ಬಸ್-ಬೈಕ್ ಮಧ್ಯ ಭೀಕರ ಅಪಘಾತ ಸ್ಥಳದಲ್ಲೆ ಇಬ್ಬರು ಬೈಕ್ ಸವಾರರ ದುರ್ಮರಣ

0
1270

ಅಫಜಲಪುರ, ನ. 03: ರಸ್ತೆ ಸಾರಿಗೆ ಸಂಸ್ಥೆಯ ಸಾರಿಗೆ ಬಸ್ ಹಾಗೂ ದ್ವೀಚಕ್ರ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದ ಘಟನೆ ಅಫಜಲಪೂರ ಪಟ್ಟಣದ ಹೊರವಲಯದ ಭೀಮಾ ಕಛೇರಿಯ ಹಾದು ಹೋಗುವ ರಾಜ್ಯ ಹೆದ್ದಾರಿ (ಕಲಬುರಗಿ ರಸ್ತೆ) ಮೇಲೆ ನಡೆದಿದೆ.

ಈ ಘಟನೆ ಇಂದು ಸುಮಾರು 12 ಗಂಟೆಗೆ ನಡೆದಿದ್ದು, ಈ ಮುಖಾಮುಖಿ ಡಿಕ್ಕಿಯಲ್ಲಿ ದ್ವಿಚಕ್ರ ವಾಹನ ಸವಾರ ಸೇರಿದಂತೆ ಆತನ ಸ್ನೇಹಿತ ಸ್ಥಳದಲ್ಲೆ ಮೃತಪಟ್ಟಿದ್ದಾರೆ.

ದ್ವೀಚಕ್ರ ವಾಹನಗಳ ಮಧ್ಯ ಈ ಅಪಘಾತ ಸಂಭವಿಸಿದೆ.
ಮೃತಪಟ್ಟ ವ್ಯಕ್ತಿಗಳು ಗುರುತಿಸಲಾಗಿದ್ದು ಇವರು ಅಫಜಲಪೂರ ತಾಲೂಕಿನ ರೇವೂರ (ಕೆ) ಗ್ರಾಮದವರಾಗಿದ್ದು. ಆನಂದ ತಂದೆ ಮಲ್ಲಿನಾಥ ಪೊಲೀಸಪಾಟೀಲ್ (32), ಗೋವಿಂದ ತಂದೆ ಚಂದ್ರಶ್ಯಾ ಮ್ಯಾಕೇರಿ (31).

ಈ ಬಗ್ಗೆ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here