ಹಾನಗಲ್, ಸಿಂದಗಿ ಎರಡು ಕಡೆ ಕಾಂಗೈ ಗೆಲುವು:ಖರ್ಗೆ ವಿಶ್ವಾಸ

0
671

ಕಲಬುರಗಿ, ಅ. 18: ಇದೇ ತಿಂಗಳು 30ರಂದು ನಡೆಯಲಿರುವ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಾದ ಹಾನಗಲ್ ಮತ್ತು ಸಿಂದಗಿಯ ಉಪ ಚುನಾವಣೆಯಲ್ಲಿ ಜಾತ್ಯಾತೀತ ಜನತಾ ದಳ ಮೊದಲ ಬಾರಿಗೆ ಎರಡು ಕಡೆ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಹಾಕಿದ್ದು, ಇದರಿಂದ ಕಾಂಗ್ರೆಸ್ ಅಭ್ಯರ್ಥಿಗೆ ಹಿನ್ನಡೆ ಆಗುತ್ತದೆ ಎಂಬುದು ತಪ್ಪು ಕಲ್ಪನೆ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ.
ಅವರಿಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ, ಈಗ ಜನ ಜಾಗೃತರಾಗಿದ್ದಾರೆ, ಜಾತ್ಯಾತೀತ ತತ್ವದ ಮೇಲೆ ಕಾಂಗ್ರೆಸ್ ನಡೆಯುತ್ತೆ ಮತ್ತು ವಿಶ್ವಾಸವನ್ನು ಇಟ್ಟಿದೆ, ಈ ಹಿನ್ನೆಲೆಯಲ್ಲಿ ಈ ಎರಡು ಕ್ಷೇತ್ರಗಳಲ್ಲಿ ಜನ ಕಾಂಗ್ರೆಸ್‌ಗೆ ಅಶೀರ್ವಾದ ಮಾಡ್ತಾರೆ ಎಂದು ತಮ್ಮ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಈ ಚುನಾವಣೆಯಲ್ಲಿ ಜಾತ್ಯಾತೀತತೆ ಇರಬೇಕಾದರೆ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು, ಅಲ್ಲದೇ ಸಂವಿಧಾನ ಉಳಿಸಬೇಕು ಎಂದು ಹೇಳಿದರು.
ದೇಶದಲ್ಲಿ ಪೆಟ್ರೋಲ್, ಡಿಜೇಲ್ ಬೆಲೆ ಹೆಚ್ಚಳ ಬಗ್ಗೆ ಮಾತನಾಡಿದ ಖರ್ಗೆ ಅವರು ಈ ಬಗ್ಗೆ ನಾವು ಹೇಳಿದ್ರೆ ಜನ ವಿರೋಧ ಪಕ್ಷದವರಾಗಿ ಹೇಳುತ್ತಾರೆ ಅಂತಾರೆ, ಕೆಲವು ಜನ ಇಂತಹ ವಿಕೃತ ಮನಸ್ಸಿನವರಿದ್ದಾರೆ, ಪೆಟ್ರೋಲ್, ಡಿಜೇಲ್ ಬೆಲೆ ನೂರು ರೂಪಾಯಿ ಆಗಲಿ ಪರವಾಗಿಲ್ಲ ಅಂತಾರೆ ಎಂದರು.
ನಮ್ಮ ಕಾಲದಲ್ಲಿ 60 ರೂ. ಪೆಟ್ರೋಲ್ ದೊರಕುತ್ತಿತ್ತು, ಇದೀಗ ಅದು ನೂರರ ಗಡಿ ದಾಟಿದರೂ ಯಾರು ಕೇಳ್ತಿಲ್ಲ ಎಂದ ಖರ್ಗೆ ಅವರು ಕಚ್ಚಾ ತೈಲ ಬೆಲೆ ಕಡಿಮೆ ಇದ್ರು ದೇಶದಲ್ಲಿ ಪೆಟ್ರೋಲ್ ಡಿಸೆಲ್ ದರ ಏರಿಕೆ ಆಗುತ್ತಿದೆ ಇದರಿಂದ ಜನಸಾಮಾನ್ಯರಿಗೆ ಹೊರೆಯಾಗುತ್ತಿದೆ ಎಂದು ನುಡಿದರು.

Total Page Visits: 893 - Today Page Visits: 1

LEAVE A REPLY

Please enter your comment!
Please enter your name here