ನೇಣು ಬೀಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ

0
1031

ಕಲಬುರಗಿ, ಅ. 07: ಫ್ಯಾನಿಗೆ ನೇಣು ಬೀದಿದ ಸ್ಥಿತಿಯಲ್ಲಿ ಮಹಿಳೆಯ ಶವವೊಂದು ನಗರದ ಪ್ರಗತಿ ಕಾಲೋನಿಯಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಜ್ಯೋತಿ (22) ಎಂಬ ಮಹಿಳೆ ಶವವಾಗಿ ಪತ್ತೇಯಾಗಿದ್ದು, ಈ ಕೊಲೆಗೆ ಪತಿಯೇ ಕಾರಣವೆಂದು ಹೇಳಲಾಗಿದ್ದು, ಆತನೆ ತನ್ನ ಪತ್ನಿಯನ್ನು ಫ್ಯಾನಿಗೆ ನೇಣು ಹಾಕಿ ಕೊಲೆ ಮಾಡಿದ್ದಾನೆಂದಿ ಆರೋಪಿಸಲಾಗಿದೆ.
ಏಳು ತಿಂಗಳ ಹಿಂದೆಯಷ್ಟೆ ಲೋಕೇಶ ಎನ್ನವು ಜೊತೆ ಮದುವೆಯಾಗಿತ್ತು ಪತಿ ಲೋಕೇಶ ಕೆಕೆಆರ್‌ಟಿಸಿಯ ಸೇಡಂ ಡಿಪೋದಲ್ಲಿ ಚಾಲಕನಾಗಿದ್ದು, ಕಲಬುರಗಿ ನಗರದ ಪ್ರಗತಿ ಕಾಲೋನಿಯ ಬಾಡಿಗೆ ಮನೆಯೊಂದರಲ್ಲಿ ವಾಸವಾಗುತ್ತಿದ್ದರು.
ಕಳೆದ ರಾತ್ರಿ ಲೋಕೇಶ ಮತ್ತು ಅವರ ಕುಟುಂಬದವರು ಕೂಡಿ ಕತ್ತು ಹಿಸುಕಿ ಕೊಲೆ ಮಾಡಿ ನಂತರ ಶವವನ್ನು ಫ್ಯಾನಿಗೆ ನೇತು ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಮದುವೆ ಸಮಯದಲ್ಲಿ 120 ಗ್ರಾಂ. ಬಂಗಾರ, ಐದು ಲಕ್ಷ ವರದಕ್ಷಿಣೆ ನೀಡಿದ್ದರೆಂದು ಹೇಳಲಾಗಿದೆ. ಈ ಬಗ್ಗೆ ಪತಿ ಲೋಕೇಶ್ ಮತ್ತು ಅವರ ಕುಟುಂಬದವರ ವಿರುದ್ಧ ಕಲಬುರಗಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

LEAVE A REPLY

Please enter your comment!
Please enter your name here