

ಕಲಬುರಗಿ:, ಸೆ.28: ಸಮಾಜದಲ್ಲಿನ ಕಟ್ಟ ಕಡೆಯ ವ್ಯಕ್ತಿಗೂ ಶಿಕ್ಷಣ ದೊರಕಬೇಕೆಂಬುದು ಸರ್ಕಾರದ ಸಂಕಲ್ಪ, ಈ ದಿಶೆಲ್ಲಿ ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿರುವ ಎಲ್ಲಾ ಮೋರಾರ್ಜಿ ಶಾಲೆಗಳಿಗೆ ಮೂಲ ಸವಲತ್ತು ಒದಗಿಸಲು ತಾವು ಉತ್ಸುಕರಾಗಿದ್ದಾಗಿ ಹೇಳಿರುವ ರಾಜ್ಯದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಜೇವರ್ಗಿ ತಾಲೂಕಿನಲ್ಲಿರುವ ಮಂಜೂರಾದAತಹ ಎಲ್ಲಾ ಮೋರಾರ್ಜಿ ಶಾಲೆಗಳಿಗೆ ಸ್ವಂತ ಕಟ್ಟಡ ಹೊಂದಲು ಅಗತ್ಯಕ್ಕೆ ತಕ್ಕಂತೆ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಜೇವರ್ಗಿ ತಾಲೂಕಿನ ನೆಲೋಗಿಯಲ್ಲಿ 24 ಕೋಟಿ ರು ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ನೂತನ ಕಟ್ಟಡವನ್ನು ಉದ್ಘಾಟಿಸಿದ ನಂತರ ಶಾಲಾ ಅಂಗಳದಲ್ಲೇ ಆಯೋಜಿಸಲಾಗಿದ್ದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
ಇಲ್ಲಿನ ಶಾಸರಾದ ಡಾ. ಅಜಯ್ ಸಿಂಗ್ ಪ್ರಸ್ತಾಪಿಸಿರುವಂತೆಯೇ ಜೇವರ್ಗಿಯಲ್ಲಿ ಈಗಾಗಲೇ ಮಂಜೂರಾಗಿರುವ, ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ವಸತಿ ಶಾಲೆಗಳಿಗೆ ಬರುವ ದಿನಗಳಲ್ಲಿ ಅಗತ್ಯ ಅನುದಾನ ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ಸಂಬAಧಪಟ್ಟ ಜಿಲ್ಲಾಧಿಕಾರಿಗಳಿಗೆ ಮಾತನಾಡಿ ಭೂ ಸ್ವಾಧೀನಕ್ಕೆ ಹಾಗೂ ಕಟ್ಟಡ ನಿರ್ಮಾಣಕ್ಕೆ ಅದೆಷ್ಟು ಹಣ ಬೇಕು ಎಂಬುದನ್ನು ಅಂದಾಜು ಪ್ರಸ್ತಾವನೆ ತರಿಸಿ ಅನುಮೋದನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಸರಕಾರದ ಯೋಜನೆಗಳಲ್ಲಿ ಜನರ ಸಹಭಾಗಿತ್ವ ಮುಖ್ಯ. ಅದನ್ನು ನೆಲೋಗಿ ಜನ ಸಾಧಿಸಿ ತೋರಿಸಿದ್ದೀರಿ ಎಂದು ನೆಲೋಗಿ ಶಾಲಾ ಕಟ್ಟಡದ ಬಗ್ಗೆ ಮೆಚ್ಚುಗೆ ಮಾತನ್ನಾಡಿದ ಸಚಿವರು ಧರಂಸಿAಗ್ ಅವರ ಬಗ್ಗೆ ತಮಗೆ ಅಪಾರ ಗೌರವವಿದೆ. ಹೀಗಾಗಿಯೇ ಜೇವರ್ಗಿ ಹಾಗೂ ನೆಲೋಗಿ ಎಂದರೆ ತಮಗೆ ಹೆಮ್ಮೆ ಎಂದರಲ್ಲೆ ತಮ್ಮ ಮಾತುಗಳಲ್ಲಿ ದಿ. ಧರಂಸಿoಗ್ ಹಾಗೂ ತಮ್ಮ ನಡುವಣ ಒಡನಾಟ ಸ್ಮರಿಸಿದರು.