ಕಲಬುರಗಿ, ಅ. 16: ನಾವು ಜಾತಿ ಲೆಕ್ಕಾಚಾರದ ಮೇಲೆ ರಾಜಕೀಯ ಮಾಡಲ್ಲ, ನೀತಿ ಮೇಲೆ ರಾಜಕೀರ ಮಾಡ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ ಹೇಳಿದ್ದಾರೆ.
ಅವರಿಂದು ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ, ಅಕ್ಟೋಬರ್ 30ರಂದು ನಡೆಯಲಿರುವ ಸಿಂದಗಿ ಮತ್ತು ಹಾನಗಲ್ ಉಪ ಚುನಾವಣೆಯಲ್ಲಿ ನೂರಕ್ಕೆ ನೂರು ಪ್ರತಿಶತ ಕಾಂಗ್ರೆಸ್ ಪಕ್ಷ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಲ್ಪಸಂಖ್ಯಾತರು ಪ್ರಜ್ಞಾವಂತರಾಗಿದ್ದಾರೆ, ಯಾರಿಗೆ ಮತ ಹಾಕಿದರೆ ಉತ್ತಮ ಅನ್ನೋದು ಅವರಿಗೆ ಗೊತ್ತಿದೆ. ಇಲ್ಲಿ ಜಾತಿ ಲೆಕ್ಕಾಚಾರ ನಮ್ಮದಲ್ಲ, ಏನಿದ್ದರೂ ನೀತಿಯ ಮೇಲೆ ಕಾಂಗ್ರೆಸ್ ನಿಂತಿದೆ, ನಮ್ಮ ಪಕ್ಷ ಸುಳ್ಳು ಅಶ್ವಾಸನೆ ಕೊಡುವುದಿಲ್ಲ ಮತ್ತು ಕೊಟ್ಟಿಲ್ಲ, ಬೇರೆಯವರ ತರಹ ಪ್ರತಿಯೊಂದು ಹಂತದಲ್ಲಿ ಸುಳ್ಳಿನ ಕಂತೆಯನ್ನು ಪೋನಿಸಿ, ಜನರನ್ನು ಮರಳು ಮಾಡುತ್ತಾರೆ, ಆದರೆ ಕಾಂಗ್ರೆಸ್ ಆ ಪಟ್ಟಿಗೆ ಸೇರಿಲ್ಲ ಎಂದರು.
ಸಿಎA ಇಬ್ರಾಹಿಂ ಹೇಳಿಕೆ ವಿಚಾರವಾಗಿ ಮಾತನಾಡಿದ ಡಿಕೆಶಿ ಪ್ರಸ್ತುತ ಅವರ ಹೇಳಿಕೆ ಬಗ್ಗೆ ನಂಗೆ ಗೊತ್ತಿಲ್ಲ, ಮುಂದೆ ತಿಳಕೊಂಡು ಮಾತನಾಡ್ತೆನೆ, ಮಾಜಿ ಸಚಿವ ಮನಗೂಳಿ ಸಾಯುವ ಮೊದಲು ನನ್ನನ್ನು ಭೇಟಿ ಮಾಡಿರಲಿಲ್ಲ ಅನ್ನೋ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಡಿಕೆಶಿ ಇವತ್ತು ಮನಗೂಳಿ ಅವರು ಇಲ್ಲ, ಅವರ ಮಗ ಇದ್ದಾರೆ, ಮನಗೂಳಿ ಅವರೇ ನಮ್ಮ ಮಗನ ಜವಾಬ್ದಾರಿ ನಿಮ್ಮದು ಅಂತ ನನಗೆ ಹೇಳಿದ್ದರು. ನಿಮ್ಮ ಮಡಿಲಿಗೆ ನನ್ನ ಮಗನನ್ನು ಹಾಕಿದ್ದೇನೆ ಅಂತ ಸಾಯುವ ಮುನ್ನ ಸ್ವತಃ ಮನಗೂಳಿ ಅವರೇ ಹೇಳಿದ್ದರು ಎಂದು ಡಿಕೆಶಿ ವಿವರಿಸಿದರು.
ಇನ್ನು ಕಾಂಗ್ರೆಸ್ ಮಾಧ್ಯಮ ಸಂಯೋಜಕ ಸಲಿಂ ಹೇಳಿಕೆ ವಿಚಾಚರದ ಬಗ್ಗೆಯೂ ಪ್ರತಿಕ್ರಿಯೆ ನೀಡಲು ಡಿಕೆ ಶಿವಕುಮಾರ ನಿರಾಕರಿಸಿದರೂ, ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಹೇಳಲಾಗಿದೆ.