ಮoತ್ರಿನೇ ಮಾಡಿಲ್ಲ, ಇನ್ನು ಸಿಎಂ ಹೇಗೆ? ಬಸನ್ನಗೌಡ ಯತ್ನಾಳ ಪ್ರಶ್ನೆ

0
654

ಕಲಬುರಗಿ, ನ. 16: ರಾಜ್ಯದಲ್ಲಿ ಕಳೆದ 3 ವರ್ಷಗಳಿಗೂ ಅಧಿಕ ತಿಂಗಳು ಬಿಜೆಪಿ ಸರಕಾರ ಅಧಿಕಾರದಲ್ಲಿದ್ದು, ಹಿಂದಿನ ಸಿಎಂ ಆಗಲೀ ಈಗಿನ ಸಿಎಂ ಆಗಲಿ ನನನ್ನು ಮಂತ್ರಿನೇ ಮಾಡಿಲ್ಲ, ಇನ್ನು ಚಿಫ್ ಮಿನಿಸ್ಟರ್ ಎಲ್ಲಿ ಆಗುತ್ತೇನೆ ಎಂದು ಶಾಸಕ ಬಸನ್ನಗೌಡ ಪಾಟೀಲ್ ಯತ್ನಾಳ ಹಾರಿಕೆ ಉತ್ತರ ನೀಡಿದ್ದಾರೆ.
ಅವರು ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿರಾಜ್ಯದಲ್ಲಿ ಬಿಟ್ ಕಾಯಿನ್ ಹಗರಣ ಖಂಡಿತವಾಗಿ ಸಿಎಂ ಬೊಮ್ಮಾಯಿ ಅವರನ್ನು ಬಲಿತೆಗೆದುಕೊಳ್ಳುತ್ತದೆ, ಬಿಜೆಪಿ ಈ ಬಾರಿಯೂ ಮೂರನೇ ಮುಖ್ಯಮಂತ್ರಿ ಕಾಣುತ್ತದೆ ಎಂಬ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು ಇದೆಲ್ಲ ಆಧಾರ ರಹಿತವಾದ ಸಂಗತಿಯಾಗಿದೆ ಎಂದರು.
ಕೋವಿಡ್ ಸಂದರ್ಭದಲ್ಲಿ ರಾಜ್ಯದಲ್ಲಿ 26 ಜನ ಸಂಸದರಿದ್ದರು ಕೂಡ ಸರಿಯಾಗಿ ಕೋವಿಡ್ ಪರಿಸ್ಥಿತಿ ನಿರ್ವಹಣೆ ಮಾಡಿಲ್ಲ ಎಂದು ಹೇಳಿದ್ದ ಯತ್ನಾಳಗೆ ಆಗಲೇ ವಾರ್ನಿಂಗ್ ಕೊಡ ಕೊಡಲಾಗಿತ್ತು ಬಹಿರಂಗವಾಗಿ ಯಾವುದನ್ನು ಹೇಳಬಾರದು ಎಂದು ಹೈಕಮಾಂಡ್ ಹೇಳಿದೆ, ಮತ್ತೇ ನೀವು ಕಲಬುರಗಿ ಮೇಯರ್ ಚುನಾವಣೆಗೆ ಸಂಬAಧಿಸಿದ ಮತದಾರ ಪಟ್ಟಿಯಲ್ಲಿ 7 ಜನ ವಿಧಾನ ಪರಿಷತ್ ಸದಸ್ಯರ ಹೆಸರು ಸೇರ್ಪಡೆ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿ, ನನಗೇನು ಪೂರ್ತಿಯಾಗಿ ಪಕ್ಷದಿಂದ ಹೊರಹಾಕಬೇಕೆಂದಿದ್ದರೇನು ಎಂದು ಚಟಾಕಿ ಹಾರಿಸಿದರು.

LEAVE A REPLY

Please enter your comment!
Please enter your name here