ಕಲಬುರಗಿಯಲ್ಲಿ ಹೋಲ್ಡಿಂಗ್ ಮಾಫಿಯಾ

0
1052

ಕಲಬುರಗಿ, ಡಿ. 07: ಕಲಬುರಗಿ ನಗರದಲ್ಲಿ ಸುಮಾರು 200ಕ್ಕೂ ಹೆಚ್ಚು ಜಾಹಿರಾತು ಹೋಲ್ಡಿಂಗ್ಸ್ ಮತ್ತು 6 ಆರ್ಚಗಳಿದ್ದು ಈವರೆಗೆ ಯಾರು ಈ ಇದರ ಮಾಲಿಕರು ಮತ್ತು ಈ ವರ್ಷದ ಕರ ಯಾರು ಭರಿಸಿದ್ದಾರೆಂಬುದು ಮಹಾನಗರಪಾಲಿಕೆಗೆ ಗೊತ್ತಿಲ್ಲ, ಇಲ್ಲಿ ನಡೆಯುತ್ತಿರುವುದು ಹೋಲ್ಡಿಂಗ್ ಮಾಫಿಯಾ ಎಂಬುದಾಗಿದೆ.
ನಗರದಲ್ಲಿ ಸುಮಾರು 10 ರಿಂದ 15 ಏಜೆನ್ಸಿಗಳು ಈ ಎಲ್ಲ ಹೋಲ್ಡಿಂಗ್‌ಗಳ ಮಾಲಿಕತ್ವ ಹೊಂದಿದ್ದು, 2020-2021ನೇ ಸಾಲಿನ ಮಹಾನಗರಪಾಲಿಕೆ ನಿಗದಿ ಮಾಡಿದ ಪ್ರತಿ ಚದರಂಚಿಗೆ 35 ರೂ ನಿಗದಿ ಮಾಡಿದ್ದು, ಕೆಲವು ಹೊಲ್ಡಿಂಗ್ ಕಂಪನಿಗಳು ಮಾತ್ರ ಮಹಾನಗರ ಪಾಲಿಗೆ ಟೆಕ್ಸ್ ಕಟ್ಟಿದ್ದು, ಇನ್ನುಳಿದ ಹಲವಾರು ಸಂಸ್ಥೆಗಳು ಇದನ್ನು ಕ್ಯಾರೆ ಅನ್ನುವಂತೆ ನಿರ್ಲಕ್ಷö್ಯ ವಹಿಸಿವೆ.
ಈಗಾಗಲೇ ಹಲವಾರು ಕಂಪನಿಗಳ ಹೋರ್ಡಿಂಗ್ಸ್ ಮಾಲಿಕರು ಹಣವನ್ನು ನಗದು ರೂಪದಲ್ಲಿ ತುಂಬಿದರೂ ಕೂಡ ಅವರಿಗೆ ನಗದು ಸ್ವೀಕೃತಿ ಬಗ್ಗೆ ರಸೀದಿ ದೊರೆತ್ತಿಲ್ಲ.
ಈ ಬಗ್ಗೆ ಮಹಾನಗರಪಾಲಿಕೆಗೆ ಕರ ತುಂಬಿದ ಪ್ರಕಾಶ ಆರ್ಟ್ಸ ಮತ್ತು ಸೇರಿದಂತೆ ಇನ್ನು ಹಲವರಿಗೆ ರಸೀದಿ ಕೊಟ್ಟಿಲ್ಲ ಎಂದು ವರದಿಯಾಗಿದೆ.
ಈಗಾಗಲೇ ನಗರದಲ್ಲಿ ಸುಮಾರು 10ಕ್ಕೂ ಹೆಚ್ಚು ಕಂಪನಿಗಳು ಹೋಲ್ಡಿಂಗ್ಸ್ನ ಮಾಲಿಕತ್ವ ಹೊಂದಿದ್ದು ಇಲ್ಲಿಯವರೆಗೆ ಯಾರು ಎಷ್ಟು ಕರ ತುಂಬಿದ್ದಾರೆ ಎಂದು ಕಲಬುರಗಿ ಮಹಾನಗರಪಾಲಿಕೆ ಸ್ಟಷ್ಟಪಡಿಸಬೇಕಾಗಿದೆ.

LEAVE A REPLY

Please enter your comment!
Please enter your name here