ತವರಿಗೆ ಹೋದ ಪತ್ನಿ ಮೇಲೆ ಮುನಿಸು: ಮುದ್ದು ಮಗಳನ್ನೇ ಕೊಂದು ಪತಿ ನೇಣಿಗೆ ಶರಣು..!

0
919
ಕೊಲೆಯಾದ ಮದ್ದು ಕಂದ

(ವರದಿ : ಗುಂಡೂರಾವ್ ಅಫಜಲಪೂರ )
ಅಫಜಲಪುರ : ಜಗಳವಾಡಿ ತವರು ಮನೆಗೆ ಹೋದ ಪತ್ನಿಯ ಮುನಿಸಿಗಾಗಿ ತನ್ನ ಮುದ್ದು ಮಗಳಿಗೆ ಕೊಂದು ತಾನೂ ನೇಣಿಗೆ ಶರಣಾದ ಹೃದಯವಿದ್ರಾವಕ ಘಟನೆ ತಾಲ್ಲೂಕಿನ ಉಪ್ಪಾರವಾಡಿ ಗ್ರಾಮದಲ್ಲಿ ವರದಿಯಾಗಿದೆ.
ಮೃತರಿಗೆ ರೈತ ಅರ್ಜುನ್ ತಂದೆ ರೇವಣಸಿದ್ದ ಕರಂಡೆ (27) ಹಾಗೂ ಆತನ ನಾಲ್ಕು ವರ್ಷ ವಯಸ್ಸಿನ ಪುತ್ರಿ ಪೂನಮ್ ಉರ್ಫ್ ದಿದಿ ಎಂದು ಗುರುತಿಸಲಾಗಿದೆ.
ತಾಲೂಕಿನ ಉಪ್ಪಾರವಾಡಿ ಗ್ರಾಮದ ನಿವಾಸಿಯಾಗಿರುವ ಅರ್ಜುನ್ ಕರಂಡೆ ಹಾಗೂ ಪತ್ನಿ ಶ್ರೀಮತಿ ಸಂಗೀತಾ ಕರಂಡೆ ಅವರಿಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿರುವುದರಿಂದ ಜಗಳವಾಡಿ ತವರು ಮನೆಯಾದ ಮಹಾರಾಷ್ಟçದ ಸೋಲಾಪುರ ಜಿಲ್ಲೆಯ ಮಂಗಳವಾಡೆಯ ಸಲಗರ.ಬಿ ಗ್ರಾಮಕ್ಕೆ ಹೋಗುತ್ತಿದ್ದಳು. ಹೀಗೆ ಹಲವಾರು ಬಾರಿ ದಂಪತಿ ನಡುವೆ ಜಗಳ ನಡೆಯುತ್ತಿತ್ತು, ಜಗಳವಾಡಿದಾಗೊಮ್ಮೆ ಪತ್ನಿ ಸಂಗೀತಾ ತವರು ಮನೆಗೆ ಹೋಗುತ್ತಿದ್ದಳು. ಹೀಗಾಗಿ ಊರಿನ ಹಿರಿಯರು ಹಲವಾರು ಸಲ ಇವರಿಬ್ಬರನ್ನು ರಾಜಿ ಸಂಧಾನ ಮಾಡುವ ಮೂಲಕ ಬುದ್ಧಿವಾದ ಹೇಳಿದರೂ ಮತ್ತದೇ ಪತ್ನಿ ಸಂಗೀತಾ ತನ್ನ ಪತಿಯ ಜೊತೆ ಜಗಳವಾಡಿ ತವರು ಮನೆ ಸೇರಿದ್ದಳು.

