ವಿಜಯಪುರ, ಅ. 19: ನನ್ನ ವಿರುದ್ಧ ಬಿಜೆಪಿ ಟ್ವೀಟ್ ಮಾಡಿ ಆ ಪದ ಬಳಕೆ ಮಾಡಿದ್ದು, ಅವರಿಗೆ ಅನ್ವಯವಾಗುತ್ತದೆ, ಪ್ರತಿನಿತ್ಯ ಅದರ ಆಧಾರದ ಮೇಲೆ ಅವರು ನಡೆಯೋದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಅವರು ಬುಧುವಾರ ವಿಜಯಪುರ ಜಿಲ್ಲೆಯ ರಾಮಪುರ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ, ನಮ್ಮ ಪಕ್ಷದ ಬೆಳವಣಿಗೆ ಎರಡು ಪಕ್ಷಗಳಿಗೆ ಸಹಿಸಲು ಆಗ್ತಿಲ್ಲಾ, ಮುಂದಿನ ವಿಧಾನಸಭೆ ಚುನಾವಣೆ ಕಾರ್ಯಾಗಾರದ ನಂತರ ಎರಡು ಪಕ್ಷಕ್ಕೆ ಆಂತಕ ಪ್ರಾರಂಭವಾಗಲಿದೆ ಎಂದು ನುಡಿದರು.
ಬೇರೆಯವರ ಬಗ್ಗೆ ಮಾತನಾಡುವ ಬಿಜೆಪಿಯವರು ತಮ್ಮ ಮನೆಯವರ ಮನೆಯಲ್ಲಿ ಹೆಗ್ಗೆನ ಸತ್ತು ಬಿದ್ದಿದೆ ಅದರನ್ನು ಅವರು ಸ್ವಚ್ಛಗೊಳಿಸುವ ಕೆಲಸ ಮಾಡಲಿ ಎಂದು ಕಿಡಿ ಕಾರಿದರು.
ನಾನು ಕದ್ದು ಯಾವದು ಮಾಡಿಲ್ಲಾ, ನಾನು ವಿಧಾನಸಭೆ ಕಲಾಪದಲ್ಲಿಯೇ ಚರ್ಚೆ ಮಾಡಿದ್ದೇನೆ, ಜೀವನದಲ್ಲಿ ಕೆಲ ಕೆಟ್ಟ ಘಟನೆಗಳು ನಡೆದಿವೆ, ದಾರಿ ತಪ್ಪದ್ದೇ ಅದನ್ನು ಸರಿ ಮಾಡಿಕೊಂಡಿದ್ದೇನೆ ಎಂದರು.
ನನ್ನದು ತೆರೆದ ಪುಸ್ತಕ, ನಮ್ಮ ಬಂಡವಾಳ ಏನಿದ್ರು ಬಿಚ್ಚಡಲು ಹೇಳಿ, ನಾನು ರೀತಿ ಕದ್ದುಮುಚ್ಚಿ ಮಾಡಿಲ್ಲಾ, ನನ್ನಿಂದ ಸಮಾಜಕ್ಕೆ ಯಾವುದೇ ತಪ್ಪು ಆಗಿಲ್ಲಾ, ಬಿಜೆಪಿಯವರು ಒಬ್ಬರದು ಒಂದೊAದು ಇತಿಹಾಸ ಇದೆ, ಅದರ ಬಗ್ಗೆ ಎಚ್ಚರ ಇರಲಿ, ನಾನು ಯಾರ ಜೊತೆ ರಾಜೀ ಮಾಡಿಕೊಂಡಿಲ್ಲ ಎಂದರು.