ಕಲಬುರಗಿ, ಡಿ. 07: ಚುನಾವಣೆ ಬಂದಾಗಲೆಲ್ಲ ಪಂಚಾಯತಿ ಸದಸ್ಯರ ಬಗ್ಗೆ ಭಾರತೀಯ ಜನತಾ ಪಕ್ಷಕ್ಕೆ ಪ್ರೀತಿ ಉಕ್ಕಿ ಹರಿವಯತ್ತೇ ಎಂದು ಕೆಪಿಸಿ ವಕ್ತಾರ ಹಾಗೂ ಶಾಸಕ ಪ್ರೀಯಾಂಕ್ ಎಂ. ಖರ್ಗೆ ಅವರು ಹೇಳಿದ್ದಾರೆ.
ಅವರು ಮಂಗಳವಾರ ನಗರದ ಗಾಂಧಿಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ಪಂಚಾಯತಿ ವ್ಯವಸ್ಥೆಯಲ್ಲಿ ಬಿಜೆಪಿಗೆ ನಂಬಿಕೆ ಇಲ್ಲ, ದಿ ರಾಜೀವ್‌ಗಾಂಧಿಯವರು ಪಂಚಾಯತಿ ವ್ಯವಸ್ಥೆಯಲ್ಲಿ ಮೀಸಲಾತಿ ಜಾರಿಗೆ ತಂದರು, ಆದರೆ ಬಿಜೆಪಿ ಸಂವಿಧಾನದಲ್ಲಿ ಮೀಸಲಾತಿ ತಿದ್ದುಪಡಿ ಪ್ರಶ್ನಿಸಿಕೋರ್ಟ್ ಮೊರೆ ಹೋಗಿತ್ತು ಎಂದು ಅವರುಬಿಜೆಪಿಯವರಿಗೆ ಮೀಸಲಾತಿ ಬಗ್ಗೆ ಆಸಕ್ತಿ ಇಲ್ಲ, ರಾಮಜೋಯಿಸ್ ರಿಟ್ ಪಿಟಿಷನ್ ಹಾಕಿದ್ದರು ಎಂದರು.
ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಪಂಚಾಯತ್ ರಾಜ್ಯ ವ್ಯವಸ್ಥೆ ಬಿಜೆಪಿಯಿಂದ ಕೈತಪ್ಪಿದೆ, ಸರ್ಕಾರ ಪಂಚಾಯತ ಚುನಾವಣೆ ಪ್ರತಿ ಐದು ವರ್ಷಕ್ಕೊಮ್ಮೆ ಕಡ್ಡಾಯವಾಗಿ ನಡೆಸಬೇಕು ಆದರೆ ಬಿಜೆಪಿ ಸರಕಾರಚುನಾವಣೆ ವಿಚಾರದಲ್ಲಿ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ, ಕ್ಷೇತ್ರಗಳ ಪುನರ್ ವಿಂಗಡನೆ ಮಾಡಲು ಸರಕಾರ ಮುಂದಾಗಿ ಜಿಲ್ಲಾ ಪಂಚಾಯತ್ ತಾಲೂಕ ಪಂಚಾಯತ್ ಚುನಾವಣೆಗಳನ್ನು ಮುಂದೂಡಲು ಹುನ್ನಾರ ನಡೆಸಿದೆ ಎಂದರು ಅವರು ಆರೋಪಿಸಿದರು.
ಸರಕಾರ ಹೈಕೋರ್ಟ್ ತೀರ್ಪಿನ ಅನ್ವಯ ಚುನಾವಣೆ ನಡೆಸಬೇಕೆಂದು ಪ್ರಿಯಾಂಕ್ ಖರ್ಗೆ ಅವರು ಆಗ್ರಹಿಸಿದರು. ಬಿಜೆಪಿ ಸರಕಾರ ಪಂಚಾಯತ ವ್ಯವಸ್ಥೆಯನ್ನ ಆರ್ಥಿಕವಾಗಿ ಬಲಹೀನವಾಗಿ ಮಾಡಲಾಗುತ್ತಿದೆ ಎಂದ ಅವರು ಹದಿನೈದನೆ ಹಣಕಾಸು ವ್ಯವಸ್ಥೆಯಲ್ಲಿ ಜನರ ಕನಸು ನನಸಾಗುವಂತೆ ಕಾಣತ್ತಿಲ್ಲ ಎಂದರು.
