ಕಲಬುರಗಿ ಪಾಲಿಕೆ ಮೇಯರ್ ಫೈಟ್ ಬಿಜೆಪಿ ಸೇರಿದ ಪಕ್ಷೇತರ ಸದಸ್ಯ ಬಳಬಟ್ಟಿ

0
1311

ಕಲಬುರಗಿ, ಸೆ. 23: ಇತ್ತೀಚೆಗೆ ಜರುಗಿದ ಕಲಬುರಗಿ ಮಹಾನಗರಪಾಲಿಕೆಯ ಚುನಾವಣೆಯಲ್ಲಿ ನಗರದ ವಾರ್ಡ ನಂ. 36 ರಿಂದ ಸ್ಪರ್ಧಿಸಿ ಗೆದ್ದ ಬಿಜೆಪಿ ಬಂಡಾಯ ಅಭ್ಯರ್ಥಿ ಶಂಭುಲಿAಗ ಬಳಬಟ್ಟಿ ಅವರು ಇಂದು ಅಧಿಕೃತವಾಗಿ ಭಾರತೀಯ ಜನತಾ ಪಕ್ಷ ಸೇರ್ಪಡೆಗೊಂಡಿದ್ದಾರೆ.
ಬೆAಗಳೂರಿನಲ್ಲಿAದು ಬಿಜೆಪಿ ಶಾಸಕರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಸೇಡಂ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ್, ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ರೇವುರ, ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ರದ್ದೇವಾಡಿ ಅವರುಗಳ ನೇತೃತ್ವದಲ್ಲಿ ಬಿಜೆಪಿ ಸೇರಿದರು.
55 ಸದಸ್ಯ ಬಲದ ಕಲಬುರಗಿ ಮಹಾನಗರಪಾಲಿಕೆಯಲ್ಲಿ ಬಿಜೆಪಿ 23 ಸ್ಥಾನಗಳನ್ನು ಹೊಂದಿದ್ದು ಈಗ ಬಳಟ್ಟಿ ಅವರೆ ಸೇರ್ಪಡೆಯಿಂದಾಗಿ ಅದರ ಸಂಖ್ಯೆ ಏರಿಕೆಯಾಗಿ 24ಕ್ಕೆ ಆಗಿದ್ದು, ಮೇಯರ್ ಚುನಾವಣೆಯಲ್ಲಿ ಗೆಲ್ಲಬೇಕಾದರೆ 32 ಮ್ಯಾಜಿಕ್ ನಂಬರ ಆಗಿದ್ದು, ಬಿಜೆಪಿ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಸೇರಿದತೆ ಅದರ ಬಲ 30ಕ್ಕೆ ಏರಿದೆ.
ಇತ್ತ ಕಾಂಗ್ರೆಸ್ 27 ಸದಸ್ಯರು ಹೊಂದಿದ್ದು, ಆ ಪಕ್ಷದ ಶಾಸಕ ಓರ್ವ ರಾಜ್ಯಸಭಾ ಸದಸ್ಯ ಸೇರಿದರೆ ಅದರ ಬಲ 29 ಆಗಲಿದೆ.
ಒಂದಕ್ಕಿಯಲ್ಲಿ ಕೇವಲ 4 ಸ್ಥಾನ ಪಡೆದರೂ ಕೂಡ ಕಿಂಗ್ ಮೇಕರ್ ಸ್ಥಾನದಲ್ಲಿರುವ ಜೆಡಿಎಸ್ ಒಲವಿನ ಮೇಲೆ ಯಾದು ಕಲಬುರಗಿ ಮಹಾನಗರ ಪಾಲಿಕೆಯ ಮೇಯರ್ ಎಂಬುದು ನಿಗೂಢವಾಗಿದೆ.

ಕಳೆದ ದಿನಾಂಕ 20ರಂದು ವಿಧಾನ ಸಭೆಯಲ್ಲಿ ಮೇಯರ್ ಚುನಾವಣೆಯ ಬಗ್ಗೆ ಸದನದಲ್ಲಿ ನಿರ್ಣಯ ಮಂಡನೆಯಾಗಿ ಪಾಸ್ ಆಗಿದ್ದು, ಆದರೂ ಇಲ್ಲಿಯವರೆಗೂ ಮೇಯರ್ ಚುನಾವಣೆ ನಡೆಸಲು ಸರಕಾರ ದಿನಾಂಕ ಮಾಡದ ಹಿನ್ನೆಲೆಯಲ್ಲಿ ತೆರೆಮರೆಯಲ್ಲಿ ಚರ್ಚೆಗಳು ನಡೆಯುತ್ತಿವೆ.
ಮೇಯರ್ ಚುನಾವಣೆ ದಿನಾಂಕ ಘೋಷಣೆ ಬಳಿಕ ಯಾರಿಗೆ ಬೆಂಬಲ ನೀಡಬೇಕು ಎನ್ನುವುದರ ಬಗ್ಗೆ ಜೆಡಿಎಸ್ ನಿರ್ಧಾರ ಮಾಡಲಿದೆ.
ಆಯುಕ್ತರ ಸ್ಪಷ್ಟನೆ :
ಕಲಬುರಗಿ ಸೇರಿದಂತೆ ರಾಜ್ಯದ ಮೂರು ಮಹಾನಗರಪಾಲಿಕೆಗಳಿಗೆ ಚುನಾವಣೆ ನಡೆದು ಎರಡು ವಾರಗಳು ಗತಿಸಿದರೂ ಮೇಯರ್ ಚುನಾವಣೆಯ ಅಧಿಸೂಚನೆ ಹೊರಡಿಸಲಾಗಿಲ್ಲ, ಈ ಬಗ್ಗೆ ಕಲಬುರಗಿ ಪಾಲಿಕೆಯ ಆಯುಕ್ತ ಸ್ನೇಹಲ್ ಲೋಖಂಡೆ ಅವರೊಂದಿಗೆ ಮಾತನಾಡಿದಾಗ ಚುನಾವಣೆ ಅಧಿಸೂಚನೆ ಹೊರಡಿಸಿರಬಹದು ಆದರೆ ಇನ್ನು ಅದು ನಮ್ಮ ಕೈ ಸೇರಿಲ್ಲ, ಕೈ ಸೇರಿದ ಕೂಡಲೇ ದಿನಾಂಕ ಪ್ರಕಟಿಸುವುದಾಗಿ ಸ್ಪಷ್ಟಪಡಿಸಿದರು.
ಒಟ್ಟಿನಲ್ಲಿ ಪಾಲಕೆಯಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಲು ಬಿಜೆಪಿ ಕಾಂಗೈ ತೀವ್ರ ಪೈಪೋಟಿಯ ನಡೆದಿದೆ.

LEAVE A REPLY

Please enter your comment!
Please enter your name here