ಕಲಬುರಗಿ, ಡಿ. 12: ನಗರ ಪುಠಾಣಿಗಲ್ಲಿ ನಿವಾಸಿ ಕೃಷ್ಣರಾಜ ಪಂಡಿತ ನಿಧನರಾಗಿದ್ದಾರೆ.
63 ವರ್ಷದ ಪಂಡಿತ ಅವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಶನಿವಾರ ರಾತ್ರಿ ಅವರು ತಮ್ಮ ಸ್ವ ಗೃಹದಲ್ಲಿ ನಿಧನರಾದರು.
ಕೃಷ್ಣರಾಜ ಪಂಡಿತ ಅವರು ಪ್ರಖ್ಯಾತ ಚಿತ್ರಕಲಾವಿದ ದಿ. ಡಾ. ಎಸ್. ಎಂ. ಪಂಡೀತ ಅವರು ಪುತ್ರರಾಗಿದ್ದಾರೆ.
ದಿವಂಗತರು ಪತ್ನಿ ಮತ್ತು ಒಬ್ಬ ಪುತ್ರ, ಒಬ್ಬ ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಬಿಟ್ಟು ಅಗಲಿದಿದ್ದಾರೆ.
ಮೃತರ ಅಂತ್ಯಕ್ರಿಯೇಯು ಇಂದು ರವಿವಾರ ಮಧ್ಯಾಹ್ನ 12 ಗಂಟೆಗೆ ಸಂತ್ರಾವಾಡಿ ರುದ್ರಭೂವಿಯಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.