ಮೋದಿ ಹೆಬ್ಟೆಟ್ಟು ಹೇಳಿಕೆ ಸಮರ್ಥಿಸಿಕೊಂಡ ಪ್ರಿಯಾಂಕ್

0
628

ಕಲಬುರಗಿ, ಅ. 21: ಮೋದಿ ಹೆಬ್ಬೆಟ್ಟು ಗಿರಾಕಿ ಅಂತ ಕಾಂಗ್ರೆಸ್ ನಾಯಕರ ಹೇಳಿಕೆಗೆ ಮಾಜಿ ಸಚಿವ ಚಿತ್ತಾಪೂರ ಶಾಸಕ ಪ್ರಿಯಾಂಕ್ ಖರ್ಗೆ ಅವರು ಸಮರ್ಥನೆ ಮಾಡಿಕೊಂಡಿದ್ದಾರೆ.

ಅವರಿoದಿಲ್ಲಿ ಕಾಂಗ್ರೆಸ್ ಗಾಂಧಿ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ, ಹೆಬ್ಬೆಟ್ಟು ಅಂತ ಹೇಳಿದ್ದು ಅಸಂವಿಧಾನಿಕ ಪದವಂತು ಅಲ್ಲ, ಮೋದಿ ಏನ್ ಓದಿದ್ದಾರೆ ಅನ್ನೋದು ಆರ್.ಟಿ.ಐ.ನಲ್ಲೆ ಕೊಟ್ಟಿಲ್ಲ ಅಂದ ಮೇಲೆ ಅವರೊಬ್ಬ ಹೆಬ್ಬೆಟ್ಟು ಅಂತ ಹೇಳಿಕೆಯಲ್ಲಿ ತಪ್ಪೇನಿದೆ ಎಂದ ಅವರು ಮೋದಿ ಅವರ ಕ್ಕಾಸ್‌ಮೇಟ್ ಯಾರು ಏನು ಅನ್ನೋದು ಗೋತ್ತಿಲ್ಲ, ಅಂದ ಮೇಲೆ ಈ ಹೇಳಿಕೆಯಲ್ಲಿ ತಪ್ಪೇನಿದೆ ಎಂದರು.

ಪುಕ್ಸಟ್ಟೆ ಪ್ರಚಾರಕ್ಕಾಗಿ ವ್ಯಯಕ್ತಿಕವಾಗಿ ಮಾತನಾಡಬೇಡಿ ಎಂದು ಅವರು ಸಿದ್ದರಾಮಯ್ಯರ ಬಗ್ಗೆ ಮಾತನಾಡಿದ ಬಿಜೆಪಿಯವರು ಮಾನಸಿಕ ಅಸ್ವಸ್ಥರಾಗಿದ್ದಾರೆ, ನಮ್ಮಲ್ಲೇ ಡಾಕ್ಟರ್ ಇದ್ದಾರೆ ಬೇಕಿದ್ದರೆ ಟ್ರಿಟ್ಮೇಂಟ್ ಕೊಡಿಸ್ತೇವೆ ಎಂದು ಪ್ರಿಯಾಂಕ್ ನುಡಿದರು.
ಮಾನಸಿಕ ಅಸ್ವಸ್ಥತೆಯ ಸಮಸ್ಯೆ ಇದ್ದರೆ ಮುಚ್ಚಡಬೇಡಿ ಇದರಿಂದ ಏನು ಸಮಸ್ಯೆ ಇಲ್ಲ, ಆ ಸಮಸ್ಯೆ ಇದ್ರೆ ನಾವು ಸಹಕಾರ ಕೊಟ್ಟಿ ನಿಮಗೆ ಟ್ರಿಟ್‌ಮೆಂಟ್ ಕೊಡ್ತೆವೆ ಎಂದು ಸಲಹೆ ನೀಡಿದರು.

ನಮ್ಮ ನಾಯಕರ ಬಗ್ಗೆ ಮಾತಾಡಿದ್ರೆ ನಾವು ನಿಮ್ಮ ನಾಯಕರ ಬಗ್ಗೆ ಮಾತನಾಡಬೇಕಾಗುತ್ತೇ, ನೀವು ನಮ್ಮ ನಾಯಕರ ಬಗ್ಗೆ ಸಾರ್ವಜನಿಕವಾಗಿ ಹೇಳೋಕೆ ತಯಾರಿದ್ದರೆ, ನಾವು ನಿಮ್ಮ ನಾಯಕುರಗಳ ಬಗ್ಗೆ ಸಾರ್ವಜನಿಕವಾಗಿ ಹೇಳೋದನ್ನ ಕೋಳೊಕೆ ತಯಾರ ಇರಬೇಕು ಎಂದು ಹೇಳಿದರು.

LEAVE A REPLY

Please enter your comment!
Please enter your name here