ಕಲಬುರಗಿ, ಸೆ. 24: ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಗರದ ಅಕ್ಕಮಹಾದೇವಿ ಕಾಲೋನಿಯಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಸಂತೋಷ ಕಾಲೋನಿ ನಿವಾಸ 38 ವರ್ಷದ ಗುರುರಾಜ ತಂದೆ ಗೋಪಾಲರಾವ ಕುಲಕರ್ಣಿ ಎಂಬ ಯುವಕನನ್ನೆ ಕೊಲೆ ಮಾಡಲಾಗಿದೆ.
ಕೊಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲವಾದರೂ ಹಳೆ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರಬಹುದೆಂದು ಪೋಲಿಸರ ಶಂಕೆಯಾಗಿದೆ.
ಈ ಹಿಂದ ಪ್ರಕರಣವೊಂದರಲ್ಲಿ ಅವಧೂತ ಎಂಬುವರ ಮೇಲೆ ಕೊಲೆಯಾದ ಗುರುರಾಜ ದೂರು ನೀಡಿದ್ದರು, ಆಗ ಪೋಲಿಸರು ಹುಡುಕಾಟ ನಡೆಸಿದರೂ ಅವದೂತ ಸಿಗದೇ ತಪ್ಪಿಸಿಕೊಂಡು ನಂತರ ನ್ಯಾಯಾಲಯದಿಂದ ಜಾಮೀನು ಪಡೆದಿದ್ದ ಎಂದು ಹೇಳಲಾಗಿದೆ.
ಇಲ್ಲಿಯವರೆಗೆ ಯಾರು ಕೂಡ ಕೊಲೆಯ ಸಂಶಯದ ಬಗ್ಗೆ ದೂರು ನೀಡಿಲ್ಲ, ಮೃತ ದೇಹವನ್ನು ಪೋಸ್ಟಮಾರ್ಟಂ ಗಾಗಿ ಸರಕಾರಿ ಆಸ್ಪತ್ರೆಯ ಶವಾಗೃಹಕ್ಕೆ ಸಾಗಿಸಲಾಗಿದೆ.
ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿದ ಗ್ರಾಮೀಣ ಪೋಲಿಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಮುಂದುವರೆಸಿದ್ದಾರೆ.