ಕಲಬುರಗಿ, ನ. 16: ರಾಜ್ಯದಲ್ಲಿ ಕಳೆದ ಎರಡು ವಾರಗಳಿಂದ ಸದ್ದು ಮಾಡುತ್ತಿರುವ ಬಿಟ್ ಕಾಯಿನ್ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಬಸನ್ನಗೌಡ ಪಾಟೀಲ್ ಯತ್ನಾಳ ನಮ್ಮ ಹತ್ರ ಬಿಟ್ಟಿ ಕಾಯಿನೆ ಇಲ್ಲ, ಇನ್ನು ಬಿಟ್ ಕಾಯಿನ್ ಎಲ್ಲಿದೆ ಎಂದು ಹೇಳುವ ಮೂಲಕ ಹಣಗರಣ ಎಂದು ಹೇಳಲಾಗುತ್ತಿರುವ ಬಿಟ್ ಕಾಯಿನ್ ಧಂಧೆಯಲ್ಲಿ ನಮ್ಮವರು ಯಾರು ಇಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ಅವರು ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿ, ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ಹಗರಣಗಳನ್ನು ಸಹಿಸುವುದಿಲ್ಲ, ನಾ ಖಾಯೆಂಗೆ, ನಾ ಖಿಲಾಯಿಂಗೆ ಎಂಬ ನೀತಿ ಯಾವತ್ತು ಬಿಟ್ಟಿಕೊಡುವುದಿಲ್ಲ ಎಂದರು.
ಕಳೆದ ಎರಡು ವಾರಗಳಿಂದ ಕಾಂಗೈ ಶಾಸಕ ಪ್ರಿಯಾಂಕ್ ಖರ್ಗೆ ಅವರು ಈ ಹಗಣರದ ಬಗ್ಗೆ ಯರ‍್ಯಾರು ಇದ್ದಾರೆ, ಹೇಗೆ ನಡೆಯುತ್ತಿದೆ ಬಿಟ್ ಕಾಯಿನ್ ವ್ಯವಹಾರ ಎಂಬುದು ವಿವರಣೆ ಕೊಡದೆ ಬರೀ ಬಿಟ್ ಕಾಯಿನ್ ಬಗ್ಗೆ ತನಿಖೆ ನಡೆಸಬೇಕೆಂಬುದು ಆಧಾರ ರಹಿತವಾಗಿದೆ ಎಂದರು.