ಪಾಲಿಕೆ ಚುನಾವಣೆ ಮುಂದೂಡಿಕೆ ಕಾನೂನು ಬಾಹಿರ ಕೃತ್ಯ:ಡಾ.ಪಾಟೀಲ್

0
731
Dr. Sharan Prakash Patil - Photos | Facebook

ಕಲಬುರಗಿ, ನ. 17: ಇದೇ ತಿಂಗಳು 20ರಂದು ನಿಗದಿಯಾಗಿದ್ದ ಕಲಬುರಗಿ ಮತ್ತು ಬಳ್ಳಾರಿ ಮಹಾನಗರಪಾಲಿಕೆಗಳಿಗೆ ನಡೆಯಬೇಕಾಗಿದ್ದ ಮೇಯರ್ ಹಾಗೂ ಉಪಮೇಯರ್, ವಿವಿಧ ಸ್ಥಾಯಿ ಸಮಿತಿಗಳ ಚುನಾವಣೆಯನ್ನು ಮುಂದೂಡಿದ್ದರು ಸಂಪೂರ್ಣ ಕಾನೂನು ಬಾಹಿರ ಕೃತ್ಯವಾಗಿದೆ ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ವಕ್ತಾರ ಡಾ. ಶರಣಪ್ರಕಾಶ ಪಾಟೀಲ್ ಅವರು ಜರಿದಿದ್ದಾರೆ.
ಅವರು ಬುಧುವಾರ ನಗರದ ಗಾಂಧಿಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ರಾಜ್ಯ ಸರಕಾರ ಪ್ರಜಾಪ್ರಭುತ್ವದ ಜೊತೆ ಚಲ್ಲಾಟವಾಡುತ್ತಿದೆ. ಪ್ರಾದೇಶಿಕ ಆಯುಕ್ತರು ಮೇಯರ್ ಚುನಾವಣೆ ಮುಂದೂಡಿಕೆಗೆ ಪರಿಷತ್ ಚುನಾವಣೆ ಘೋಷಣೆಯ ಕಾರಣ ನೀಡಿದ್ದು, ಇದರಿಂದಾಗಿ ಸಷ್ಟವಾಗುತ್ತೇ ಐಎಎಸ್ ಅಧಿಕಾರಿಗಳು ಸರಕಾರದ ಕೈಗೊಂಬೆಯಾಗಿದ್ದಾರೆAಬುದು ಎಂದು ನುಡಿದರು.
ಮಹಾನಗರಪಾಲಿಕೆಯಲ್ಲಿ ಚುನಾಯಿತ ಸದಸ್ಯರ ಸಂಖ್ಯೆ 55 ಆಗಿದ್ದು ಎಂ.ಪಿ.ಎAಎಲ್‌ಎ. ಪರಿಷತ್ ಸದಸ್ಯರು ಸೇರಿ ಅದರ ಸಂಖ್ಯೆ 63 ಆಗಿದ್ದು, ಇಷ್ಟು ಸಾಲದೇ ಚುನಾವಣೆ ನಡೆಸಲು ಜಿಲ್ಲಾಡಳಿತಕ್ಕೆ ಎಂದು ಅವರು ಪ್ರಶ್ನಿಸಿದ್ದಾರೆ.
ಅವರು ಮುಂದುವರೆದು ಮಾತನಾಡುತ್ತ, ಬಳ್ಳಾರಿಯಲ್ಲಿಯೂ ಬಿಜೆಪಿಗೆ ಕ್ಲೀಯರ್ ಮೇಜಾರಿಟಿ ಇಲ್ಲ ಎನ್ನುವ ಕಾರಣಕ್ಕೆ ಚುನಾವಣೆ ಮಾಡುತ್ತಿಲ್ಲ, ಬಿಜೆಪಿ, ಕಲಬುರಗಿಯಲ್ಲಿ ವಾಮ ಮಾರ್ಗದ ಮೂಲಕ ಆಡಳಿತ ಚುಕ್ಕಾಣಿ ಹಿಡಿಯಲು ಪ್ರಯತ್ನ ನಡೆಸುತ್ತಿದೆ. ಇದರ ವಿರುದ್ಧ ನಾವು ಹೈಕೋರ್ಟಗೆ ರಿಟ್ ಸಲ್ಲಿಸಿದ್ದೇವೆ ಎಂದು ವಿವರಣೆ ನೀಡಿದರು.
ರಿಟ್ ಅರ್ಜಿ ಸಲ್ಲಿಸಿದ್ದರಿಂದ ಅವರ ದಾರಿಗೆ ತೊಡಕಾಗಬಹುದು ಎಂಬ ಉದ್ದೇಶದಿಂದ ತಮ್ಮ ಉದ್ದೇಶ ಈಡೇರಲ್ಲ ಎನ್ನುವ ಕಾರಣಕ್ಕೆ ಚುನಾವಣೆ ಮುಂದೂಡಿಸಿದ್ದಾರೆ ಎಂದರು.
ಐಎಎಸ್ ಅಧಿಕಾರಿಗಳು ಸರಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿರುವುದು ಸರಿಯಲ್ಲ. ಈ ಮೊದಲು ಘೋಷಣೆ ಮಾಡಿದ ನ. 20ಕ್ಕೆ ಚುನಾವಣೆ ನಡೆಸಬೇಕು ಯಾವುದೇ ಕಾರಣಕ್ಕೂ ಮುಂದೂಡಿಕೆಯಾಗಬಾರದು, ಈ ಪ್ರಕರಣದಲ್ಲೂ ನ್ಯಾಯಾಲಯ ಮೊರೆ ಹೋಗುವ ಚಿಂತನೆಯಲ್ಲಿದ್ದೇವೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here