ಕಲಬುರಗಿ, ನ. 16: ಕಲಬುರಗಿ ಮಹಾನಗರಪಾಲಿಕೆಗೆ ಇದೇ ತಿಂಗಳು 20ರಂದು ನಡೆಯಬೇಕಾಗಿದ್ದ ಮಹಾಪೌರ ಚುನಾವಣೆಯನ್ನು ಮುಂದೂಡಿ ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ನವೆಂಬರ್ 20ರಂದು ಕಲಬುರಗಿ ಪಾಲಿಕೆಯ 23ನೇ ಮೇಯರ್, ಉಪ ಮೇಯರ್ ಹಾಗೂ ವಿವಿಧ ಸ್ಥಾಯಿ ಸಮಿತಿಗಳಿಗೆ ಚಉನಾವಣೆ ನಡೆಯಬೇಕಾಗಿದ್ದು, ಆದರೆ ಭಾರತ ಚುನಾವಣಾ ಆಯೋಗವ ಅಧಿಸೂಚನೆ ಅನ್ವಯ ರಾಜ್ಯದಲ್ಲಿ ಅವಧಿ ಮುಕ್ತಾಯಗೊಂಡಿರುವ ಹಾಗೂ ವಿವಿಧ ಕಾರಣಗಳಿಂದ ತೆರವಾಗಿರುವ ವಿಧಾನ ಪರಿಷತ್ ಸದಸಸ್ಯ ಸ್ಥಾನಗಳಿಗೆ ಚುನಾವಣೆ ಅಧಿಸೂಚನೆ ಹೊರಡಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಈ ಪಾಲಿಕೆಯ ಮೇಯರ್ ಚುನಾವಣೆಯನ್ನು ಮುಂದೂಡಿದೆ.