ಹಳ್ಳಹಿಡಿಯುತ್ತಿರುವ ಉದ್ಯೋಗ ಯೋಜನೆ :
ಭಾರತೀಯ ಜನತಾ ಅಧಿಕಾರಕ್ಕೆ ಬಂದ ಮೇಲೆ ಉದ್ಯೋಗ ಖಾತ್ರಿ ಯೋಜನೆಯನ್ನ ಹಳ್ಳ ಹಿಡಿಸಲು ಮುಂದಾಗಿದೆ, ಮಹಾಮಾರಿ ಕೊರೊನಾ ಸಂದರ್ಭದಲ್ಲಿ ಜೀವನ ಕಳೆದುಕೊಂಡ ಜನರಿಗೆ ಉದ್ಯೋಗ ಖಾತ್ರ ಯೋಜನೆ ಶ್ರೀರಕ್ಷೆಯಗಿತ್ತು, ಕೆಲಸ ಮಾಡಿದ್ರು ಸಹ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಸಿಗುತ್ತಿಲ್ಲ ಎಂದರು.
ಇರೋ ನಗರವನ್ನ ಸರಿಯಾಗಿ ಕಾಪಾಡಲು ಆಗುತ್ತಿಲ್ಲ, ಅಂಥಹರದಲ್ಲಿ ಕಲಬುರಗಿ ನಗರವನ್ನು ಸ್ಮಾರ್ಟ ಸಿಟಿಯನ್ನಾಗಿ ಮಾಡುವುದಾಗಿ ಜಿಲ್ಲೆ ನಾಯಕರು ಹೇಳುತ್ತಿದಾರೆ. ಏನಿದ್ದರೂ ಸರಕಾರ ಸಾಧನೆಗಳು ಕೇವಲ ಪತ್ರಿಕೆಗಳಲ್ಲಿ ಮಾತ್ರ ಎಂದು ಬಿಜೆಪಿ ಸರಕಾರದದ ವಿರುದ್ಧ ಖರ್ಗೆ ಆಕ್ರೋಶ ಹೋರಹಾಕಿದರು.
ಅವರು ಮುಂದುವರೆದು ಮಾತನಾಡಿ, ಜಿಲ್ಲೆಗೆ ಇದುವರೆಗೆ ಒಂದು ಸಚಿವ ಸ್ಥಾನವು ನೀಡಿಲ್ಲ ಅಲ್ಲದೇ ಕನಿಷ್ಟ ಉಸ್ತುವಾರಿ ಸಚಿವರನ್ನು ಕೂಡ ನೇಮಿಸಿಲ್ಲ ಎಂದು ಜರಿದರು.
