ಈ ಬಾರಿಯೂ ತುಳಜಾಪುರ ದೇವಿ ಜಾತ್ರಾ ಮಹೋತ್ಸವ ರದ್ದು

0
1202
तुलजा भवानी मंदिर | Tulja Bhavani Temple | अर्था - YouTube

ತುಳಜಾಪುರ, ಅ. 04: ಈ ಬಾರಿಯೂ ಸಹ ಮಹಾರಾಷ್ಟ್ರದ ಶಕ್ತಿದೇವತೆ ತುಳಜಾಪೂರ ಅಂಬಾಭವಾನಿ ದೇವಿ ಜಾತ್ರಾ ಮಹೋತ್ಸವ ರದ್ದುಗೊಳಿಸಿ ಉಸ್ಮನಾಬಾದ ಜಿಲ್ಲಾಧಿಕಾರಿಗಳು ಆದೇಶ ಜಾರಿ ಮಾಡಿದ್ದಾರೆ.
ಮಹಾರಾಷ್ಟ್ರದ ಉಸ್ಮಾನಾಬಾದ ಜಿಲ್ಲೆಯಲ್ಲಿರುವ ಪ್ರಸಿದ್ದ ತುಳಜಾಪೂರ ಕ್ಷೇತ್ರದಲ್ಲಿ ಸೀಗೆ ಹುಣ್ಣಿಮೆಯ ದಿನ ನಡೆಯುವ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದರು, ಆದರೆ ಕೋವಿಡ್ ಕಾರಣದಿಂದಾಗಿ ಈ ಬಾರಿಯೂ ಕೂಡ ಭಕ್ತರು ಆಗಮಿಸದಂತೆ ನಿಷೇಧ ವಿಧಿಸಲಾಗಿದೆ.
ಅಂಬಾಭವಾನಿ ದರ್ಶನಕ್ಕೆ ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣದಿAದ ಹುಣ್ಣಿಮೆಯ ದಿನ ಲಕ್ಷಾಂತರ ಭಕ್ತರು ಜಮಾವಣೆಗೊಳ್ಳಲಿರುವ ಹಿನ್ನೆಲೆಯಲ್ಲಿ ಮಹಾರಾಷ್ಟçದಲ್ಲಿ ಇನ್ನು ಕೊರೊನಾ ಸೋಂಕು ಇದ್ದ ಹಿನ್ನೆಲೆಯಲ್ಲಿ ಕೋವಿಡ್ ಕಾರಣಕ್ಕೆ ಈ ಬಾರಿ ಹುಣ್ಣಿಮೆಯ ದಿನದ ಜಾತ್ರೆ ರದ್ದುಗೊಳಿಸಲಾಗಿದೆ.
ಅಕ್ಟೋಬರ್ 18 ರಿಂದ 20 ರವರೆಗೆ ತುಳಜಾಪೂರ ನಗರ ಪ್ರವೇಶಕ್ಕೆನೇ ನಿಷೇಧ ವಿಧಿಸಲಾಗಿದೆ. ಅಕ್ಟೋಬರ್ 7 ರಿಂದ ಅ.17 ರವರೆಗೆ ಎರಡೂ ಡೋಸ್ ವಾಕ್ಸಿನ್ ಪಡೆದವರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದ್ದು, ದೇವಾಲಯ ಪ್ರವೇಶಕ್ಕೆ ಆನ್‌ಲೈನ್‌ನಲ್ಲಿಯೇ ಟಿಕೆಟ್ ಕಡ್ಡಾಯವಾಗಿ ಬುಕ್ ಮಾಡಬೇಕೆಂದು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

LEAVE A REPLY

Please enter your comment!
Please enter your name here