ರಣರೋಚಕ ಕ್ರಿಕೆಟ್ ಪಂದ್ಯದಲ್ಲಿ ಪತ್ರಕರ್ತರ ತಂಡಕ್ಕೆ ಭಾರೀ ಜಯ

0
771

ಕಲಬುರಗಿ, ಡಿ. 03: ಜಿಲ್ಲಾ ಪೋಲಿಸ್ ಕ್ರೀಡಾಕೂಟ ನಿಮಿತ್ಯ ್ಲ ಪೋಲಿಸ್ ತಂಡ ಹಾಗೂ ಜಿಲ್ಲಾ ಪತ್ರಕರ್ತರ ತಂಡಗಳ ನಡುವೆ ನಡೆದ ರಣರೋಜಕ ಕ್ರಿಕೆಟ್ ಪಂದ್ಯದಲ್ಲಿ ಪತ್ರಕರ್ತರ ತಂಡವು ಪೋಲಿಸ್ ತಂಡದ ವಿರುದ್ದ 14 ರನ್‌ಗಳಿಂದ ಗೆಲುವು ಸಾಧಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪತ್ರಕರ್ತರ ತಂಡವು ಆರಂಭದಲ್ಲಿ ಪ್ರಾರಂಭಿಕ ಆಟಗಾರರ ವಿಕೆಟ್ ಕಳೆದುಕೊಂಡಾಗ ತಂಡಕ್ಕೆ ವೇಗಗತಿಯಲ್ಲಿ ರನ್‌ಗಳಿಸಿಕೊಟ್ಟ ಸ್ಫೋಟಕ್ ಬ್ಯಾಟ್ಸ್ಮನ್ ಸಂಜು ರಾಠೋಡ ಅವರ 50 ರನ್ ಹಾಗೂ ತಂಡ ನಾಯಕ ಪ್ರವೀಣ ರೆಡ್ಡಿ ಅವರ ಬಿರುಸಿನ 46ರನ್‌ಗಳ ನೆರವಿನಿಂದ ನಿಗದಿತ 12 ಓವರ್‌ಗಳಲ್ಲಿ 137 ರನ್‌ಗಳನ್ನು ಮಾಡಿತು.
ಪೋಲಿಸ್ ತಂಡದ ಪರವಾಗಿ ಕಾಳಗಿ ಸಿಪಿಐ 3 ಓವರ್‌ಗಳಲ್ಲಿ 36 ರನ್‌ಗಳನ್ನು ನೀಡಿ 3 ವಿಕೆಟ್ ಪಡೆದು ತಂಡದ ಪರವಾಗಿ ಯಶಸ್ವಿ ಬೌಲರ್ ಎನಿಸಿಕೊಂಡರು.
ಪೋಲಿಸ್ ತಂಡದ ಕಳಪೆ ಕ್ಷೇತ್ರರಕ್ಷಣೆಯಿಂದ ಈ ಪಂದ್ಯದ ಅವರ ಕೈತಪ್ಪಿತಂತಾಗಿದ್ದು, ಅಲ್ಲದೇ ಪತ್ರಕರ್ತರ ತಂಡ ಉತ್ತಮ ಕ್ಷೇತ್ರ ರಕ್ಷಣೆ ಜೊತೆಗೆ ಕೊನೆಯ ಮೂರು ಓವರಗಳನ್ನು ಕರಾರುವಾಕ್ಯವಾಗಿ ಮಾಡಿದ್ದರಿಂದ ಈ ಗೆಲುವು ಪತ್ರಕರ್ತರ ತಂಡಕ್ಕೆ ದಕ್ಕಿದೆ.
ಪೋಲಿಸ ತಂಡವು 18 ಅಧಿಕೃತ ರನ್ನಗಳನ್ನು ನೀಡಿದರೆ ಪತ್ರಕರ್ತರ ತಂಡವು ಕೇವಲ 4 ರನ್ ಅಧಿಕೃತವಾಗಿ ನೀಡಿದೆ.
ಪತ್ರಕರ್ತರ ತಂಡದ 137 ರನ್‌ಗಳನ್ನು ಬೆನ್ನಟ್ಟಿದ್ದ ಜಿಲ್ಲಾ ಪೋಲಿಸ್ ತಂಡು ನಿಗದಿತ 12 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 123 ರನ್ ಮಾಡಿ 14 ರನ್‌ಗಳಿಂದ ಸೋಲುನುಭವಿತು.
ಸೌರ್ಹಾದಯುತ ಪಂದ್ಯ :
ಇದೊಂದು ರೋಚಕ ಹಾಗೂ ಸೌರ್ಹಾದಯುತ ಪಂದ್ಯವಾಗಿತ್ತು. ಎರಡು ತಂಡಗಳು ಉತ್ತಮವಾಗಿ ಆಟ ಪ್ರದರ್ಶಿಸಿವೆ, ಒಳ್ಳೆ ಮನೋರಂಜನೆಯ ಜೊತೆಗೆ ಪತ್ರಕರ್ತರ ತಂಡದೊAದಿಗೆ ತಮ್ಮ ಪೋಲಿಸ್ ಇಲಾಖೆ ಒಳ್ಳೆಯ ಸಂಬAಧದ ಕೊಂಡಿಯಾಗಿ ಈ ಪಂದ್ಯವಾಗಿತ್ತು ಎಂದು ಜಿಲ್ಲಾ ಪೋಲಿಸ್ ವರಿಷ್ಠಧಿಕಾರಿ ಡಾ. ಇಶಾ ಪಂತ ಅವರು ಹೇಳಿದರು.

