಲಬುರಗಿ, ಡಿ. ೧೫: ದಿನಾಂಕ ೧೪ರಂದು ನಡೆದ ಲೋಕೋಪಯೋಗಿ ಇಲಾಖೆಯಲ್ಲಿನ ಸಹಾಯಕ ಅಭಿಯಂತರ ಸಿವಿಲ್ ಹುದ್ದೆಗಳಿಗೆ ನಡೆದ ಪ್ರಥಮ ಪರೀಕ್ಷೆಗೆ ಹಾಜರಾಗದ ಅಭ್ಯರ್ಥಿಗಳಿಗೆ ಮರು ಪರೀಕ್ಷೆಯನ್ನು ನಡೆಸಲು ಕೆಪಿಎಸ್‌ಸಿ ಅವಕಾಶ ನೀಡಿದೆ.
ಆಯೋಗವು ದಿನಾಂಕ: ೧೪-೧೨-೨೦೨೧ ರಂದು ನಡೆಸಿದ ಲೋಕೋಪಯೋಗಿ ಇಲಾಖೆಯಲ್ಲಿನ ಸಹಾಯಕ ಅಭಿಯಂತರರು ವಿಭಾಗ-೧ (ಸಿವಿಲ್) ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕಲಬುರಗಿ ಪರೀಕ್ಷಾ ಕೇಂದ್ರದಲ್ಲಿ ಹಾಜರಾಗಲು ಹಾಸನ – ಸೋಲಾಪುರ ಎಕ್ಸ್ಪ್ರೆಸ್ ಮತ್ತು ಉದ್ಯಾನ್ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಅಭ್ಯರ್ಥಿಗಳು ಸದರಿ ರೈಲು ನಿಗದಿತ ವೇಳೆಗೆ ಕಲಬುರಗಿ ಕೇಂದ್ರವನ್ನು ತಲುಪಲು ತಡವಾದ ಹಿನ್ನೆಲೆಯಲ್ಲಿ ಆಯೋಗವು ದಿನಾಂಕ: ೧೪-೧೨-೨೦೨೧ರಂದು ಹೊರಡಿಸಿದ ಪ್ರಕಟಣೆಯಲ್ಲಿ ” ಕಲಬುರಗಿ ಕೇಂದ್ರದಲ್ಲಿನ ಬೆಳಗ್ಗಿನ ಅಧಿವೇಶನದ ಪರೀಕ್ಷೆಗೆ ಅಭ್ಯರ್ಥಿಗಳು ಹಾಜರಾಗಲು ಸಾಧ್ಯವಾಗಿದೆ ಬಂದಿರುವ ಹಿನ್ನೆಲೆಯಲ್ಲಿ ಈ ಅಭ್ಯರ್ಥಿಗಳಿಗೆ ಸಂಬAಧಿಸಿದAತೆ ಮಾತ್ರ ಆಯೋಗವು ಸೂಕ್ತ ನಿರ್ಣಯ ಕೈಗೊಳ್ಳುವುದು. ಈ ಹಿನ್ನೆಲೆಯಲ್ಲಿ ಎಲ್ಲಾ ಅಭ್ಯರ್ಥಿಗಳು ಮಧ್ಯಾಹ್ನ ನಡೆಯುವ ಪರೀಕ್ಷೆಗೆ ಕೂಡಲೇ ಹಾಜರಾಗಲು ಸೂಚಿಸಿದ್ದು, ಅದರಂತೆ ಅಭ್ಯರ್ಥಿಗಳು ಪರೀಕ್ಷೆ ಬರಿದಿದ್ದಾರೆ.
ಅದರಂತೆ ಕಲಬುರಗಿ ಪರೀಕ್ಷಾ ಕೇಂದ್ರಗಳಲ್ಲಿ ಬೆಳಗ್ಗಿನ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದೇ ಮಧ್ಯಾಹ್ನದ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳಿಗೆ ಮಾತ್ರ ಸಾಮಾನ್ಯ ಪತ್ರಿಕೆ೧ ಮರು ಪರೀಕ್ಷೆಯನ್ನು ದಿನಾ೦ಕ:೨೯-೧೨-೨೦೨೧ ರಂದು ಬೆಂಗಳೂರು ಕೇಂದ್ರದಲ್ಲಿ ನಡೆಸಲು ಆಯೋಗವು ನಿರ್ಣಯಿಸಿರುತ್ತದೆ.
ಆದ್ದರಿಂದ ಈ ರೀತಿ ಕಲಬುರಗಿ ಕೇಂದ್ರದಲ್ಲಿ ಬೆಳಗ್ಗಿನÀ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದೇ ಮಧ್ಯಾಹ್ನದ ಅಧಿವೇಶನದ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಕೂಡಲೇ ಈ ಕೆಳಕಂಡ ದಾಖಲೆಗಳನ್ನು ದಿನಾಂಕ:೨೨-೧೨-೨೦೨೧ರೊಳಗಾಗಿ ಕಡ್ಡಾಯವಾಗಿ ಕಾರ್ಯದರ್ಶಿಗಳು, ಕರ್ನಾಟಕ ಲೋಕಸೇವಾ ಆಯೋಗ, ಬೆ೦ಗಳೂರು, ಇವರಿಗೆ ಸಲ್ಲಿಸುವಂತೆ ಸೂಚಿಸಿದೆ. ಒಂದು ವೇಳೆ ದಾಖಲೆಗಳನ್ನು ಸಲ್ಲಿಸಲು ವಿಫಲವಾದ ಅಭ್ಯರ್ಥಿಗಳಿಗೆ ಮರು ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದಿಲ್ಲ ಎಂದು ಆದೇಶ ಜಾರಿ ಮಾಡಿದೆ.
ಹಾಸನ – ಸೋಲಾಪುರ ಎಕ್ಸ್ಪ್ರೆಸ್ ಮತ್ತು ಉದ್ಯಾನ್ ಎಕ್ಸ್ಪ್ರೇಸ್ ರೈಲಿನಲ್ಲಿ ಪ್ರಯಾಣಿಸಿದ ಸಂಬAಧ ಟಿಕೆಟ್‌ನ ಪತ್ರ ಹಾಗೂ ಆಯೋಗವು ನೀಡಿರುವ ಪ್ರವೇಶ ಪತ್ರದ ಪ್ರತಿಯನ್ನು ದಿನಾಂಕ ೨೨.೧೨.೨೦೨೧ರೊಳಗಾಗಿ ಕಡ್ಡಾಯ ಸಲ್ಲಿತಕ್ಕದ್ದು, ಈ ದಾಖಲೆಗಳಣ್ನು ಸ್ಟೀಡ್ ಪೋಸ್ಟ ಅಥವಾ ಖುದ್ದಾಗಿ ಕೇಂದ್ರ ಕಛೇರಿಗೆ ಅಥವಾ ಇmಚಿiಟ : ಞಠಿಚಿsಛಿ-ಞಚಿ@ಟಿiಛಿ.iಟಿ ಮುಖಾಂತರ ಸಲ್ಲಿಸುವುದು ಕಡ್ಡಾಯವಾಗಿದೆ ಎಂದು ಆಯೋಗದ ಕಾರ್ಯದರ್ಶಿಯವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here