ಪತಿ ಅರ್ಜುನ್ ಕರಂಡೆ ತನ್ನ ಪತ್ನಿಯ ತವರಿನಲ್ಲಿಯೇ ಇರತೊಡಗಿದ. ಅಲ್ಲಿಯೂ ಕೂಡ ತನ್ನ ಪತಿ ಜೊತೆ ಜಗಳವಾಡಿ ಪತಿಯನ್ನು ಉಪ್ಪವಾಡಿ ಗ್ರಾಮಕ್ಕೆ ಕಳುಹಿಸಿದ್ದಳು. ಅರ್ಜುನ್ ಕೆಲವು ತಿಂಗಳ ಹಿಂದೆ ತನ್ನ ಮುದ್ದಾದ ಮಕ್ಕಳಾದ ಪುತ್ರಿ ಪೂನಮ್, ಎರಡು ವರ್ಷ ವಯಸ್ಸಿನ ಪುತ್ರ ರೇವಣಸಿದ್ದ ಗ್ರಾಮಕ್ಕೆ ಬಂದು ತನ್ನ ತಾಯಿಯಾದ ಸಕ್ಕುಬಾಯಿ ಜೊತೆ ವಾಸಿಸುತ್ತಿದ್ದ.
ಆದಾಗ್ಯೂ, ಪತ್ನಿ ಸಂಗೀತಾ ಉಪ್ಪಾರವಾಡಿ ಗ್ರಾಮದಲ್ಲಿ ವಾಸಿಸಲು ಸುತಾರಾಂ ಒಪ್ಪುತ್ತಿರಲಿಲ್ಲ ಅಲ್ಲದೆ ತನ್ನ ತವರಿನಲ್ಲಿದ್ದಾಗ ಪತಿ ಅರ್ಜುನನ ಮೇಲೆ ಮಹಾರಾಷ್ಟ್ರದ ಮಹಿಳಾ ಆಯೋಗಕ್ಕೆ ದೂರುಸಲ್ಲಿಸಿದ್ದಳು. ಮಹಿಳಾ ಆಯೋಗವೂ ಅವರಿಬ್ಬರಿಗೂ ಕರೆಯಿಸಿ ಸಮಾಧಾನದ ಮಾತು ಹೇಳಿ ಕಳುಹಿಸಿದ್ದರು. ಆದಾಗ್ಯೂ, ಪತಿಯ ಮನೆ ಇಷ್ಟ ಪಡದ ಸಂಗೀತಾ ತನ್ನ ಎರಡು ಮುದ್ದಾದ ಮಕ್ಕಳನ್ನು ಹಾಗೂ ಪತಿಯನ್ನು ಬಿಟ್ಟು ಒಂಟಿಯಾಗಿ ತವರು ಮನೆಯಲ್ಲಿ ಇದ್ದಳು. ಇದು ಹಲವು ಅನುಮಾನಾಸ್ಪದಕ್ಕೂ ಎಡೆಮಾಡಿಕೊಟ್ಟಿತ್ತು.

ಅರ್ಜುನ್ ಕರಂಡೆ ಇತ್ತೀಚೆಗೆ ಆಗೊಮ್ಮೆ ಈಗೊಮ್ಮೆ ಕುಡಿತಕ್ಕೆ ಅಂಟಿಕೊAಡಿದ್ದ. ಆದರೆ ಬುಧವಾರ ದೀಪಾವಳಿಯ ನರಕ ಚತುರ್ದಶಿ ದಿನದಂದು ಮದ್ಯಪಾನ ಮಾಡಿ ರಾತ್ರಿ 10 ಗಂಟೆಯ ಸುಮಾರಿಗೆ ಅರ್ಧ ಗಂಟೆ ಹೆಚ್ಚುಕಾಲ ಮೊಬೈಲ್ ಕರೆ ಮಾಡಿ ತನ್ನ ಹೆಂಡತಿ ಸಂಗೀತಾಳೊAದಿಗೆ ಮಾತನಾಡಿದ. ಆದಾಗ್ಯೂ, ಅತ್ತ ಕಡೆಯಿಂದ ಸಂಗೀತಾಳು ತನ್ನ ಪತಿ ಅರ್ಜುನನ ಕಿವಿಯಲ್ಲಿ ಸಂಗೀತ ಹಾಡಿದ್ದಾಳೆ. ನಂತರ ಅರ್ಜುನ್ ಕೆಲಹೊತ್ತು ತನ್ನ ಮೊಬೈಲ್ ಅನ್ನು ಸ್ವೀಚ್‌ಆಫ್ ಮಾಡಿಕೊಂಡಿದ್ದ.
ಮಧ್ಯರಾತ್ರಿ 12 ರ ಸುಮಾರಿಗೆ ಮತ್ತೆ ತನ್ನ ಮೊಬೈಲ್ ಅನ್ನು ಚಾಲು ಮಾಡಿ ತನ್ನ ತಮ್ಮನ ಜೊತೆ ಮಾತನಾಡಿ, ತಮ್ಮ ನೀನು ನನ್ನ 2 ವರ್ಷದ ಪುತ್ರ ರೇವಣಸಿದ್ದನನ್ನು ಚೆನ್ನಾಗಿ ನೋಡಿಕೊಳ್ಳುವ ಜವಾಬ್ದಾರಿ ನಿನ್ನದೆಂದು ಹೇಳಿದಾಗ, ಸಹೋದರ ನೀನು ಎಲ್ಲಿದ್ದಿಯಾ ಎಂದು ಕೇಳಿದಾಗ ಅರ್ಜುನನು ನಾನು ವಿಜಯಪುರದಲ್ಲಿದ್ದೇನೆ. ಪುತ್ರಿ ಪೂನಮ್ ಮಲಗಿಕೊಂಡಿದ್ದಾಳೆ ಎಂದು ಫೋನ್ ಕರೆಯನ್ನು ಮೊಟಕುಗೊಳಿಸಿದ.
ಆದಾಗ್ಯೂ, ಆತ ತನ್ನ ಮನೆಯ ಹಿಂದೆ 4 ವರ್ಷದ ತನ್ನ ಹೆತ್ತ ಪುತ್ರಿಯನ್ನು ಪೂನಮ್‌ನನ್ನು ಹರಿತವಾದ ಕಲ್ಲಿನಿಂದ ಕತ್ತನ್ನು ಕೊಯ್ದು ತಾನು ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ವಿಷಯ ಪೊಲೀಸರು ಬೆಳಗ್ಗೆನೆ ಸಂಗೀತಾಳಿಗೆ ಘಟನೆಯ ಬಗ್ಗೆ ತಿಳಿಸಿದರು. ಇಷ್ಟೆಲ್ಲ ಘಟನೆ ನಡೆದರು ಪತ್ನಿ ಸಂಗೀತಾಳು ಅಫಜಲಪುರ ವ್ಯಾಪ್ತಿಗೆ ಬಂದರೂ ಠಾಣೆಗೆ ಬರದೆ ದೂರು ಕೊಡಲು ಮುಂದಾಗಲಿಲ್ಲ.ಮಗನನ್ನು ಕೊಂದು ತಾನು ನೇಣಿಗೆ ಶರಣದಾ ತಂದೆ ರೇವಣಸಿದ್ದಪ್ಪ

