ಕಲಬುರಗಿ ಜಿಲ್ಲೆಯಲ್ಲಿ ಕಾಲರಾ ರೋಗಕ್ಕೆ ಇಬ್ಬರು ಮಹಿಳೆಯರು ಬಲಿ

0
1007

ಕಲಬುರಗಿ, ಸೆ. 29:ಕಳೆದ ಎರಡು ವರ್ಷಗಳಿಂದ ಕಾಡುತ್ತಿರುವ ಮಾರಕ ಸೋಂಕು ಕರೊನಾದಿಂದ ತತ್ತರಿಸಿರುವ ಜನತೆಗೆ ಮತ್ತೊಂದು ಶಾಕ್ ಬಂದೋಗಿದ್ದು, ಢಂಗು, ಕಾಲರಾ ರೋಗಕ್ಕೆ ಜನ ತುತ್ತಾಗುತ್ತಿದ್ದು, ಜಿಲ್ಲೆಯಲ್ಲಿ ಕಾಲರಾ ರೋಗಕ್ಕೆ ಇಬ್ಬರು ಬಲಿಯಾದ ಘಟನೆ ವರದಿಯಾಗಿದೆ.

ಕಮಲಾಪೂರ ತಾಲೂಕಿನ ದಸ್ತಾಪೂರ ಗ್ರಾಮದ ಕಮಲಾಬಾಯಿ ಕೊಬ್ರೆ (48) ಮತ್ತು ನಾಗೂರ ಗ್ರಾಮದ ದ್ರೌಪದಿ (55) ಎಂಬ ಇಬ್ಬರು ಮಹಿಳೆಯರು ಕಾಲರಾ ರೋಗಕ್ಕೆ ಬಲಿಯಾಗಿದ್ದಾರೆ.

ದ್ರೌಪದಿ ಕಳೆದ ಕೆಲ ದಿನಗಳಿಂದ ದಸ್ತಾಪೂರ ಗ್ರಾಮದಲ್ಲಿಯೇ ವಾವಾಗಿದ್ದಳು, ಗ್ರಾಮದಲ್ಲಿ ಕಾಲರಾ ರೋಗಕ್ಕೆ ಇನ್ನಷ್ಟು ಜನ ತುತ್ತಾಗಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Total Page Visits: 1603 - Today Page Visits: 1

LEAVE A REPLY

Please enter your comment!
Please enter your name here