ಸಿದ್ಧರಾಮಯ್ಯನವರಿಗೆ ಮತಿಭ್ರಮಣೆ ಆಗಿದೆ:ತೇಲ್ಕೂರ್

0
773

ಕಲಬುರಗಿ, ಅ. 18:ಇತ್ತೀಚೆಗೆ ಎಲ್ಲಡೆ ಆರ್‌ಎಸ್‌ಎಸ್ ಬಗ್ಗೆ ಹಗುರವಾಗಿ ಹಾಗೂ ಪ್ರಧಾನಿಗಳ ಬಗ್ಗೆ ಏಕ ವಚನದಲ್ಲಿ ಮಾತನಾಡುತ್ತಿರುವ ಸಿದ್ಧರಾಮಯ್ಯನವರಿಗೆ ಮತಿಭ್ರಮಣೆ ಆಗಿದೆ, ಅವರು ಅಧಿಕಾರವಿಲ್ಲದೇ ಹುಚ್ಚರಂತೆ ವರ್ತಿಸುತ್ತಿದ್ದಾರೆ ಅವರು ಕೂಡಲೇ ಹುಚ್ಚಾಸ್ಪತ್ರೆಗೆ ಸೇರೋದು ಉತ್ತಮ ಎಂ ಸೇಡಂ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜಕುಮಾರ ಪಾಟೀಲ್ ತೇಲ್ಕೂರ್ ಅವರು ಹೇಳಿದ್ದಾರೆ.

ಅವರಿಂದಿಲ್ಲಿ ಪತ್ರಿಕಾ ಭವನದಲ್ಲಿ ಮಾತನಾಡುತ್ತ, ಅಭಿವೃದ್ಧಿಯ ದೃಷ್ಟಿಯಿಂದ ಸಂಸತ್ತನಲ್ಲಿ ಹಲವಾರು ವಿಧೆಯಗಳ ಮೇಲೆ ವಿಷಯಗಳ ಬಗ್ಗೆ ಚರ್ಚೆ ಆಗುವ ಸಮಯದಲ್ಲಿ ಕಾಂಗ್ರೆಸ್‌ನವರು ಪ್ರತಿಭಟನೆ ಮಾಡುವುದು, ಸಭಾತ್ಯಾಗ ಮಾಡುವುದು ಮಾಡುವುದು ಅವರಿಗೆ ಅಭಿವೃದ್ಧಿ ಬೇಕಾಗಿಲ್ಲ, ಏನೇ ಮಾಡಿದರೂ ಕೂಡ ಅದಕ್ಕೆ ವಿರೋಧ ವ್ಯಕ್ತಪಡಿಸುವುದು ಅವರ ಅಜೆಂಡಾ ಆಗಿ ಬಿಟ್ಟಿದೆ, ಅಲ್ಲದೇ ಹೊರಗಡೆ ಎಲ್ಲಡೆ ದೇಶದ ಒಬ್ಬ ಪ್ರದಾನಮಂತ್ರಿಗಳ ಬಗ್ಗೆ ಏಕ ವಚನದಲ್ಲಿ ಮಾತನಾಡುವುದುನ್ನು ಬಿಡಬೇಕು, ಹೀಗೆ ಮುಂದುವರೆದರೆ ಸಿದ್ಧರಾಮಯ್ಯ ಸೇರಿದಂತೆ ಕೈ ನಾಯಕರ ಕಾರ್ಯಕ್ರಮಗಳಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಇವತ್ತು ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಎಲ್ಲರು ಕಾಂಗ್ರೆಸ್‌ನವರ ಕೈ ಬಿಟ್ಟಿದ್ದು, ಕೇವಲ ತುಷ್ಟೀಕರಣದ ರಾಜಕಾರಣಗೋಸ್ಕರ ಹಾಗೂ ಅಧಿಕಾರಗೋಸ್ಕರ ಈ ರೀತಿಯ ಮಾತನಾಡುತ್ತಿದ್ದಾರೆ ಎಂ ಅವರು ಒಂದು ಕಡೆ ಒಂದು ಹೇಳಿಕೆ ಕೊಟ್ಟರೆ ಇನ್ನೊಂದು ಕಡೆ ಮತ್ತೊಂದು ಹೇಳಿಕೆ ಕೊಡುತ್ತಿರಾ, ಕಾಂಗ್ರೆಸ್‌ನವರು ನೈತಿಕತೆ ಕಳೆದಕೊಂಡಿದ್ದಾರೆ ಎಂಬುದುಕ್ಕೆ ಉದಾಹರಣೆ ಲೋಕಸಭೆಯ ಕಲಾಪಗಳಾಗಿವೆ ಎಂದರು.

LEAVE A REPLY

Please enter your comment!
Please enter your name here