ಕಲಬುರಗಿ, ಸೆ. 29: ಪಾರ್ಕನಲ್ಲಿ ಆಟ ಆಡುತ್ತಿರುವಾಗ ವಿದ್ಯುತ್ ತಂತಿ ತಗುಲಿ ಬಾಲಕನೋರ್ವ ಸಾವನ್ನಪ್ಪಿದ ಘಟನೆ ವರದಿಯಾಗಿದೆ.
ನಗರದ ಎನ್.ಜಿ.ಓ. ಕಾಲೋನಿಯ ಮಹಾದೇವಿ ಸುರೇಶ ದಂಪತಿಗಳ ಪುತ್ರ ಸಿದ್ದು ಎಂಬ 6 ವರ್ಷದ ನೃತದೃಷ್ಟ ಬಾಲಕನೆ ವಿದ್ಯುತ್ ತಂತಿ ತಗಲು ಮೃತಪಟ್ಟವನ್ನಾಗಿದ್ದಾನೆ.
ಕಲಬುರಗಿ ನಗರದ ಎನ್.ಜಿ.ಓ. ಕಾಲೋನಿಯ ಹನುಮಾನ ಮಂದಿರದ ಉದ್ಯಾನವನದಲ್ಲಿನ ಹೈ ಮಾಸ್ಕ್ ದೀಪದ ವಿದ್ಯುತ್ ವೈರ್ ಕಟ್ ಆಗಿ ಬಿದ್ದ ಹಿನ್ನೆಲೆಯಲ್ಲಿ ಈ ಘಟನೆ ಸಂಭವಿಸಿದೆ.
ಆಟವಾಡುತ್ತಿದ್ದ ಬಾಲಕ ಆಕಸ್ಮಾತಾಗಿ ವಿದ್ಯುತ್ ತಂತಿ ತುಳಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಪಾಲಿಕೆಯಡಿಯಲ್ಲಿ ಬರುವ ಈ ಹೈ ಮಾಸ್ಕ್ ದಿಂದಾಗಿ ಸಾವನ್ನಪ್ಪಿದ್ದ ಘಟನೆ ಬಗ್ಗೆ ಖೇದ ವ್ಯಕ್ತ ಪಡಿಸಿದ ಮಹಾನಗರಪಾಲಿಕೆಯ ಆಯುಕ್ತರಾದ ಸ್ನೇಹಾಲ್ ಲೋಖಂಡೆ ಅವರು ಈ ಬಗ್ಗೆ ಮಾತನಾಡಿ, ಅಕಸ್ಮಾತಾಗಿ 6 ವರ್ಷದ ಬಾಲಕ ಆಟ ಆಡುವಾಗ ಅರ್ಥಿಂಗ್ ಕೆಬಲ್ ಮೇಲೆ ಮತ್ತು ಜಂಕ್ಷನ ಬಾಕ್ಸ್ಗೆ ಕೈ ಇಟ್ಟಿದ್ದರಿಂದ ಈ ಘಟನೆ ಸಂಭವಿಸಿದ್ದು, ಮೃತಪಟ್ಟ ಬಾಲಕನ ಪಾಲಕರೊಂದಿಗೆ ಮಾತನಾಡಿದ್ದು, ಅವರಿಗೆ ಸಾಂತ್ವನ ಹೇಳಿದ್ದಲ್ಲದೇ ಪರಿಹಾರ ಕೊಡುವ ಬಗ್ಗೆ ಮಾತನಾಡಿದ್ದಾಗಿ ನಮ್ಮ ಪತ್ರಿನಿಧಿಯೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಈ ಘಟನೆ ನಮ್ಮ ಮನಸ್ಸಿಗೆ ತುಂಬಾ ನೋವಾಗಿದೆ ಎಂದು ಸಹ ಆಯುಕ್ತರು ತಮ್ಮ ಖೇದವನ್ನು ವ್ಯಕ್ತಪಡಿಸಿದ್ದಾರೆ.