ಪ್ರಧಾನಿ ಮೋದಿ ಚಿಲ್ಲರೆ ಮನುಷ್ಯ ಅಲ್ಲ, ಮೋದಿ ಅಪ್ಪಟ ಚಿನ್ನದ ಗಟ್ಟಿ:ಈಶ್ವರಪ್ಪ

0
634

ಕಲಬುರಗಿ, ಅ. 04: ಪ್ರಧಾನಿ ನರೇಂದ್ರ ಮೋದಿ ಚಿಲ್ಲರೆ ಮನುಷ್ಯ ಅಲ್ಲ, ಅಪ್ಪಟ ಚಿನ್ನದ ಗಟ್ಟಿಯಾಗಿದ್ದಾರೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ತುಂಬಾ ಗೌರವ ಇದೆ, ಖರ್ಗೆ ಅಂದ್ರೇ ಸುಮ್ ಸುಮ್ಮನೆ ಮಾತಾಡೋರಲ್ಲ, ಆದರೆ ನಿನ್ನೆ ವಿಶ್ವವೇ ಮೆಚ್ಚಿದ ನಾಯಕ ಮೋದಿ ಬಗ್ಗೆ ಹಗುರವಾಗಿ ಮಾತನಾಡಿದ್ದು, ವಿಶ್ವನಾಯಕರ ಬಗ್ಗೆ ಈ ರೀತಿ ಮಾತನಾಡಿದರೇ ವಿಶ್ವದ ಜನ ಏನಂತಾರೆ ಎಂದು ಪ್ರಶ್ನಸಿದ ಈಶ್ವರಪ್ಪ ಮೋದಿ ಬಗ್ಗೆ ಚಿಲ್ಲರೆ ಶಬ್ಧ ಬಳಿಸಿ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದರು.
ವಿಶ್ವ ಸಂಸ್ಥೆಯಲ್ಲಿ ಭಾರತಕ್ಕೆ ಖಾಯಂ ಭದ್ರತಾ ಸದಸ್ಯತ್ವ ಸಿಕ್ಕಿದೆ, ಈ ಹಿಂದಿನ ಪ್ರಧಾನಿಗಳು ವಿದೇಶಕ್ಕೆ ಹೋದಾಗಿ ಸಾಲ ಕೇಳಲು ಭಾರತದ ಪ್ರಧಾನಿ ಬಂದಿದ್ದಾರೆ ಅಂತಿದ್ದರು. ಆದರೆ ಈಗ ಮೋದಿಜೀಯವರ ಬಂದ ಮೇಲೆ ಅದರ ಖದರೆ ಬೇರೆಯಾಗಿದೆ, ಇಡೀ ವಿಶ್ವಕ್ಕೆ ಮೋದಿ ಮೆಚ್ಚುವಂತಹ ನಾಯಕನಾಗಿದ್ದಾರೆ ಎಂದರು.
ಕೇAದ್ರ ಸಂಪುಟದಲ್ಲಿ 27 ಜನ ದಲಿತರಿಗೆ ಸಚಿವ ಸ್ಥಾನವನ್ನು ಮೋದಿ ನೀಡಿದ್ದಾರೆ ಎಂದ ಈಶ್ವರಪ್ಪ ಖರ್ಗೆಯವರೇ ರಾಜ್ಯದಲ್ಲಿ 27 ಸಂಸದರನ್ನು ಆಯ್ಕೆ ಮಾಡಿದ್ದು, ಮೋದಿಜಿಯವರ ನಾಯಕತ್ವದಲ್ಲಿ ಅನ್ನೊದು ಮರೆಯಬೇಡಿ, ಅವರಿಗೆಲ್ಲ ಆಯ್ಕೆ ಮಾಡಿದ ಜನರು ಚೆಲ್ಲರೆನಾ? ಎಂದು ಪ್ರಶ್ನಸಿದರು.

LEAVE A REPLY

Please enter your comment!
Please enter your name here