ಸಾಲ.. ಗಂಡ-ಹೆoಡತಿ ಜಗಳ, ಗಂಡ ವಿಷ ಸೇವಿಸಿ ಆತ್ಮಹತ್ಯೆ

0
1689

ಕಲಬುರಗಿ, ಅ. 10: ಸಾಲ… ಸಾಲ…. ಸಾಲ… ಗಂಡಸರ ಗಂಡ ಸಾಲ ಅಂತಾರೆ ಹಿರಿಯರು, ಸಾಲದ ಬಾಧೆಗೆ ಮನ, ಮನಸ್ಸು, ಕುಟಂಬಕ್ಕೂ ಒಂದು ಗಂಡಾAತರ ಎಂಬAತೆ ಇಲ್ಲೊಬ್ಬ ಸಾಲದಿಂದಾಗಿ ವಿಷ ಸೇವಿಸಿ ಆತ್ಮ ಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಶಿರನೂರ ಗ್ರಾಮದಲ್ಲಿ ನಡೆದಿದೆ.

ಅತೀಯಾದ ಮಳೆಯಿಂದಾಗಿ ಬೆಳೆ ಹಾನಿಯಾಗಿದ್ದು, ಸುಮಾರು 5 ಲಕ್ಷದಷ್ಟು ಸಾಲ ಮಾಡಿಕೊಂಡಿದ್ದ ಗಂಡ ಹೆಂಡತಿಯ ನಡುವೆ ಗಲಾಟೆಯಾಗಿ, ಇದು ವಿಕೋಪಕ್ಕೆ ಹೋಗಿ, ಹೆಂಡತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಆಕೆಯನ್ನು ಕುಟುಂಬದವರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇತ್ತ ಹೆಂಡತಿ ವಿಷ ಸೇವಿಸಿದ್ದನ್ನು ಅರಿತ ಗಂಡನು ಕೂಡ ವಿಷ ಸೇವೆಸಿ, ಮನೆಯಲ್ಲಿಯೇ ಮೃತಪಟ್ಟಿದ್ದಾನೆ.
ಗೀತಾ 29 ಎಂಬ ಮಹಿಳೆಯೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿದ್ದು, ಆಕೆಯನ್ನು ನಗರದ ಜೀಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಹೆಂಡತಿಯ ಪರಿಸ್ಥಿತಿಯನ್ನು ಅರಿತ ಗಂಡ ಬಸವರಾಜ ಅಚ್ಚಕೇರಿ (32) ಮನೆಯಲ್ಲಿಯೇ ವಿಷ ಪ್ರಾಷನ ಮಾಡಿ ಮೃತಪಟ್ಟಿ ಗಂಡನಾಗಿದ್ದಾನೆ.
ಈ ಬಗ್ಗೆ ಪರತಾಬಾದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

LEAVE A REPLY

Please enter your comment!
Please enter your name here