ಕೊಲೆಯಾದ ನೃತದೃಷ್ಟ ಕಂದನ ತಾಯಿ

ಹೀಗಾಗಿ ಮೃತನ ತಾಯಿ ಸಕ್ಕೂಬಾಯಿಯಿಂದ ಪೊಲೀಸರು ದೂರು ಪಡೆದು ಪ್ರಕರಣ ದಾಖಲಿಸಿಕೊಂಡರು. ಕೊನೆ ಘಳಿಗೆಯಲ್ಲಿ ಠಾಣೆಗೆ ಬಂದ ಸಂಗೀತಾಳು ತನ್ನ 2 ವರ್ಷದ ಪುತ್ರನಿಗೂ ಕೂಡ ನೋಡದೇ ಹಾಗೆ ಕುಳಿತುಕೊಂಡಳು. ಸುದ್ದಿ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ನೂತನ ಪೊಲೀಸ್ ವರಿಷ್ಟಾಧಿಕಾರಿ ಶ್ರೀಮತಿ ಇಶಾ ಪಂತ್ ಅವರು ಡಿವೈಎಸ್‌ಪಿ ಮಲ್ಲಿಕಾರ್ಜುನ್ ಸಾಲಿ, ಸಿಪಿಐ ಜಗದೇವಪ್ಪ ಪಾಳಾ, ಪಿಎಸ್‌ಐ ವಿಶ್ವನಾಥ್ ಮುದರೆಡ್ಡಿ ಹಾಗೂ ಸಿಬ್ಬಂದಿಗಳೊAದಿಗೆ ಧಾವಿಸಿ ಪಟ್ಟಣದ ಆಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿ ಮೃತ ದೇಹಗಳನ್ನು ಪರಿಶೀಲಿಸಿ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಪ್ರಕರಣದ ಕುರಿತು ಈಗಾಗಲೇ ತನಿಖೆ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು. ದಂಪತಿಯ ಜಗಳವು ಪತಿ ಹಾಗೂ ಪುತ್ರಿಯ ಸಾವಿನಲ್ಲಿ ಅಂತ್ಯಗೊAಡಿದ್ದರಿAದ ಉಪ್ಪಾರವಾಡಿ ಗ್ರಾಮವೇ ಬೆಚ್ಚಿ ಬೀಳುವಂತಾಗಿದೆ.

LEAVE A REPLY

Please enter your comment!
Please enter your name here