ಕಲಬುರಗಿಯಲ್ಲಿ ನ. 27ರಂದು 36ನೇ ಪತ್ರಕರ್ತರ ರಾಜ್ಯ ಸಮ್ಮೇಳನ

0
925

ಕಲಬುರ್ಗಿ, ನ. 8-ಈ ಬಾರಿ ಪತ್ರಕರ್ತರ 36ನೇ ರಾಜ್ಯ ಸಮ್ಮೇಳನ ನವೆಂಬರ್ 27ರಂದು ಕಲಬುರಗಿಯಲ್ಲಿ ನಡೆಯಲಿದೆ.
ಈ ಸಮ್ಮೇಳನದ ಉದ್ಘಾಟನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನರವೇರಿಸದ್ದಾರೆ.
ಒಂದು ದಿನ ನಡೆಯುವ ಈ ಸಮ್ಮೇಳನದಲ್ಲಿ ರಾಜ್ಯದ ವಿವಿಧ ಜಿಲ್ಲೆಯಿಂದ ಸುಮಾರು 2 ಸಾವಿರಕ್ಕೂ ಅಧಿಕ ಪತ್ರಕರ್ತರು ಭಾಗವಹಿಸಲಿದ್ದಾರೆ.
ರವಿವಾರ ಕಲಬುರಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಕೆಯುಡಬ್ಲೂ ರಾಜ್ಯ ಅಧ್ಯಕ್ಷರಾದ ಶಿವಾನಂದ ತಗಡೂರ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದಾಗ 27ರಂದು ಸಮ್ಮೇಳನಕ್ಕೆ ಬರುವೆನೆಂದು ಹೇಳಿದ್ರು.
ಪತ್ರಕರ್ತರು 36ನೇ ರಾಜ್ಯ ಸಮ್ಮೇಳನದ ಲಾಂಛನವನ್ನು ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದರು.
ಈ ಸಂಧರ್ಭದಲ್ಲಿ ಬ್ರಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮರುಗೇಶ್ ನಿರಾಣಿ, ಶಾಸಕ ದತ್ತಾತ್ರೇಯ ಪಾಟೀಲ್ ರೇವುರ ಅವರು ಕೂಡ ಉಪಸ್ಥಿತರಿದ್ದರು.
ಕಲಬುರಗಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಭವಾನಿ ಸಿಂಗ್, ಹಣಮಂತರಾವ್ ಭೈರಾಮಡಗಿ, ಬಾಬುರಾವ ಯಡ್ರಾಮಿ, ದೇವೇಂದ್ರಪ್ಪ ಕಾಪನೂರ, ರಾಜು ದೇಶಮುಖ, ದೇವೇಂದ್ರಪ್ಪ ಅವಂಟಿ, ರಾಜ್ಯ ಸಂಘದ ಬಂಗ್ಲೆ ಮಲ್ಲಿಕಾರ್ಜನ ಅವರುಗಳು ಹಾಜರಿದ್ರು.

LEAVE A REPLY

Please enter your comment!
Please enter your name here