ಸತತ ಮಳೆಗೆ ಬಳ್ಳೂರಗಿಯಲ್ಲಿ ನೂರಾರು ಎಕರೆಯ ಕಬ್ಬು ಬಾಳೆ ನಾಶ

0
542

ಕಲಬುರಗಿ, ಅ. 06: ಸತತವಾಗಿ 15 ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಜಿಲ್ಲೆಯಾದ್ಯಂತ ಬೆಳೆಗಳಗೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದ್ದು, ಮಳೆಯಿಂದಾಗಿ ಅಫಜಲಪೂರ ತಾಲೂಕಿನಲ್ಲಿ ಮಳೆಗೆ ಬಾಳೆ, ಕಬ್ಬು ನೆಲ ಕಚ್ಚಿದೆ.

ಅಫಜಲಪುರ ತಾಲೂಕಿನ ಬಳ್ಳೂರಗಿ ಗ್ರಾಮದದಲ್ಲಿ ಈ ಘಟನೆ ನಡೆದಿದ್ದು, ಇಲ್ಲಿ 100 ಎಕರೆಗೂ ಅಧಿಕ ಕಬ್ಬು 60 ಎಕರೆಗೂ ಅಧಿಕ ಬಾಳೆ ನೆಲ ಸಮವಾಗಿದೆ.

ಅಪಾರ ಪ್ರಮಾಣದಲ್ಲಿ ಬೆಳಿ ಹಾನಿಯಾಗಿದ್ದು, ರೈತರು ಕಂಗಾಲಾಗಿದ್ದಾರೆ, ಸಾಲ ಸೂಲ ಮಾಡಿ ಬೆಳೆ ಬೆಳೆದ ರೈತರು ಸರಕಾರ ತಮ್ಮ ನೆರವಿಗೆ ಬರುವಂತೆ ಅಂಗಲಾಚುತ್ತಿರುವ ರೈತರ ನೆರವಿಗೆ ಈವರೆಗೂ ಯಾರು ಕೂಡ ಅಧಿಕಾರಿಗಳು ಬರದಿರುವುದು ರೈತರಲ್ಲಿ ಮತ್ತಷ್ಟು ಆತಂಕ ಮೂಡಿದೆ.
ಸರಕಾರ ನೆರವಿಗೆ ಬರದಿರುವುದರಿಂದ ಇಲ್ಲಿ ಸಾಯುವದು ಒಂದು ಉಳಿದ ದಾರಿಯಾಗಿದೆಎಂದು ರೈತರು ಗೋಳಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here