ಡಿ. 8ರಿಂದ ಮಧ್ಯ ಮಾರಾಟ ನಿಷೇಧ

0
510
Bihar liquor ban: Nitish Kumar govt passes liquor amendment law, says  prohibition for betterment of poor

ಕಲಬುರಗಿ,ಡಿ.06:ಕರ್ನಾಟಕ ವಿಧಾನ ಪರಿಷತ್ತಿನ 02-ಕಲಬುರಗಿ ಕ್ಷೇತ್ರದ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯಾದ್ಯಂತ ಇದೇ ಡಿಸೆಂಬರ್ 10 ರಂದು ಮತದಾನ ನಡೆಯಲಿದೆ. ಅದೇ ರೀತಿ ಡಿಸೆಂಬರ್ 14 ರಂದು ಮತ ಎಣಿಕೆ ನಡೆಯಲಿದೆ. ಈ ಚುನಾವಣೆಯು ಮುಕ್ತ, ಶಾಂತಿಯುತ ಹಾಗೂ ನ್ಯಾಯ ಸಮ್ಮತವಾಗಿ ನಡೆಸಲು ಅನುಕೂಲವಾಗುವಂತೆ ಕಲಬುರಗಿ ಜಿಲ್ಲೆಯಾದ್ಯಂತ ಮದ್ಯ ಮಾರಾಟ ಹಾಗೂ ಮದ್ಯ ಸೇವನೆಯನ್ನು ನಿಷೇಧಿಸಿ ಕಲಬುರಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ವಿ.ವಿ. ಜ್ಯೋತ್ಸಾö್ನ ಅವರು ಆದೇಶ ಹೊರಡಿಸಿದ್ದಾರೆ.
ಇದೇ ಡಿಸೆಂಬರ್ 10 ರಂದು ಮತದಾನದ ಪ್ರಯುಕ್ತ ಡಿಸೆಂಬರ್ 8 ರ ಮಧ್ಯರಾತ್ರಿಯಿಂದ ಡಿಸೆಂಬರ್ 10ರ ಮಧ್ಯರಾತ್ರಿಯವರೆಗೆ ಹಾಗೂ ಡಿಸೆಂಬರ್ 14 ರಂದು ಮತ ಎಣಿಕೆ ಕಾರ್ಯದ ಪ್ರಯುಕ್ತ ಇದೇ ಡಿಸೆಂಬರ್ 14ರ ಬೆಳಿಗ್ಗೆ 6 ರಿಂದ ಡಿಸೆಂಬರ್ 15 ರ ಬೆಳಿಗ್ಗೆ 6 ಗಂಟೆಯವರೆಗೆ ಕಲಬುರಗಿ ಜಿಲ್ಲೆಯಾದ್ಯಂತ ಎಲ್ಲಾ ರೀತಿಯ ಮದ್ಯ ಮಾರಾಟ, ಶೇಖರಣೆ, ಹೊರಗಿನಿಂದ ಮದ್ಯ ಇತ್ಯಾದಿಗಳನ್ನು ತಂದು ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿದ್ದು, ಬಿಯರ್ ಬಾರ್‌ಗಳು, ಮದ್ಯದ ಡೀಪೋ (ಕೆ.ಎಸ್.ಬಿ.ಸಿ.ಎಲ್.) ಗಳನ್ನು ಹಾಗೂ ಮದ್ಯ ಮಾರಾಟ ಅಂಗಡಿಗಳನ್ನು ಮುಚ್ಚಬೇಕೆಂದು ಅವರು ಆದೇಶ ಹೊರಡಿಸಿದ್ದು, ಈ ಮೇಲ್ಕಂಡ ದಿನಗಳಂದು ಶುಷ್ಕ ದಿನಗಳೆಂದು (ಆಡಿಥಿ ಜಚಿಥಿ) ಘೋಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here