ಕಲಬುರಗಿ, ಅ. 07: ಸಿಂದಗಿ ವಿಧಾನಸಭೆಗೆ ನಡೆಯುವ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಜೇವರ್ಗಿ ತಾಲೂಕಿಗೆ ಕಾಂಗೈ ಅಧ್ಯಕ್ಷ ಡಿ.ಕೆ. ಶಿವಕುಮಾರ ಆಗಮಿಸುತ್ತಿದ್ದಂತೆ ಡಿಕೆಶಿಗೆ ಕೇಸರಿ ಶಾಲು ಹಾಕಿ ಕೈ ಕಾರ್ಯಕರ್ತರು ಸನ್ಮಾನಿಸಿದರು.
ಈ ವೇಳೆ ಕಾರ್ಯಕರ್ತರು ಜೈಘೋಷದೊಂದಿಗೆ ಮುಂದಿನ ಸಿಎಂ ಡಿಕೆಶಿ ಎಂದು ಜೈಕಾರ ಹಾಕುತ್ತಿದ್ದಂತೆ ಸಂಭ್ರಮದಿAದ ಡಿಕಿಶಿ ಕಾರ್ಯಕರ್ತರತ್ತ ಕೈ ಬಿಸಿದರು.
ಈ ಮೂಲಕ ಮುಂದಿನ ಸಿಎಂ ಖುರ್ಚಿಗಾಗಿ ಕೈ ನಾಯಕರಲ್ಲಿ ಮುಸುಕಿನ ಗುದ್ದಾಟ ನಡೆದಂತಾಗಿದೆ.
ಸಿAದಗಿ ಉಪಚುನಾವಣೆ ಹಿನ್ನಲೆ ಕಲಬುರಗಿಯ ಜೇವರ್ಗಿ ತಾಲೂಕಿಗೆ ಡಿಕೆ.ಶಿವಕುಮಾರ್ ಆಗಮನ
ಈಗಾಗಲೇ ಮುಂದಿನ ಸಿಎಂ ಬಗ್ಗೆ ಕಾಂಗ್ರೆಸ್‌ನಲ್ಲಿ ತೀರ್ವ ಚರ್ಚೆಗಳು ನಡೆದಿದ್ದು, ಹಿಂದಿನಿAದ ಬಂದ ಚಾಳಿ ಪ್ರಕಾರ ರಾಜ್ಯದಲ್ಲಿ ಪಕ್ಷದ ಅಧ್ಯಕ್ಷರಾಗಿರುವರೇ ಪಕ್ಷ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿಯಾಗುವುದು ರೂಢಿಯಲ್ಲಿದೆ ಈ ಹಿನ್ನೆಲೆಯಲ್ಲಿ ಈಗಾಗಲೇ ಡಿಕೆಶಿ ಕಾಂಗೈ ಅಧ್ಯಕ್ಷರಾ ಗಿರುವುದರಿಂದ ಸಿಎಂ ಸ್ಥಾನಕ್ಕೆ÷ಅವರ ಹೆಸರು ಕೂಗುತ್ತಿರುವುದು ಆಶ್ಚರ್ಯವೆನಲ್ಲ.