ಕಾಂಗೈ ಅಭ್ಯರ್ಥಿ ಗೆಲುವು ಕಟ್ಟಿಟ್ಟ ಬುತ್ತಿ
ಭಾರತೀಯ ಜನತಾ ಪಕ್ಷ ಏನೇ ಕುತಂತ್ರ ಮಾಡಿದರೂ ಕೂಡಾ ಈ ಬಾರಿ ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಕಾಂಗ್ರೆಸ್ ಅಭ್ಯರ್ಥಿಯ ಗೆಲುವು ಕಟ್ಟಿಟ್ಟ ಬುತ್ತಿ, ಬಿಜೆಪಿ ಅಭ್ಯರ್ಥಿ ಬಿ. ಜಿ. ಪಾಟೀಲ್ ಅವರು ತಮ್ಮ ಅಧಿಕಾರಾವಧಿಯಲ್ಲಿ ಏನೇನು ಕೆಲಸ ಮಾಡಿಲ್ಲ, ಅವರಿಗೆ ಪಂಚಾಯತ್ ರಾಜ್ ವ್ಯವಸ್ಥೆನೇ ಗೊತ್ತಿಲ್ಲ ಎಂದು ಪ್ರಿಯಾಂಕ್ ಖರ್ಗೆ ನಮ್ಮ ಅಭ್ಯರ್ಥಿ ಪಂಚಾಯತ್ ರಾಜ್ ವ್ಯವಸ್ಥೆಯಿಂದ ಬಂದವರು, ಬಿಜೆಪಿ ಅಭ್ಯರ್ಥಿ ವ್ಯಾಪಾರದ ಹಿನ್ನೆಲೆಯಿಂದ ಬಂದವರು ಅವರಗಿಎ ಪಂಚಾಯತ್ ರಾಜ್ ಬಗ್ಗೆ ಅರಿವಿಲ್ಲ ಎಂದರು.
ಹಣವAತ-ಗುಣವAತರ ನಡುವಿನ ಚುನಾವಣೆ:
ಪರಿಷತ್ ಚುನಾವಣೆ ಎದುರಿಸಲು ಹುಬ್ಬಳ್ಳಿಯ ಪ್ರತಿಷ್ಠಿತ ಸಾರಿಗೆ ಸಂಸ್ಥೆ ಸಿಬ್ಬಂದಿಗಳು ಕಲಬುರಗಿಗೆ ಬಂದಿದ್ದು, ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ನಗರದ ಸಿಟ್ರೇಸ್ ಹೋಟೆಲ್‌ನಲ್ಲಿ ಕುಳುತುಕೊಂಡು ಗೆಲುವಿಗಾಗಿ ಇನ್ಸೆöÊಡ್ ಪ್ಯಾನ್ ಮಾಡುತ್ತಿದ್ದು, ಚುನಾವಣೆಯಲ್ಲಿ ಹಣದ ಹೊಳೆ ಹರಿಸಲು ರೂಪುರೇಷ ಮಾಡುತ್ತಿದ್ದಾರೆಂದು ಪರೋಕ್ಷವಾಗಿ ಖರ್ಗೆ ಆರೋಪ ಮಾಡಿದ್ದಾರೆ.
ಇನ್ನು ಬಿಜೆಪಿ ಅಭ್ಯರ್ಥಿ ಭ್ರಷ್ಟರಂತ ನಾವೆಲ್ಲೂ ಹೇಳಿಲ್ಲ, ಹಣ ಗಳಿಸಿದ್ರೆ ಐಟಿಯವರು ನೋಡಿಕೊಳ್ಳುತ್ತಾರೆ, ನಾವು ಜನರ ಬಳಿ ಕೈಜೋಡಿಸಿ ಮತ ಕೇಳುತ್ತಿದ್ದೇವೆ, ಅವರು ಕೈತುಂಬ ಹಣ ನೀಡಿ ಮತ ಕೇಳುತ್ತಿದ್ದಾರೆ, ಕಲಬುರಗಿಯಲ್ಲಿ ಪರಿಷತ್ ಚುನಾವಣೆ ಹಣವಂತ ಮತ್ತು ಗುಣವಂತರ ಮಧ್ಯೆ ನಡೆಯುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಎಂಎಲ್ಸಿಗಳಾದ ಅಲ್ಲಂಪ್ರಭು ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನೀಲಕಂಠರಾವ ಮೂಲಗೆ,ವಿ.ಪ. ಅಭ್ಯರ್ಥಿ ಶಿವಾನಂದ ಪಾಟೀಲ್ ಮರತೂರ ಸೇರಿದಂತೆ ಇನ್ನಿತರ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.