ಸಂಕ್ಷಿಪ್ತ ಸೋರ್ ವಿವರ :
ಪತ್ರಕರ್ತರ ತಂಡದ ಪರವಾಗಿ ಅಮಜದ್ 01 ರನ್, ಶಾಲಿವಾಹನ 00, ಸಂಜು ರಾಠೋಡ 50, ಪ್ರವೀಣ ರೆಡ್ಡಿ 46, ಅರುಣ ಕದಮ್ 09, ರಾಧಾಕೃಷ್ಣ ಮತ್ತು ಪುರುಷೋತ್ತಮ ಕುಲಕರ್ಣಿ ಅವರುಗಳು ತಲಾ 5 ರನ್, ಬಂಜರAಗಿ ಅವರು 3 ರನ್‌ಗಳಿಸಿ ಔಟಾದರು.
ಪೋಲಿಸ್ ತಂಡದ ಪರವಾಗಿ ಸಿಪಿಐ ವಿನಾಯಕ ಅವರು 63 ರನ್‌ಗಳನ್ನು ಗಳಿಸಿ ತಂಡದ ಪುರಷೋತ್ತಮ ಪ್ರಶಸ್ತಿಗೆ ಪಾತ್ರರಾದರು.
ಉಳಿದಂತೆ ಪೋಲಿಸ್ ತಂಡದ ಪರವಾಗಿ ತಂಡದ ನಾಯಕ ಹೆಚ್ಚುವರಿ ಎಸ್ಪಿ ಪ್ರಸನ್ನ ದೇಸಾಯಿ ಅವರು 02 ರನ್, ಹಣಮಂತ ನಾಯಕ 20 ರನ್, ಚಿತ್ತಪೂರ ಪ್ರೋಬೆಷನರ್ ಡಿಎಸ್‌ಪಿ ಹನುಮಂತ ನಾಯಕ ಅವರು 24 ರನ್, ಆಳಂದ ಸಿಪಿಐ ಮಂಜುನಾಥ 8 ರನ್‌ಗಳನ್ನು ರಿಟೈರ್ಡ್ ಆದರು.
ಪತ್ರಕರ್ತರ ತಂಡದ ಪರವಾಗಿ ಸಂಜು ರಾಠೋಡ ಅವರು 3 ಓವರ್‌ಗಳಲ್ಲಿ 3 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು. ಉಳಿದಂತೆ ಶಾಲಿವಾಹನ ಒಂದು ವಿಕೆಟ್ ಪಡೆದರು.
ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ಭವಾನಿಸಿಂಗ್ ಠಾಕೂರ, ವಾರ್ತಾ ಇಲಾಖೆಯ ಉಪನಿರ್ದೇಶಕ ಸಿದ್ದೇಶ್ವರಪ್ಪ, ಪತ್ರಕರ್ತ ದೇವೆಂದ್ರಪ್ಪ ಕಪನೂರ, ದೇವೇಂದ್ರಪ್ಪ ಅವಂಟಿ, ಹಣಮಂತ ಭೈರಾಮಡಗಿ, ರಾಚಪ್ಪ, ಗೋಪಿ ಕುಲಕರ್ಣಿ, ಸಂಜು ಚಿಕ್ಕಮಠ, ರಾಜಶೇಖರಯ್ಯ ಸ್ವಾಮಿ, ಗಂಗಾಧರ ಹಿರೇಮಠ, ಸಂಗಮನಾಥ ರಾಜು ಕೋಷ್ಟಿ, ರಾಜು ಉದನೂರ, ರೇವತಗಾಂವ, ಸಂಗಮೇಶ ಹಿರೇಮಠ ಸೇರಿದಂತೆ ಇನ್ನು ಹಲವಾರು ಪತ್ರಕರ್ತರು, ಪೋಲಿಸ್ ಇಲಾಖೆಯ ಪಿ,ಐ, ಸಿಪಿಐ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಪಂದ್ಯದ ವಿಕ್ಷಕ ವಿರಣೆಯನ್ನು ಟಿವಿ9 ವರದಿಗಾರ ಸಂಜು ಚಿಕ್ಕಮಠ, ಬಹಳ ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಸ್ಕೋರ್‌ರಾಗಿ ಪತ್ರಕರ್ತ ರಾಜು ದೇಶಮುಖ ಕಾರ್ಯನಿರ್ವಹಿಸಿದರು.
ಇನ್ನು ಪಂದ್ಯ ಅಂಪೈರ್‌ಯಾಗಿ ಶಂಕರ ಅವರು ಚೆನ್ನಾಗಿ ನಿರ್ವಹಿಸಿದರು.

LEAVE A REPLY

Please enter your comment!
Please enter your name here