ಹೈ.ಕ. ವಿಮೋಚನಾ ಹೋರಾಟಗಾರ ಮಹಾದೇವಪ್ಪ ಕಡೇಚೂರ್

0
728

ಕಲಬುರಗಿ, ಅ. 31: ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದ ಈ ಭಾಗದ ಹಿರಿಯ ಬಿಜೆಪಿ ಧುರೀಣರಾದ ಮಹಾದೇವಪ್ಪ ಕಡೇಚೂರ್ ಅವರ ಸಂಕ್ಷಿಪ್ತ ಪರಿಚಯ ಇಲ್ಲಿದೆ.
ಹೈದ್ರಾಬಾದ ಕರ್ನಾಟಕ ವಿಮೋಚನಾ ಸಂಗ್ರಾಮದ ಹೋರಾಟಗಾರರಾದ 90 ವರ್ಷ ವಯಸ್ಸಿನ ಮಹಾದೇವಪ್ಪ ಕಡೇಚುರ್ ಅವರು ಶಿಕ್ಷಕ, ಪತ್ರಕರ್ತ, ಉದ್ಯಮಿ, ಕೃಷಿಕ ಅಲ್ಲದೇ ಸಮಾಜ ಸೇವಕರಾಗಿಯೂ ನುರಿತವರಾಗಿದ್ದಾರೆ.
ಮೇ 9, 1932ರಲ್ಲಿ ಯಾದಗಿರಿ ಜಿಲ್ಲೆಯ ಸುರಪುರದ ರಂಗAಪೇಟೆಯಲ್ಲಿ ಜನಿಸಿದ ಅವರು, 1951ರಿಂದ ರಾಷ್ಟಿçÃಯ ಸ್ವಯಂ ಸೇವಕರಾಗಿ ಅಂದಿನಿAದ ಇಂದಿನವರೆಗೂ ಸಕ್ರೀಯವಾ ಗಿದ್ದು, ಬಿಜೆಪಿ ಕಲಬುರಗಿ ಜಿಲ್ಲಾ ಕೋಶಾಧಿಕಾರಿಯಾಗಿ, ಕಲಬುರಗಿ ಜಿಲ್ಲಾ ಆರ್ಯ ಸಮಾಜ ಅಧ್ಯಕ್ಷರಾಗಿ, ನಗರದ ಸಾಂದೀಪನಿ ಶಾಲೆಯ ಸುಧಾರಣಾ ಸಮಿತಯ ಅಧ್ಯಕ್ಷರು ಆಗಿ, ಕಲಬುರಗಿ ಹೊರವಲಯದ ದೀನದಯಾಳ್ ಉಪಾಧ್ಯಾಯ ನಗರದ ಕೋಶಾಧ್ಯಕ್ಷರಾಗಿ, ಕಲಬುರಗಿ ಜಿಲ್ಲಾ ಆರ್ಯ ಈಡಿಗ ಸಮಾಝದ ಕಾರ್ಯದರ್ಶಿ, ಕೋಶಾಧಿಕಾರಿಯಾಗಿ ಸೇವೆ ಸಲ್ಲಿದ್ದಾರೆ.
ಕಣ್ಮಣಿ ವೆಂಕಯ್ಯ ಕೂಸಯ್ಯ ಗುತ್ತೇದಾರ ಕುರಿತು ಜೀವನ ಚರಿತ್ರೆ, ಅಂದಿನ ನನ್ನ ಊರು ಮತ್ತು ಬದುಕು, ಸ್ನೇಹ ಸರಪಳಿ ಗೆಳೆಯರ ಪರಿಚಯಾತ್ಮಕ ಕೃತಿ, ಬೆನ್ನಬೆಳಕು ಗುರುಸ್ಮರಣೆ, ಹಾಂಥಿAತಾಯಿ – ಅನುವಾದ ಕೃತಿ (ಉರ್ದುವಿನಿಂದ), ಅಲ್ಲದೇ ಗುಲಬರ್ಗಾ ಜಿಲ್ಲೆಯ ಜನಸಂಘ ಕಟ್ಟಿ ಬೆಳಸಿದವರು ಎಂಬ ಆರು ಕೃತಿಗಳು ಕೂಡ ಅವರು ಪ್ರಕಟಿಸಿದ್ದಾರೆ.
ಪ್ರಶಸ್ತಿ ಪಡೆಯುತ್ತಿರುವ ಮಹಾದೇವಪ್ಪ ಕಡೇಚೂರ್ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು.

LEAVE A REPLY

Please enter your comment!
Please enter your name here