ಕನ್ನಡ ಧ್ವಜಕ್ಕೆ ಬೆಳಗಾವಿಯಲ್ಲಿ ಬೆಂಕಿ ಹಚ್ಚಿ ಅವಮಾನ: ಗಡೀಪಾರಿಗೆ ಒತ್ತಾಯ

0
559

ಸೇಡಂ: ಬೆಳಗಾವಿಯಲ್ಲಿ ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿ ಅವಮಾನಿಸಿರುವ ಕನ್ನಡ ವಿರೋಧಿಗಳನ್ನು ಗಡಿಪಾರು ಮಾಡಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿದ್ದು, ಕನ್ನಡ ವಿರೋಧಿಗಳಿಗೆ ಕನ್ನಡ ನಾಡಿನಿಂದ ಗಡೀಪಾರು ಮಾಡಬೇಕು. ಬೆಳಗಾವಿ ಕನ್ನಡ ನಾಡಿಗೆ ಸೇರಿದ್ದು. ಕನ್ನಡ ನಾಡಿನ ಅನ್ನ, ನೀರು ಸೇವಿಸಿ ಕನ್ನಡ ನಾಡಿನ ಮಣ್ಣಿನಲ್ಲಿ ಆಶ್ರಯ ಪಡೆದು, ಕನ್ನಡದ ಧ್ವಜವನ್ನು ಸುಟ್ಟವರು ನಾಡು-ನುಡಿಯ ದ್ರೋಹಿಗಳು, ಅಂತಹವರಿಗೆ ಉಗ್ರ ಶಿಕ್ಷೆ ವಿಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಬೆಳಗಾವಿಯಲ್ಲಿ ಕನ್ನಡಿಗರ ಬೃಹತ್ ಸಮಾವೇಶ ನಡೆಸಿ, ಕನ್ನಡನಾಡಿನ ವಿರೋಧಿಗಳಿಗೆ ಸೂಕ್ತ ಪ್ರತ್ಯುತ್ತರ ನೀಡಬೇಕು ಎಂದು ಸಾಹಿತಿ, ಪತ್ರಕರ್ತರು ಆಗಿರುವ ಮಹಿಪಾಲರೆಡ್ಡಿ, ಬೆಳಗಾವಿಯಲ್ಲಿ ಕನ್ನಡ ಸಾಹಿತಿಗಳ, ಚಿಂತಕರ ಮಹಾಸಭೆ ನಡೆಸಿ ಈ ಕನ್ನಡ ವಿರೋಧಿ ಕೃತ್ಯವನ್ನು ಒಕ್ಕೊರಲಿನಿಂದ ಖಂಡಿಸಬೇಕು ಎಂದು ಕೋರಿದ್ದಾರೆ.

LEAVE A REPLY

Please enter your comment!
Please enter your name here