ಕಲಬುರಗಿ, ಅ. ೩೦: ಕಲಬುರಗಿ ನಗರದಲ್ಲಿ ಎಲ್ಲಡೆ ಒಂದೆರಡು ಕಡೆ ಬಿಟ್ಟರೆ ಎಲ್ಲಡೆ ಸಂಚಾರ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ.
ನಗರದ ಕಪಡಾ ಬಜಾರ ಮತ್ತು ಗಣೇಶ ಮಂದಿರದಿAದ ಮಹಿಬಸ್ ಮಜೀದ ವರೆಗೆನ ರಸ್ತೆ ಉಪಯೋಗವಾಗುತ್ತಿರುವುದು ಬೀದಿ ವ್ಯಾಪಾರಿಗಳಿಗೆ ಮತ್ತು ದ್ವೀಚಕ್ರ ವಾಹನ ನಿಲುಗಡೆಗೆ ಮಾತ್ರ.
ಇಲ್ಲಿ ದ್ವೀಚಕ್ರ ವಾಹನಗಳನ್ನು ಒಡಿಸುವುದು ಒಂದು ಸಾಹಸವೇ ಸರಿ. ಏಕೆಂದರೆ ಒಂದು ಬದಿಯಲ್ಲಿ ದ್ವಿಚಕ್ರ ವಾಹನಗಳ ನಿಲುಗಡೆಗೆ ರಸ್ತೆ ಮೀಸಲಿಟ್ಟರೆ, ಇನ್ನೊಂದು ಬದಿಯಲ್ಲಿ ಬೀದಿ ವ್ಯಾಪಾರಿಗಳ ಬಂಡಿ ಹಾವಳಿ, ಇಲ್ಲಿ ಜನರು ಓಡಾಡುವುದು ರಸ್ತೆಯ ಮಧ್ಯದಲ್ಲಿ. ಇದು ಯಾವ ಸಂಚಾರ ವ್ಯವಸ್ಥೆಯಾಗಿದೆ?
ಪೆಟ್ರೋಲ್ ಬೆಲೆ ಗಗನಕ್ಕೆರಿದ್ದು, ಇಲ್ಲಿ ಗಂಟೆಗಟ್ಟೆಲೆ ವಾಹನ ಓಡಿಸುವುದರಿಂದ ಸುಮಾರು ಅರ್ಧದಷ್ಟು ಪೆಟ್ರೋಲ್ ಇಲ್ಲಿಯೇ ಹಾಳಾಗುತ್ತಿದೆ.
ಮಹಾನಗರಪಾಲಿಕೆ ಬೆಂಗಳೂರು ಮಾದರಿಯಲ್ಲಿ ವ್ಹೆöÊಟ್ ಟ್ಯಾಪಿಂಗ್ ರಸ್ತೆ ಯನ್ನು ಕೋಟಿಗಟ್ಟೆಲೆ ಹಣ ಸುರಿದು ನಿರ್ಮಾಣ ಮಾಡಿದ್ದು ರಸ್ತೆ ಸಂಚಾರಕ್ಕೆ ಅಥವಾ ಬೀದಿ ವ್ಯಾಪಾರಿಗಳಿಗೆ, ವಾಹನ ನಿಲುಗಡೆಗಾಗಿ ಎಂಬುದು ಪಾಲಿಕೆಯಾಗಲೀ, ಪೋಲಿಸ್ ಇಲಾಖೆಯಾಗಲೀ ಸ್ಪಷ್ಟಪಡಿಸಬೇಕಿದೆ.
ಈ ಬಗ್ಗೆ ಸಂಚಾರಿ ಪೋಲಿಸ್ ಅಧಿಕಾರಿಗಳನ್ನು ವಿಚಾರಿಸಿದಾಗ ನಮ್ಮ ಠಾಣೆಯಲ್ಲಿ ಸಿಬ್ಬಂದಿಗಳಿಲ್ಲ, ಈ ರಸ್ತೆ ಮತ್ತು ಚೌಕ್ ಹಳೆಯ ಠಾಣೆಯ ಹಾಗೂ ಕಿರಾಣಾ ಬಜಾರ, ಫೋರ್ಟ್ ರಸ್ತೆ ಇವೆಲ್ಲ ಒಬ್ಬಿಬ್ಬರು ಪೇದೆಗಳು ನಿರ್ವಹಿಸುತ್ತಿದ್ದು, ಎಲ್ಲಡೆ ನಾವು ಕೆಲಸ ಮಾಡುವುದು ಎಂದು ನಮಗೆ ಪ್ರಶ್ನೆ ಮಾಡಿದ್ದು, ಅದು ಸರಿಯಾಗಿಯೆ ಇದೆ. ಕಾರಣ ಇಲಾಖೆ ಹೆಚ್ಚಿನ ಸಿಬ್ಬಂದಿಗಳ ನಿಯೋಜನೆ ಮಾಡಿ, ಈ ರಸ್ತೆ ವಾಹನಗಳ ಓಟಾಡಕ್ಕೆ ಸೀಮಿತವಾಗಿಸುವುದೇ ಕಾದು ನೋಡಬೇಕಿದೆ.