ಕೌಟುಂಬಿಕ ಕಲಹ: ಮಗುವಿನೊಂದಿಗೆ ಮಹಿಳೆ ಆತ್ಮಹತ್ಯೆ

0
1361

ಕಲಬುರಗಿ:ಅ.24: ಮಗಳ ಜೊತೆ ನದಿಗೆ ಜಿಗಿದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ಮನಕಲುಕುವ ಘಟನೆ,ಶಹಾಬಾದ ನಗರದ ಹೊರವಲಯ ಕಾಗಿಣಾ ನದಿಯಲ್ಲಿ ನಡೆದಿದೆ.
ಶಹಬಾದ್ ಪಟ್ಟಣದ ನಿವಾಸಿ ಶಾಂತಕುಮಾರಿ (32) ಹಾಗೂ ಆರು ತಿಂಗಳ ಆಕೆಯ ಮಗು ಗಂಗಾ ಆತ್ಮಹತ್ಯೆ ಮಾಡಿಕೊಂಡವರು. ನೀನು ನನಗೆ ಚೀಟ್ ಮಾಡಿದ್ದೀಯ. ನನ್ನ, ನನ್ನ ಮಗಳ ಲೈಫ್ ಹಾಳು ಮಾಡಿದ್ದಿಯ ಎಂದು ಗಂಡ ಸಿದ್ದಲಿಂಗ ಎಂಬುವವರ ಹೆಸರನ್ನು ತನ್ನ ವಾಟ್ಸಪ್ ಸ್ಟೇಟಸ್‌ನಲ್ಲಿ ಬರೆದುಕೊಂಡಿದ್ದಾರೆ.
ವೃತ್ತಿಯಲ್ಲಿ ಹೈಸ್ಕೂಲ್ ಶಿಕ್ಷಕಿಯಾಗಿರುವ ಶಾಂತಕುಮಾರಿಯನ್ನು ಚಿತ್ತಾಪುರ ತಾಲೂಕಿನ ಮಾಡಬೂಳ ಗ್ರಾಮದ ಸಿದ್ದಲಿಂಗ ಎಂಬುವರೊAದಿಗೆ ಮದುವೆ ಮಾಡಿಕೊಡಲಾಗಿತ್ತು. ಮದುವೆಯಾದ ಬಳಿಕ ಗಂಡ, ಹೆಂಡತಿಯ ಮಧ್ಯೆ ಕೌಟುಂಬಿಕ ಕಲಹವಿತ್ತು ಎನ್ನಲಾಗಿದೆ. ಕಳೆದ ಎರಡು ದಿನಗಳ ಹಿಂದೆ ತವರು ಮನೆಗೆ ಬಂದಿದ್ದ ಶಾಂತಕುಮಾರಿ ಇಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸ್ಥಳಕ್ಕೆ ಶಹಬಾದ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಎನ್‌ಡಿಆರ್‌ಎಫ್ ತಂಡ, ಅಗ್ನಿ ಶಾಮಕ ದಳ, ಪೊಲೀಸ್ ಸಿಬ್ಬಂದಿ ಜಂಟಿಯಾಗಿ ಈಗಾಗಲೇ ತಾಯಿ ಮೃತ ದೇಹ ಪತ್ತೆ ಮಾಡಿದ್ದಾರೆ. ಮಗುವಿನ ಶವಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ.

LEAVE A REPLY

Please enter your comment!
Please enter your name here